ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ಮೊಬೈಲ್ ಬಳಸುವುದು ಈಗಿನ ಕಾಲದಲ್ಲಿ ಕಾಮನ್. ಎಲ್ಲೆಂದರಲ್ಲಿ ಮೊಬೈಲ್ ಬಳಸುವುದನ್ನು ನಾವು ನೋಡಿದ್ದೇವೆ. ಅದರಲ್ಲಿಯೂ ಎಲ್ಲಿ ಮೊಬೈಲ್ ಬಳಕೆ ಮಾಡುವುದು ನಿಷೇಧ ಮಾಡಲಾಗಿರುತ್ತದೆಯೊ ಅಲ್ಲಿಯೆ ಬೇಕೆಂದು ಹಲವರು ಮೊಬೈಲ್ ಬಳಸುತ್ತಾರೆ. ಉದಾಹರಣೆಗೆ ಪೆಟ್ರೋಲ್ ಬಂಕ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ತಪ್ಪು. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ದೇ ಆದರೆ ಯಾವ ರೀತಿಯ ಪರಿಣಾಮವನ್ನು ಎದುರಿಸುತ್ತೀರಿ ಎಂಬುದನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಲಿದ್ದೇವೆ.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಹೇಗೆ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ನೀವು ಅಂದುಕೊಳ್ಳಬಹುದು. ಆದ್ರೆ ಡ್ರೈವಿಂಗ್ ಮಾಡುವ ವೇಳೆ ಮೊಬೈಲ್ ಬಳಸುವುದು ಒಂದು ಅಪರಾಧವೆಂದು ಕೂಡಾ ಅರಿತರೆ ಒಳ್ಳೆಯದು. ಏಕೆಂದರೆ ಡ್ರೈವಿಂಗ್ ಮಾಡುವಾಗ ಟ್ರಾಫಿಕ್ ಪೊಲೀಸರ ಹತ್ತಿರ ನೀವು ಸಿಕ್ಕಿಕೊಂಡರೆ ಭಾರೀ ಮೊತ್ತದಲ್ಲಿ ದಂಡ ಮತ್ತು ಕೆಲವು ಬಾರಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ಇವುಗಳ ಪೈಕಿ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಎಷ್ಟು ಕೆಟ್ಟ ಅಭ್ಯಾಸ ಎಂದರೆ, ಮೊಬೈಲ್ ಬಳಸುವ ಕ್ಷಣಾರ್ಧದಲ್ಲಿ ನಿಮ್ಮಗೂ ಮತ್ತು ರಸ್ತೆಯಲ್ಲಿ ಸಂಚರಿಸುವ ಇನ್ನಿತರೆ ವಾಹನಗಳಿಗೆ ಹಾಗು ಪಾದಚಾರಿಗಳಿಗೆ ಅಪಾಯ. ಏಕೆಂದರೆ ಯಾವುದೋ ಒಂದು ಮೆಸೇಜ್ ಅಥವಾ ಕಾಲ್ ಬಂದಾಗ ನೀವು ಅದನ್ನು ಸ್ವೀಕರಿಸಲು ಮುಂದಾಗುವ 2 ಸೆಕೆಂಡಿನಲ್ಲಿ ನಿಮ್ಮ ಮುಂದಿರುವ ವಾಹನಕ್ಕೆ ಅಥವಾ ಪಾದಚಾರಿಗಳಿಗೆ ಗುದ್ದುರುತ್ತೀರಿ.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಮಾಡಿದ ಕೇವಲ 2 ಸೆಕೆಂಡಿನಲ್ಲಿ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಈ ವಿಡಿಯೋ ನೋಡಿ ತಿಳಿಯಿರಿ...

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ನಿಮಗೆ ಬಂದ ಕರೆ ಅಥವಾ ಮೆಸೇಜ್ ಅಷ್ಟು ಮುಖ್ಯವಾದದ್ದು ಎಂದರೆ ರಸ್ತೆ ಬದಿಯಲ್ಲಿ ನಿಮ್ಮ ವಾಹನವನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಿ ಕರೆಯನ್ನು ಸ್ವೀಕರಿಸಿ. ಆದ್ರೆ ಡ್ರೈವಿಂಗ್ ಮಾಡುವಾಗ ಮಾತ್ರ ಮೊಬೈಲ್ ಬಳಸಲೇಬೇಡಿ. ಅಥವಾ ಸಿಗ್ನಲ್‍ನಲ್ಲಿ ರೆಡ್ ಲೈಟ್ ಬಿದ್ದು ನಿಮಗೆ ಸಮಯ ಸಿಕ್ಕಾಗ ಅವುಗಳನ್ನು ಸ್ವೀಕರಿಸಿ.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ 2016ರಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವಾಗ ನಡೆದ ರಸ್ತೆ ಅಪಘಾತಗಳಲ್ಲಿ 2,138 ಮಂದಿಯ ಪ್ರಾಣಗಳನ್ನು ಕಳೆದುಕೊಂಡಿದ್ದು, ಇದುವರೆಗೂ ಅಪಘಾತಗಳ ಸಂಖ್ಯೆಯು ಹೆಚ್ಚುತ್ತಲೆ ಇದೆ.

ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಬೇಡ ಅನ್ನೋದು ಇದಕ್ಕೇನೆ...

ಡ್ರೈವಿಂಗ್ ಮಾಡುವಾಗ ಫೋನಿನಲ್ಲಿ ಮಾತನಾಡುವುದು ಮತ್ತು ಸೆಲ್ಫಿ ಕಿಲ್ಲಿಕ್ಕಿಸಿಕೊಳ್ಳುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದ್ದು, ಇದರಿಂದ ತಮಗೆ ಮಾತ್ರವಲ್ಲದೆ ಇತರರಿಗೂ ಕೂಡ ತೊಂದರೆಯಾಗುತ್ತದೆ ಎಂಬುವುದು ವಾಹನ ಸವಾರರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

Source: N332

Most Read Articles

Kannada
English summary
Why you should never look at the phone while driving. Read In Kannada
Story first published: Thursday, March 21, 2019, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X