ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ನ್ಯೂಜಿಲ್ಯಾಂಡ್‍‍ನ ಏರ್ ನ್ಯೂಜಿಲೆಂಡ್ ಒಮ್ಮೆ ಬೋಯಿಂಗ್ 777 ವಿಮಾನವನ್ನು ದಿ ಲಾರ್ಡ್ ಆಫ್ ದಿ ರಿಂಗ್ಸ್‌ನ ದೊಡ್ಡ ಜಾಹೀರಾತಿಗಾಗಿ ಬಳಸಿತ್ತು. ಜೋಹಾನ್ಸ್‌ಬರ್ಗ್ ಮೂಲದ ಮ್ಯಾಂಗೋ ಏರ್‍‍ಲೈನ್ಸ್ ಗಾಢವಾದ ಕಿತ್ತಳೆ ಬಣ್ಣವನ್ನು ಬಳಸಿದರೆ, ಸೈಬೀರಿಯನ್ ವಿಮಾನವಾದ ಎಸ್ 7 ತನ್ನ ವಿಮಾನಗಳಿಗೆ ಲೈಮ್ ಗ್ರೀನ್ ಬಣ್ಣವನ್ನು ನೀಡಿದೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಸೂಪರ್ ಸಾನಿಕ್ ವೇಗದ ಪ್ರಯಾಣದಿಂದ ಉತ್ಪತ್ತಿಯಾಗುವ ಶಾಖವನ್ನು ತಡೆದುಕೊಳ್ಳಲು ಕಾನ್ ಕಾರ್ಡ್ ವಿಮಾನಕ್ಕೆ ವಿಶೇಷವಾದ ಹೆಚ್ಚು ಪ್ರಕಾಶಮಾನದ ಬಿಳಿ ಬಣ್ಣವನ್ನು ಬಳಿಯಲಾಗುತ್ತದೆ. ಆದರೆ ಬಹುಪಾಲು ಪ್ರಯಾಣಿಕರ ವಿಮಾನಗಳು ಬಿಳಿ ಬಣ್ಣವನ್ನು ಏಕೆ ಹೊಂದಿರುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಿಳಿ ಬಣ್ಣವು ವಿಮಾನವನ್ನು ತಂಪಾಗಿರಿಸುತ್ತದೆ

ವಿಮಾನವು ಬಿಳಿ ಅಥವಾ ತಿಳಿ ಬಣ್ಣವನ್ನು ಹೊಂದಲು ಮುಖ್ಯ ಕಾರಣವೆಂದರೆ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವುದು. ಬಿಳಿ ಬಣ್ಣವು ತಾಪಮಾನ ಹಾಗೂ ಸೌರ ವಿಕಿರಣದಿಂದ ಉಂಟಾಗುವ ಯಾವುದೇ ಹಾನಿಯನ್ನು ಕಡಿಮೆ ಮಾಡುತ್ತದೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಸೂರ್ಯನ ಶಾಖದಿಂದ ರಕ್ಷಣೆ ನೀಡಲು ವಿಮಾನಗಳನ್ನು ಪ್ಲಾಸ್ಟಿಕ್ ಹಾಗೂ ಕಾರ್ಬನ್ ಫೈಬರ್, ಫೈಬರ್ ಗ್ಲಾಸ್‍‍‍ನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ. ಆದ್ದರಿಂದ ವಿಮಾನದ ಮುಂಭಾಗದ ಕೋನ್, ವಿಮಾನ ರಾಡಾರ್ ಇರಿಸಲಾಗಿರುವ ಭಾಗಗಳು, ಸಂಯೋಜಿತ ವಸ್ತುಗಳಿಂದ ಮಾಡಲ್ಪಟ್ಟ ಕಂಟ್ರೋಲ್ ಸರ್ಫೇಸ್‍‍ಗಳು ಬಿಳಿ ಅಥವಾ ತಿಳಿ ಬೂದು ಬಣ್ಣವನ್ನು ಹೊಂದಿರುತ್ತವೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಕಡಿಮೆ ಖರ್ಚು

