Just In
- 6 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 7 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 7 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?
ನಮ್ಮಲ್ಲಿ ಕೆಲವರಿಗೆ ವಿಮಾನಯಾನವು ಈಗಲೂ ಸಹ ಆಕರ್ಷಕವಾದ ಅಂಶವೆನ್ನಬಹುದು. ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವವರಿಗೆ ಒಂದು ಕಡೆ ಭಯ... ಮತ್ತೊಂದು ಕಡೆ ಖುಷಿಯ ವಿಚಾರವಾಗಿದೆ.

ಮೊದಲ ಬಾರಿ ಪ್ರಯಾಣಕ್ಕೆ ಹೊರಟಾಗ ವಿಮಾನದ ಮೂತಿ, ರೆಕ್ಕೆಗಳು, ವಿಮಾನದ ಒಳಭಾಗ, ಸೀಟು ಹಾಗು ಇತ್ಯಾದಿ ಅಂಶಗಳನ್ನು ಖಂಡಿತ ಗಮನಿಸಿರುತ್ತೇವೆ. ಆದ್ರೆ, ಸಾಕಷ್ಟು ಬಾರಿ ಪ್ರಯಾಣ ಮಾಡಿದರೂ ಸಹ ಕೆಲವೊಂದು ವಿಚಾರಗಳನ್ನು ನಾವು ಗಮನಿಸದೆ ಹಾಗೆಯೇ ಇದ್ದು ಬಿಡುತ್ತೇವೆ. ಅಂತಹ ಒಂದು ವಿಚಾರದ ಬಗ್ಗೆ ನಾವು ಇಂದು ತಿಳಿಸಲಿದ್ದೇವೆ. ಮುಂದೆ ಓದಿ.

ಸಾಮಾನ್ಯವಾಗಿ ನಾವೆಲ್ಲರೂ ಎಡಭಾಗದಿಂದ ವಿಮಾನ ಹತ್ತುತ್ತೇವೆ. ಆದ್ರೆ, ಏಕೆ ಎಲ್ಲಾ ವಿಮಾನಗಳು ಎಡಭಾಗದಲ್ಲೇ ಬಾಗಿಲು ಹೊಂದಿವೆ ಎಂಬುದನ್ನು ಯಾರೂ ಸಹ ಖಂಡಿತ ಯೋಚನೆ ಮಾಡಿರುವುದಿಲ್ಲ. ಇದಕ್ಕೂ ಸಹ ಒಂದು ಕಾರಣವಿದೆ.


ಹಳೆ ಕಾಲದಲ್ಲಿ ಪ್ರಯಾಣಿಕರನ್ನು, ಅವರ ಸಾಮಗ್ರಿಗಳನ್ನು ಮತ್ತು ಸಿಬ್ಬಂದಿಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡುವ ಸಲುವಾಗಿ ಟ್ಯಾಕ್ಸಿಗಳನ್ನು ಬಳಸುತ್ತಿದ್ದರು. ಆ ಸಮಯದಲ್ಲಿ ಯಾವುದೇ ಪ್ರತ್ಯೇಕ ವಿಮಾನ ಟ್ಯಾಕ್ಸಿಗಳು ಇರಲಿಲ್ಲ.

ಸಾಂಪ್ರದಾಯಿಕವಾಗಿ, ರೆಕ್ಕೆಗಳನ್ನು ಗಮನಿಸಲು ಮತ್ತು ನಿರ್ಣಾಯಕ ಕೆಲಸಗಳನ್ನು ನೋಡಿಕೊಳ್ಳಲು ಯಾವಾಗಲೂ ಸಹ ಎಡಭಾಗದಲ್ಲಿ ಪೈಲಟ್ ಕುಳಿತಿರುತ್ತಾನೆ. ಇದರಿಂದಾಗಿ ಪೈಲಟ್‌ಗೆ ಕೂಡ ಎಡಭಾಗದಲ್ಲಿ ಬಾಗಿಲು ನೀಡಲಾಗಿದೆ.

ಆದ್ದರಿಂದ, ಪ್ರಯಾಣಿಕರಿಗೆ ಹಾಗು ಪೈಲಟ್‌ಗಳಿಗೆ ವಿಮಾನದೊಳಗೆ ಪ್ರವೇಶಿಸಲು ಎಡಭಾಗದ ಬಾಗಿಲು ಹೆಚ್ಚು ಅನುಕೂಲಕರವೆಂದು ಸಾಬೀತಾಗಿದೆ. ವಿಮಾನದ ಸುತ್ತಲೂ ಬಾಗಿಲು ಇರುವ ಬದಲು ಒಂದು ಕಡೆ ಇರುವುದು ಲೇಸು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಏವಿಯೇಷನ್ ವಿಭಾಗಳು ಕೆಲವು ತತ್ವಗಳನ್ನು ಅನುಸರಿಸಲಿದ್ದು, ಇದರ ಪ್ರಕಾರ ವಿಮಾನದಲ್ಲಿ ಪ್ರಯಾಣಿಕರ ಎಡಭಾಗದಿಂದ ಪ್ರವೇಶ ಮಾಡಬೇಕು ಎಂಬ ಉಲ್ಲೇಖವಿದೆ. ಪ್ರಾಚೀನ ಕಾಲದಲ್ಲಿ, ಹಡಗುಗಳು ಸಹ ಎಡಭಾಗದಲ್ಲಿ ಬಾಗಿಲುಗಳನ್ನು ಹೊಂದಿದ್ದವು. ಈ ಸಂಪ್ರದಾಯವು ಇಲ್ಲಿಯೂ ಸಹ ಮುಂದುವರೆಯಿತು.

ನಮ್ಮ ದಿನಚರಿಯಲ್ಲಿ ನಾವು ಎಷ್ಟೋ ವಿಚಾರಗಳ ಬಗ್ಗೆ ನಿಜಾಂಶವನ್ನು ತಿಳಿದುಕೊಳ್ಳುವುದೇ ಇಲ್ಲ. ಕೆಲವೊಂದು ವಿಚಾರಗಳನ್ನು ನಾವು ನೋಡಿದರೂ ಸಹ ಗಮನ ಕೊಡದೆ ಹಾಗೆಯೇ ಇದ್ದು ಬಿಡುತ್ತೇವೆ. ಇನ್ನು ಮುಂದಾದರೂ ಸಹ ಈ ಬಗ್ಗೆ ಹೆಚ್ಚು ಗಮನಹರಿಸೋಣ...
Trending on DriveSparkKannada
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