ವಾಹನಗಳ ನಂಬರ್‌ ಪ್ಲೇಟ್ ಮೇಲೆ 'IND' ಎಂದು ಏಕೆ ಬರೆಯುತ್ತಾರೆ ಗೊತ್ತೆ?

ಯಾವುದೇ ವಾಹನದ ಚಾಲಕನಾಗಿರಲಿ, ನಂಬರ್ ಪ್ಲೇಟ್ ಮೇಲಿರುವ ಈ ಹೆಸರನ್ನು ಖಂಡಿತ ಗಮನಿಸಿರುತ್ತಾರೆ. ಯಾವ ಹೆಸರಿನ ಬಗ್ಗೆ ಮಾತಾಡ್ತಾ ಇದ್ದೀರಾ ? ಅಂತ ನೀವೇನಾದ್ರು ಕೇಳುದ್ರೆ ಅದಕ್ಕೆ ಉತ್ತರ 'IND' ಎಂದು ಆಗಿರುತ್ತದೆ.

By Mahesh

ಯಾವುದೇ ವಾಹನದ ಚಾಲಕನಾಗಿರಲಿ, ನಂಬರ್ ಪ್ಲೇಟ್ ಮೇಲಿರುವ ಈ ಹೆಸರನ್ನು ಖಂಡಿತ ಗಮನಿಸಿರುತ್ತಾರೆ. ಆದರೆ ನಂಬರ್ ಪ್ಲೇಟ್‌ನಲ್ಲಿ ನಮೂದು ಮಾಡಲಾಗಿರುವ 'IND' ಬಗೆಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಹಾಗಾದ್ರೆ IND ಅರ್ಥ ಏನು? ಮತ್ತು ಬಳಕೆ ಉದ್ದೇಶ ಎನ್ನುವ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಹೌದು, ಪ್ರತಿಯೊಬ್ಬ ವಾಹನ ಮಾಲೀಕನೂ ಕೂಡ ಈ IND ಎನ್ನುವ ಅಕ್ಷರಗಳನ್ನು ತಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ಹಾಕಿಸಿಕೊಂಡು ಓಡಾಡುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ, ಈ IND ಎಂಬ ಲೆಟರ್‌ಗಳನ್ನು ಏಕೆ ನಂಬರ್ ಪ್ಲೇಟ್ ಮೇಲೆ ಹಾಕಿಸಿಕೊಳ್ಳಬೇಕು? ಏನು ಇದರ ಅರ್ಥ ಎಂಬುವುದರ ಬಗ್ಗೆ ಬಹುತೇಕ ವಾಹನ ಮಾಲೀಕರಿಗೆ ಗೊತ್ತಿರುವುದಿಲ್ಲ.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಈ IND ಎನ್ನವುದನ್ನು ಏಕೆ ಕಡ್ಡಾಯವಾಗಿ ನಂಬರ್ ಪ್ಲೇಟ್ ಮೇಲೆ ಹಾಕಿಸಿಕೊಳ್ಳಬೇಕು? ಹಾಕಿಸಿಕೊಳ್ಳದೆ ಇದ್ದರೆ ಏನು ತೊಂದರೆಯಾಗುತ್ತದೆ ಎಂದರೆ ಬಗ್ಗೆ ಒಂದಿಷ್ಟು ಮಾಹಿತಿ ನಾವಿಂದು ನೀಡಲಿದ್ದೇವೆ. ಮುಂದಕ್ಕೆ ಓದಿ..

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

"IND" ಎಂಬ ಪದವು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳ ವೈಶಿಷ್ಟ್ಯತೆಗಳ ಒಂದು ಭಾಗವಾಗಿದೆ. ಇದನ್ನು 1989ರ ಸೆಂಟ್ರಲ್ ಮೋಟಾರ್ ವಾಹನಗಳ ನಿಯಮಾವಳಿಗಳ ತಿದ್ದುಪಡಿಯ ಭಾಗವಾಗಿ ಪರಿಚಯಿಸಲಾಯಿತು.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