ಬೇರೆ ಬಣ್ಣಗಳನ್ನು ಬಳಸುವುದರಿಂದ ವಿಮಾನದ ತೂಕವು ಹೆಚ್ಚಾಗುತ್ತದೆ. ಇದರಿಂದ ವಿಮಾನದ ತೂಕವು 273 ಕೆ.ಜಿಗಳಿಂದ 544 ಕೆ.ಜಿಗಳವರೆಗೆ ಹೆಚ್ಚಾಗುತ್ತದೆ. ವಿಮಾನದ ತೂಕವು ಹೆಚ್ಚುವುದರಿಂದ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸ ಬೇಕಾಗುತ್ತದೆ. 544 ಕೆಜಿ ತೂಕವು ಸುಮಾರು ಎಂಟು ಪ್ರಯಾಣಿಕರಿಗೆ ಸಮನಾಗಿರುತ್ತದೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಇದರ ಜೊತೆಗೆ ಬೇರೆ ಬಣ್ಣವನ್ನು ಬಳಿಯಲು ಬಹಳಷ್ಟು ಹಣ ಖರ್ಚಾಗುತ್ತದೆ. ವಿಮಾನವನ್ನು ರಿಪೇಂಟ್ ಮಾಡುವುದರಿಂದಲೂ ಹೆಚ್ಚು ಖರ್ಚಾಗುತ್ತದೆ. ವಿಮಾನವನ್ನು ರಿಪೇಂಟ್ ಮಾಡಲು ಸುಮಾರು 50,000 ಡಾಲರ್‍‍ನಿಂದ 2,00,000 ಡಾಲರ್ (ಭಾರತದ ರೂಪಾಯಿ ಮೌಲ್ಯದಲ್ಲಿ 35 ಲಕ್ಷದಿಂದ 1.50ಕೋಟಿಗಳವರೆಗೆ) ಖರ್ಚಾಗುತ್ತದೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನವನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುತ್ತವೆ. ವಿಮಾನಗಳನ್ನು ಖರೀದಿಸುವ ಕಂಪನಿಗಳು ಬಣ್ಣಗಳಿಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಬಿಳಿ ಬಣ್ಣವಿದ್ದರೆ ಈ ರೀತಿಯ ಸಮಸ್ಯೆಗಳಿರುವುದಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಸುಲಭವಾಗಿ ಗೋಚರಿಸುತ್ತದೆ

ವಿಮಾನಗಳು ಬಿಳಿ ಬಣ್ಣವನ್ನು ಹಾಗೂ ಗಾಢವಾದ ಬಣ್ಣವನ್ನು ವಿಮಾನಗಳ ಎಕ್ಸ್ ಟಿರಿಯರ್‍‍ಗಳಿಗೆ ಅಳವಡಿಸುವುದರಿಂದ ಅವುಗಳು ಸುಲಭವಾಗಿ ಕಣ್ಣಿಗೆ ಬೀಳುತ್ತವೆ. ಇದರಿಂದಾಗಿ ಪಕ್ಷಿಗಳು ವಿಮಾನಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಈ ಸಂಶೋಧನಾ ವರದಿಯನ್ನು 2011ರಲ್ಲಿ ಅಮೇರಿಕಾದ ಜರ್ನಲ್ ಹ್ಯುಮನ್ ವೈಲ್ಡ್ ಲೈಫ್ ಇಂಟರಾಕ್ಷನ್‍‍‍ನಲ್ಲಿ ಪ್ರಕಟಿಸಲಾಗಿತ್ತು. ಇದರರ್ಥ ವಿಮಾನಗಳು ಗಾಢವಾದ ಬಣ್ಣವನ್ನು ಹೊಂದಿದ್ದರೆ ಅಪಾಯಕಾರಿ ಎಂಬುದಲ್ಲ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಎರಡನೆಯ ಮಹಾಯುದ್ಧದ ನಂತರ, ಹೆಚ್ಚಿನ ವಿಮಾನಗಳ ಹೊರಭಾಗಕ್ಕೆ ಪೇಂಟ್ ಮಾಡದೇ ಹಾಗೆಯೇ ಬಿಡಲಾಯಿತು. ಕೆಲವು ವಿಮಾನಗಳು ಹೊರಭಾಗದಲ್ಲಿ ಕೇವಲ ಲಾಂಛನವನ್ನು (ಎಂಬ್ಲೆಮ್) ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಕ್ಕೆ ಬೇರೆ ಬಣ್ಣವನ್ನು ಬಳಿಯುವುದನ್ನು ನಿಲ್ಲಿಸಿವೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಣ್ಣವನ್ನು ಹೊಂದಿರುವ ವಿಮಾನಗಳ ಬಣ್ಣವು ಕಾಲ ಕ್ರಮೇಣ ಮಾಸಲು ಆರಂಭಿಸುತ್ತದೆ. ಇದಕ್ಕಾಗಿ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಸಮಯ ಹಾಗೂ ಹಣವನ್ನು ಮೀಸಲಿಡಬೇಕಾಗುತ್ತದೆ. ಆದ ಕಾರಣ ಬಹುತೇಕ ವಿಮಾನಯಾನ ಸಂಸ್ಥೆಗಳು ತಿಳಿ ಬಣ್ಣವನ್ನು ಹೊಂದಿರುತ್ತವೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಟಿಬೆಟ್ ಮಾರ್ಗದಲ್ಲಿ ಹಾರುವುದಿಲ್ಲ ವಿಮಾನಗಳು..!

ಇನ್ನು ಆಧುನಿಕ ಜಗತ್ತಿನ ವಿಮಾನಯಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇತರೆ ಸಂಚಾರ ವಾಹಕಗಳನ್ನು ಹೋಲಿಸಿದಾಗ ವಿಮಾನಯಾನ ಹೆಚ್ಚು ಸುರಕ್ಷಿತವೆನಿಸಿಕೊಂಡಿದ್ದು, ಕೆಲವೇ ಗಂಟೆಯೊಳಗೆ ಸಾವಿರಾರು ಕೀ.ಮೀ. ದೂರವನ್ನು ಕ್ರಮಿಸಬಹುದಾಗಿದೆ. ಆದ್ರೆ ಹಲವು ಅಚ್ಚರಿಗಳಿಗೆ ಕಾರಣವಾಗಿರುವ ವಿಮಾನಯಾನದ ಬಗ್ಗೆ ನಾವಿಂದು ಕೆಲವು ಅಚ್ಚರಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ವಿಮಾನಯಾನದ ಬಗ್ಗೆ ಸಾಕಷ್ಟು ಕಟ್ಟುಕಥೆಗಳು ಅಲೆದಾಡುತ್ತಲೇ ಇರುತ್ತವೆ. ಈ ಸಂಬಂಧ ನೀವು ಅರಿತುಕೊಳ್ಳಬೇಕಾದ ಕೆಲವೊಂದು ಸ್ವಾರಸ್ಯಕರ ಸಂಗತಿಗಳಲ್ಲಿ ಟೆಬೆಟ್ ಮಾರ್ಗವಾಗಿ ವಿಮಾನಗಳ ಏಕೆ ಹಾರಾಟ ನಡೆಸುವುದಿಲ್ಲ ಎಂಬುವುದು ಅನೇಕರಿಗೆ ಗೊತ್ತಿಲ್ಲ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಹುಶಃ ಬರ್ಮುಡಾ ಟ್ರಯಾಂಗಲ್ ಹೊರತುಪಡಿಸಿ ಜಗತ್ತಿನ ಎಲ್ಲಾ ಪ್ರದೇಶಗಳ ಮಾರ್ಗವಾಗಿಯು ವಿಮಾನಗಳು ಹಾರಾಟ ನಡೆಸುತ್ತವೆ ಎಂದು ತಿಳಿದಿರುವ ನಮೆಗೆಲ್ಲಾ ಅದೇ ರೀತಿ ವಿಮಾನಗಳು ಟೆಬೆಟ್ ಮಾರ್ಗವಾಗಿಯೂ ಕೂಡಾ ಹಾರಾಟ ನಡೆಸುವುದಿಲ್ಲ ಎಂಬ ಅಚ್ಚರಿ ಕೂಡಾ ಹೊಸದಲ್ಲ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಚೀನಾದಿಂದ ಪ್ರತ್ಯೇಕವಾಗಿ ಸ್ವತಂತ್ರವಾಗಿ ಬದುಕುತ್ತಿರುವ ಟೆಬೆಟ್ ಮಾರ್ಗವಾಗಿ ಇದುವರೆಗೂ ಯಾವುದೇ ರೀತಿಯ ವಿಮಾನಗಳು ಹಾರಾಟ ನಡೆಸುವ ಹುಚ್ಚು ಸಾಹಸಕ್ಕೆ ಕೈ ಹಾಕಿಲ್ಲ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಇದಕ್ಕೆ ಕಾರಣ 'ರೂಫ್ ಆಪ್ ದಿ ವರ್ಲ್ಡ್' ಎಂದೇ ಖ್ಯಾತಿಯಾಗಿರುವ ಟೆಬೆಟ್ ಮಾರ್ಗದಲ್ಲಿ ವಿಮಾನಗಳ ಚಾಲನೆ ಅಷ್ಟು ಸುಲಭವಲ್ಲ. 5ಕಿಮಿ ಗಿಂತಲೂ ಎತ್ತರವಾಗಿರುವ ಹಿಮಾಲಯ ಪರ್ವತಗಳ ಶ್ರೇಣಿಯು ವಿಮಾನ ಹಾರಾಟಕ್ಕೆ ಅಷ್ಟು ಅನುಕೂಲರವಾಗಿಲ್ಲ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಒಂದು ವೇಳೆ ಟೆಬೆಟ್ ಮಾರ್ಗವಾಗಿ ವಿಮಾನ ಹಾರಾಟ ನಡೆಸಿದ್ದೇ ಆದಲ್ಲಿ ಹುಲಿ ಬಾಯಿಯಿಂದ ತಪ್ಪಿಸಿಕೊಂಡು ಬಂದಷ್ಟೇ ಹತ್ತಾರು ಸವಾಲುಗಳಿದ್ದು, ಸುರಕ್ಷಿತ ವಿಮಾನಯಾನ ಕೈಗೊಳ್ಳುವುದು ಅಸಾಧ್ಯದ ಮಾತು.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಅಲ್ಲದೇ ವಿಮಾನ ಹಾರಾಟ ನಡೆಸಿದರು ಆರಂಭದಲ್ಲೇ ಹಲವು ಸವಾಲುಗಳಿದ್ದು, ಅದರಲ್ಲಿ ಪ್ರಮುಖವಾಗಿ ಆಕ್ಸಿಜನ್ ಕೊರತೆ ಸುರಕ್ಷಿತ ಪ್ರಯಾಣಕ್ಕೆ ಪೂರಕವಾಗಿಲ್ಲ. ತುರ್ತುಪರಿಸ್ಥಿತಿಗಳಲ್ಲಿ ಪ್ರಯಾಣಿಕರಿಗೆ ಕೇವಲ 15ರಿಂದ 20 ನಿಮಿಷಗಳ ಕಾಲ ಮಾತ್ರ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಬಹುದಾಗಿದೆ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

