ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಏಷ್ಯಾದಲ್ಲೇ ಅತಿದೊಡ್ಡ ರೈಲು ಮಾರ್ಗವನ್ನು ಹೊಂದಿರುವ ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಮಂದಿಯನ್ನು ಅತಿ ಕಡಿಮೆ ವೆಚ್ಚದಲ್ಲಿ ತಮ್ಮ ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ರೈಲ್ವೆ ಇಲಾಖೆಯಲ್ಲಿ ಎಲ್ಲಾ ಕಾರ್ಯಗಳು ಸವ್ಯವಾಗಿ ಜರುಗಲು ಲಕ್ಷಾಂತರ ಮಂದಿ ವ್ಯವಸ್ಥಿತವಾಗಿ ಕೆಲಸಮಾಡಬೇಕಾಗುತ್ತದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇನ್ನು ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಗಾಗಿ ದೇಶದ ವಿವಿಧ ನಗರಗಳಲ್ಲಿ ಮೆಟ್ರೋ ರೈಲುಗಳು ಕೂಡ ಇದೀಗ ಜನಪ್ರಿಯವಾಗಿವೆ. ಈ ರೈಲುಗಳಲ್ಲಿ ನೀವು ಗಮನಿಸಿದರೆ ರೈಲನ್ನು ಒಬ್ಬರೇ ಓಡಿಸುತ್ತಾರೆ. ಅಲ್ಲದೇ ರೈಲು ಕ್ಯಾಬಿನ್ ಒಳಗೆ ಒಬ್ಬರೇ ಇರುತ್ತಾರೆ. ಆದರೆ ಭಾರತೀಯ ರೈಲ್ವೆಯ ದೂರದ ಪ್ರದೇಶಗಳಿಗೆ ಪ್ರಯಾಣಿಸುವ ರೈಲುಗಳಲ್ಲಿ ಎಂಜಿನ್ ಕ್ಯಾಬಿನ್ ಒಳಗೆ ಇಬ್ಬರು ಪೈಲೆಟ್‌ಗಳು ಇರುತ್ತಾರೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಈ ರೈಲುಗಳಲ್ಲಿ ಇಬ್ಬರೇ ಏಕೆ ಇರುತ್ತಾರೆ? ಎಲೆಕ್ಟ್ರಿಕ್ ಮತ್ತು ಮೆಟ್ರೊ ರೈಲುಗಳನ್ನು ಒಬ್ಬರೇ ಓಡಿಸುವಾಗ ಈ ರೈಲುಗಳನ್ನು ಒಬ್ಬರಿಂದ ಏಕೆ ನಿಯಂತ್ರಿಸಲಾಗುವುದಲ್ಲ. ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತೀಯ ರೈಲ್ವೆಯಲ್ಲಿ ಲೊಕೊಮೊಟಿವ್ ರೈಲುಗಳನ್ನು ಇಬ್ಬರು ನಿರ್ವಹಿಸಬೇಕು ಎಂಬ ನಿಯಮವಿದೆ. ವೈಯಕ್ತಿಕ ಕಾರ್ಯಾಚರಣೆಯನ್ನು ಅನುಮತಿಸಲಾಗುವುದಿಲ್ಲ. ಮೊದಲ ವ್ಯಕ್ತಿಯನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಎರಡನೇ ವ್ಯಕ್ತಿಯನ್ನು ಸಹಾಯಕ ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇಬ್ಬರು ಕೂಡ ಇಂಜಿನ್ ಅನ್ನು ನಿಯಂತ್ರಿಸುತ್ತಾರೆ. ಭಾರತೀಯ ರೈಲ್ವೆಯು ಲೋಕೋ ಪೈಲಟ್ ಅನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಎಂಜಿನ್ ಓಡಿಸಲು ಒಬ್ಬರು ಆಯ್ಕೆಯಾದರೂ, ಅವರು ಮೊದಲು ಸಹಾಯಕ ಲೋಕೋ ಪೈಲಟ್ ಆಗಿ ಕೆಲಸ ಮಾಡಬೇಕಾಗಿರುತ್ತದೆ. ಅನುಭವದ ನಂತರ ಅವರಿಗೆ ಲೋಕೋ ಪೈಲಟ್ ಆಗಿ ಬಡ್ತಿ ನೀಡಲಾಗುತ್ತದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪ್ರಸ್ತುತ ಬಳಕೆಯಲ್ಲಿರುವ ಲೋಕೋಮೋಟಿವ್ ರೈಲುಗಳು ಎಲೆಕ್ಟ್ರಿಕ್ ಲೋಕೋಮೋಟಿವ್ ಮತ್ತು ಡೀಸೆಲ್ ಲೋಕೋಮೋಟಿವ್ ಎಂಬ ಎರಡು ವಿಧದ ಎಂಜಿನ್‌ಗಳನ್ನು ಒಳಗೊಂಡಿವೆ. ಮುಖ್ಯ ಪೈಲಟ್ ಎಂಜಿನ್‌ನ ಎಡಭಾಗದ ಬಳಿ ಇರುತ್ತಾರೆ. ಸಹಾಯಕ ಲೋಕೋ ಪೈಲಟ್ ಎಂಜಿನ್‌ನ ಬಲಭಾಗದಲ್ಲಿರುತ್ತಾರೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇದಕ್ಕೂ ಕಾರಣವಿದೆ ಸಹಾಯಕ ಲೋಕೋ ಪೈಲಟ್‌ಗೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ನೀಡಲಾಗುತ್ತದೆ. ಜೊತೆಗೆ ರೈಲು ಹೊರಡುವ ಮೊದಲು ಎಲ್ಲಾ ವಿಷಯಗಳನ್ನು ಪರಿಶೀಲಿಸುವುದು ಇವರ ಮೊದಲ ಕಾರ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಪರಿಶೀಲನಾಪಟ್ಟಿ ಇದ್ದು, ಅದನ್ನು ಪರಿಶೀಲಿಸಿದ ನಂತರವೇ ರೈಲು ಹತ್ತಬೇಕು.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಸಹಾಯಕ ಪೈಲಟ್ ರೈಲಿನಲ್ಲಿ ಪ್ರಯಾಣಿಸುವಾಗ ನೋಡಿಕೊಳ್ಳಬೇಕಾದ ಮುಂದಿನ ಪ್ರಮುಖ ಕೆಲಸವೆಂದರೆ ರೈಲು ಹೋಗುವ ಹಳಿಗಳನ್ನು ಎಚ್ಚರಿಕೆಯಿಂದ ಗಮನಿಸುವುದು. ದೂರದಲ್ಲಿ ಹಳಿಗಳಲ್ಲಿ ಸಮಸ್ಯೆ ಇದೆಯೇ ಎಂದು ಮೇಲ್ವಿಚಾರಣೆ ಮಾಡಬೇಕು. ನಂತರ ಸಿಗ್ನಲ್‌ಗಳನ್ನು ಮೇಲ್ವಿಚಾರಣೆ ಮಾಡಿ ಲೋಕೋ ಪೈಲಟ್‌ಗೆ ತಿಳಿಸಬೇಕು.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮುಂದಿನ ಪ್ರಮುಖ ಕೆಲಸವೆಂದರೆ ಪ್ರತಿ ನಿಲ್ದಾಣದಲ್ಲಿ ರೈಲಿನ ಹಾದುಹೋಗುವಿಕೆಯನ್ನು ತಿಳಿಸಿದುವುದು, ರೈಲು ಮುಂದಿನ ನಿಲ್ದಾಣದಲ್ಲಿ ಎಷ್ಟು ಸಮಯ ನಿಲ್ಲಬೇಕು ಹಾಗೂ ರೈಲಿನ ಬಲಭಾಗದಲ್ಲಿ ಸ್ಟೇಷನ್ ಮಾಸ್ಟರ್ ಪ್ರದೇಶವಿದ್ದರೆ ರೈಲು ನಿಲ್ದಾಣವನ್ನು ಹಾದುಹೋಗುವಾಗ ಹಸಿರು ಬಾವುಟವನ್ನು ತೋರಿಸುವುದರ ಜೊತೆಗೆ ಮುಂಬರುವ ರೈಲುಗಳೊಂದಿಗೆ ಸಂಪರ್ಕದಲ್ಲಿರುವುದಾಗಿದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪ್ರಯಾಣಿಕರು ರೈಲಿನಲ್ಲಿ ಚೈನ್ ಎಳೆದರೆ, ಸಹಾಯಕ ರೈಲು ಚಾಲಕ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಬೇಕು. ಹೋಗಿ ಸಮಸ್ಯೆ ಏನು ಎಂದು ನೋಡುವುದು ಕೂಡ ಸಹಾಕ ಪೈಲಟ್‌ದಾಗಿರುತ್ತದೆ. ಒಂದು ವೇಳೆ ಮುಖ್ಯ ಲೋಕೋಪೈಲೆಟ್ ರೈಲನ್ನು ಚಲಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅವರೇ ರೈಲನ್ನು ಮುಂದಿನ ನಿಲ್ದಾಣಕ್ಕೆ ಓಡಿಸಬೇಕಾಗುತ್ತದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇಂತಹ ಸಂದರ್ಭದಲ್ಲೂ ರೈಲಿನ ಒಟ್ಟಾರೆ ಕಾರ್ಯಾಚರಣೆಯ ಜವಾಬ್ದಾರಿ ಲೋಕೋ ಪೈಲಟ್ ಮೇಲಿರುತ್ತದೆ. ಅಲ್ಲದೇ ಸಹಾಯಕ ಲೋಕೋಪೈಲಟ್‌ಗೆ ಸೂಚನೆಗಳನ್ನು ನೀಡುತ್ತಾ ಮುಂದಿನ ಸ್ಟೇಷನ್‌ವರೆಗೆ ಜವಾಬ್ದಾರಿ ವಹಿಸಬೇಕಾಗಿರುತ್ತದೆ. ಈ ವೇಳೆ ಸಹಾಯಕ ಪೈಲಟ್ ತನ್ನ ಕಾರ್ಯ ಹಾಗೂ ಮುಖ್ಯ ಪೈಲಟ್‌ನ ಕಾರ್ಯ ಎರಡನ್ನು ನಿರ್ವಹಿಸಬೇಕು.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ರೈಲು ಅತಿ ಕಡಿಮೆ ಅಂತರದಲ್ಲಿ ಮಾತ್ರ ಓಡುವುದರಿಂದ ಮೆಟ್ರೋ ಮತ್ತು ಲೋಕಲ್ ಎಲೆಕ್ಟ್ರಿಕ್ ರೈಲುಗಳಲ್ಲಿ ಒಬ್ಬರೇ ಲೋಕೋ ಪೈಲಟ್ ಇರುತ್ತಾರೆ. ಆದರೆ ಭಾರತೀಯ ರೈಲ್ವೆಯಲ್ಲಿ ರೈಲನ್ನು ಓಡಿಸುವಾಗ ಯಾವುದೇ ಸಮಸ್ಯೆ ಉಂಟಾದಾಗ ತಕ್ಷಣವೇ ಇತರ ವ್ಯಕ್ತಿಯು ರೈಲನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ದೂರದ ಪ್ರಯಾಣ ಬೆಳಸುವ ರೈಲುಗಳು ವಾರಗಟ್ಟಲೇ ಪ್ರಯಾಣ ಮಾಡುತ್ತವೆ. ಈ ವೇಳೆ ಹಗಲು-ರಾತ್ರಿ ರೈಲು ಪ್ರಯಾಣದಲ್ಲೇ ಇರುತ್ತದೆ. ಹಾಗಾಗಿ ದಿನ ಪೂರ್ತಿ ಒಬ್ಬರೇ ಚಾಲನೆ ಮಾಡುವುದು ಕಷ್ಟವಾದ್ದರಿಂದ ಸಹಾಯಕ ಪೈಲಟ್‌ ಅವಶ್ಯಕತೆ ಇರುತ್ತದೆ ಎಂಬುದು ಪ್ರಮುಖ ಕಾರಣವಾಗಿದೆ.

ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಮಂದಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿದೆ. ಆದರೆ ಅದೆಷ್ಟೋ ಮಂದಿಗೆ ರೈಲಿನ ಬಗ್ಗೆ ಸಂಪೂರ್ಣವಾಗಿ ತಿಳಿದೇ ಇಲ್ಲ. ರೈಲ್ವೆ ಟಿಕೆಟ್‌ನಲ್ಲಿ ನೀಡುವ ಪಿಎನ್‌ಆರ್ ಸಂಖ್ಯೆಯ ಉಪಯೋಗವೇನು, ರೈಲಿನ ಹಾರ್ನ್ ಬಗ್ಗೆ ಹಾಗೂ ರೈಲ್ವೆ ಸ್ಟೇಷನ್‌ಗಳಲ್ಲಿ ಯೆಲ್ಲೋ ಬೋರ್ಡ್‌ಗಳನ್ನೇ ಏಕೆ ಬಳಸುತ್ತಾರೆ ಎಂಬ ಹಲವು ಆಸಕ್ತಿಕರ ವಿಷಯಗಳ ಕುರಿತು ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್‌ನಲ್ಲಿ ವಿಸೃತ ವರದಿಗಳಿವೆ. ಆಸಕ್ತರು ಭೇಟಿ ನೀಡಿ ತಿಳಿದುಕೊಳ್ಳಬಹುದು.

Most Read Articles

Kannada
Read more on ರೈಲು train
English summary
Why hire two loco pilots to drive the train
Story first published: Wednesday, June 29, 2022, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X