"IND" ಪದ ಬಳಕೆಯ ಹಿಂದಿನ ತಾರ್ಕಿಕತೆಯು ನಿಸ್ಸಂಶಯವಾಗಿ ಭದ್ರತೆ ಒದಗಿಸುವ ಬಗ್ಗೆಯೇ ಆಗಿದೆ. ದೇಶದ ಕರೆನ್ಸಿ ವಿಚಾರದಲ್ಲಿ ಹೇಗೆ ಕೆಲವೊಂದು ವೈಶಿಷ್ಟ್ಯಗಳನ್ನು ನೀಡಲಾಗುತ್ತದೆಯೋ, ಅದೇ ರೀತಿ ನಂಬರ್ ಪ್ಲೇಟ್ ಮೇಲೂ ಸಹ ಈ IND ಪದ ನಮೂದಿಸುವ ಮೂಲಕ ಭದ್ರತೆಯನ್ನು ಖಾತರಿಪಡಿಸಿಕೊಳ್ಳಬಹುದು.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಹೊಸ ಪ್ಲೇಟ್‌ಗಳು ಟೆಂಪರ್-ನಿರೋಧಕ ಮತ್ತು ತೆಗೆಯಲು ಅಸಾಧ್ಯವಾಗಿರುವ ಸ್ನ್ಯಾಪ್ ಲಾಕ್ ಮೂಲಕ ರಕ್ಷಿಸಲ್ಪಟ್ಟಿದೆ. ರಸ್ತೆ ಬದಿಯ ಮಾರಾಟಗಾರರಿಂದ ಈ ಸ್ನ್ಯಾಪ್ ಲಾಕ್ ನಕಲು ಮಾಡುವುದು ವಾಸ್ತವಿಕವಾಗಿ ಅಸಾಧ್ಯವಾದ ಕೆಲಸ. ಈ ನಂಬರ್ ಪ್ಲೇಟ್‌, ಮಾಲೀಕನಿಗೆ ವಾಹನ ಭದ್ರತೆಯನ್ನು ಒದಗಿಸುತ್ತದೆ.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ನಂಬರ್ ಪ್ಲೇಟ್ ಸುರಕ್ಷತಾ ವೈಶಿಷ್ಟ್ಯಗಳು :

1. ಪೇಟೆಂಟ್ ಹೊಂದಿರುವ ಕ್ರೋಮಿಯಮ್ ಆಧಾರಿತ ಚಕ್ರ ಹೊಲೋಗ್ರಾಮ್

2. ಪರೀಕ್ಷಾ ಏಜೆನ್ಸಿ ಮತ್ತು ತಯಾರಕರು ಪ್ರತ್ಯೇಕವಾಗಿ ನೀಡಿರುವ ಆಲ್ಫ-ಸಂಖ್ಯಾ ಗುರುತಿಸುವಿಕೆಯನ್ನು ಹೊಂದಿರುವ ಲೇಸರ್ ಸಂಖ್ಯೆ.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

3. 45-ಡಿಗ್ರಿ ಇಳಿಜಾರಿನಲ್ಲಿ "ಭಾರತ" ಎಂಬ ಪರಿಶೀಲನಾ ಶಾಸನವನ್ನು ಹೊಂದಿರುವ ರೆಟ್ರೊ ಪ್ರತಿಫಲಿತ ಚಿತ್ರ ಕಾಣಬಹುದಾಗಿದೆ.

4. ಉತ್ತಮವಾಗಿ ಗೋಚರಿಸುವ ಸಲುವಾಗಿ ಪ್ಲೇಟ್ ಮೇಲೆ ಸಂಖ್ಯೆಗಳು ಮತ್ತು ಅಕ್ಷರಗಳನ್ನು ಕೆತ್ತುವುದು.

5. "IND" ಅಕ್ಷರಗಳನ್ನು ಹೊಲೊಗ್ರಾಮ್ ಅಡಿಯಲ್ಲಿ ಪ್ಲೇಟ್ ನೋಡುವವರ ಎಡಭಾಗಕ್ಕೆ ನೀಲಿ ಬಣ್ಣದಲ್ಲಿ ಮುದ್ರಿಸಲಾಗುತ್ತದೆ.

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

6. ಈ ನಂಬರ್ ಪ್ಲೇಟ್ ಕೇವಲ ಒಂದು ಎಂಎಂ ಅಲ್ಯುಮಿನಿಯಂ ಪಟ್ಟಿಯಿಂದ ಮಾಡಲ್ಪಟ್ಟಿದೆ.

7. ಕಾರುಗಳ ವಿಂಡ್ ಷೀಲ್ಡ್ ಮೇಲೆ, ಮುಂಭಾಗ, ಹಿಂಭಾಗದಲ್ಲಿ ನೋಂದಣಿ ಸಂಕೇತವನ್ನು ಪ್ರದರ್ಶಿಸಲಾಗುತ್ತದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಈ ಮೇಲಿನ ವಿಶೇಷತೆಗಳಿಂದಾಗಿ ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಒಂದೇ ರೀತಿಯಲ್ಲಿ ಕಾಣಿಸಲಿದ್ದು, ಕಿರಿಕಿರಿಯುಂಟು ಮಾಡುವ ನಂಬರ್ ಪ್ಲೇಟ್‌ಗೆ ಕಡಿವಾಣ ಬೀಳಲಿದೆ.

Most Read Articles

Kannada
English summary
Why do vehicle number plates in India have IND written on them? What is the significance?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X