15 ರಿಂದ 20 ನಿಮಿಷಗಳ ಕಾಲ ಹೊರತುಪಡಿಸಿ ಹೆಚ್ಚುವರಿ ಕೃತಕ ಆಕ್ಸಿಜನ್ ನೀಡಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಸಾಗಬೇಕಾದ ಟಿಬೆಟ್ ಪರ್ವತಗಳ ಮಾರ್ಗದ ಪಯಣ ಯಶಸ್ವಿಯಾಗುವುದಕ್ಕೆ ಸಾಧ್ಯವೇ ಇಲ್ಲ.

ವಿಮಾನಗಳಲ್ಲಿ ಬಿಳಿ ಬಣ್ಣವನ್ನು ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಇದೇ ಕಾರಣದಿಂದಲೇ ಟಿಬೆಟ್ ಮಾರ್ಗವಾಗಿ ಯಾವುದೇ ವಿಮಾನಗಳು ಕೂಡಾ ಹಾರಾಟ ನಡೆಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಜೊತೆಗೆ ವಿಮಾನಯಾನ ಸಂಸ್ಥೆಗಳಿಗೆ ಟಿಬೆಟ್ ಮಾರ್ಗವಾಗಿ ಪಯಣಿಸಲೇಬೇಕಾದ ಅನಿವಾರ್ಯತೆಗಳು ಕೂಡಾ ಇಲ್ಲ.

Most Read Articles

Kannada
English summary
Why planes are painted in white color - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more