ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಕಾರು ಖರೀದಿ ಮಾಡಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇದ್ದೆ ಇರುತ್ತೆ. ಇಲ್ಲೊಬ್ಬ ಮಹಿಳೆ ಕೂಡಾ ಕಾರು ಖರೀದಿ ಮಾಡುವ ಉದ್ದೇಶದಿಂದ ಶೋರೂಂ ಒಂದಕ್ಕೆ ಭೇಟಿ ನೀಡಿದ್ದಳು. ಆದ್ರೆ ಕಾರು ಖರೀದಿ ಮಾಡಬೇಕಿದ್ದ ಮಹಿಳೆ ಶೋರೂಂನಲ್ಲಿ ಉದ್ಯೋಗಿಗಳನ್ನೇ ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದಾಳೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹ್ಯುಂಡೈ ಶೋರೂಂ ಒಂದಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬಳು ಹೊಸ ಕಾರು ಪರಿಶೀಲನೆ ವೇಳೆ ಮಾಡಿದ ಒಂದು ಸಣ್ಣ ಎಡವಟ್ಟಿನಿಂದಾಗಿ ಸುಮಾರು ರೂ.5 ಲಕ್ಷ ಹಾನಿಯಾಗಿರುವ ಘಟನೆ ನಡೆದಿದ್ದು, ಮಹಿಳೆಯ ಎಡವಟ್ಟಿನಿಂದಾಗಿ ಇಡೀ ಶೋರೂಂ ಸಿಬ್ಬಂದಿಯೇ ಬೆಚ್ಚಿಬಿದ್ದಿದ್ದಾರೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹಿಮಾಚಲ ಪ್ರದೇಶದಲ್ಲಿರುವ ಮಂಡಿ ಹ್ಯುಂಡೈ ಶೋರೂಂನಲ್ಲಿ ಐ20 ಹ್ಯಾಚ್‌ಬ್ಯಾಕ್ ಖರೀದಿಸಲು ಬಂದಿದ್ದ ಮಹಿಳೆಯು ಹೊಸ ಕಾರಿನ ಫೀಚರ್ಸ್ ತಿಳಿದುಕೊಳ್ಳಲು ಹೋಗಿ ಕಾರನ್ನೇ ಜಖಂಗೊಳಿಸಿದ್ದು, ಕಾರಿನಲ್ಲಿ ಕುಳಿತು ಪರಿಶೀಲನೆ ಮಾಡುವಾಗ ಈ ಘಟನೆ ನಡೆದಿದೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಕಾರಿನ ಒಳಭಾಗದಲ್ಲಿ ಕುಳಿತು ಕಾರ್ ಆನ್ ಮಾಡಿ ಫೀಚರ್ಸ್ ಬಗ್ಗೆ ತಿಳಿದುಕೊಳ್ಳುತ್ತಿದ್ದ ಮಹಿಳೆಯು ಸಡನ್ ಆಗಿ ಕ್ಲಚ್ ಒತ್ತಿದ್ದು, ಇದರಿಂದ ಮುಂದಕ್ಕೆ ಚಲಿಸದ ಕಾರು ಶೋರೂಂ ಮುಂಭಾಗದ ಗ್ಲಾಸ್‌ಗೆ ಡಿಕ್ಕಿ ಹೊಡಿದಿದ್ದಲ್ಲದೇ ಗ್ಲಾಸ್ ಸಿಳಿಕೊಂಡು ಶೋರೂಂ ಮುಂಭಾಗದ ಆವರಣಕ್ಕೆ ಹೋಗಿ ಬಿದ್ದಿದೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಪ್ರದರ್ಶನಕ್ಕೆ ಈಡಲಾಗಿದ್ದ ಕಾರು ಇದಾಗಿದ್ದು, ಅದೃಷ್ಟವಾಶಾತ್ ಕಾರಿನ ಮುಂದೆ ಯಾರು ಇಲ್ಲದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎನ್ನಲಾಗಿದೆ. ಆದ್ರೆ ಕಾರು ಗುದ್ದಿದ ರಭಸಕ್ಕೆ ಶೋರೂಂ ಮುಂಭಾಗದಲ್ಲಿ ಹಾಕಿರುವ ದೊಡ್ಡ ಗಾತ್ರದ ಗ್ಲಾಸ್ ಸಂಪೂರ್ಣವಾಗಿ ಒಡೆದು ಹೋಗಿದೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಇನ್ನು ಕಾರಿನಲ್ಲಿ ಕುಳಿತಿದ್ದ ಮಹಿಳೆಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಹ್ಯುಂಡೈ ಐ20 ಕಾರು ಅಷ್ಟೇ ಅಲ್ಲದೇ ಶೋರೂಂ ಮುಂಭಾಗದಲ್ಲಿ ಪ್ರದರ್ಶನಕ್ಕೆ ನಿಲ್ಲಿಸಲಾಗಿದ್ದ ಕ್ರೆಟಾ ಕಾರಿನ ಹಿಂಭಾಗವು ಕೂಡಾ ಸಂಪೂರ್ಣವಾಗಿ ಜಖಂಗೊಂಡಿದೆ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಶೋರೂಂ ಸಿಬ್ಬಂದಿಯು ಕಾರಿನ ಫೀಚರ್ಸ್ ಬಗೆಗೆ ಮಾಹಿತಿ ನೀಡುತ್ತಿರುವಾಗಲೇ ಕಾರು ಆನ್ ಮಾಡಿ ಕ್ಲಚ್ ಒತ್ತಿದ್ದರಿಂದಲೇ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ.

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಘಟನೆ ನಡೆದ ತಕ್ಷಣವೇ ಅಲರ್ಟ್ ಆದ ಶೋರೂಂ ಸಿಬ್ಬಂದಿಯು ಗ್ಲಾಸ್ ಒಡೆದು ನುಗ್ಗಿದ ಕಾರುನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ಶೋರೂಂ ಮುಂಭಾಗದಲ್ಲಿದ್ದ ಕಾರಿಗೂ ಡಿಕ್ಕಿ ಹೊಡೆದು ರಸ್ತೆಗೆ ಬಂದು ನಿಂತಿತ್ತು ಎನ್ನಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಅಂತ ಇಂತೂ ಕಾರಿನಿಂದ ಆ ಮಹಿಳೆಯನ್ನು ಹೊರಕ್ಕೆ ತೆಗೆದುಕೊಂಡ ಶೋರೂಂ ಸಿಬ್ಬಂದಿಯು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಒಂದು ಕ್ಷಣದಲ್ಲಿ ಆದ ಅವಘಡದಿಂದ ಇಡೀ ಶೋರೂಂ ಸಿಬ್ಬಂದಿ ಮತ್ತು ಸ್ಥಳೀಯರಲ್ಲಿ ಈ ಘಟನೆಯು ಭಯದ ವಾತಾವರಣವನ್ನೇ ಸೃಷ್ಠಿಸಿತ್ತು.

ಹ್ಯುಂಡೈ ಶೋರೂಂನಿಂದ ಹೊರಗೆ ನುಗ್ಗಿದ ಕಾರಿನ ವಿಡಿಯೋ ಇಲ್ಲಿದೆ ನೋಡಿ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಒಂದು ವೇಳೆ ನೀವು ಕೂಡಾ ಯಾವುದೇ ಕಾರು ಅಥವಾ ಬೈಕ್‌ಗಳನ್ನು ಪರಿಶೀಲನೆ ಮಾಡುವಾಗ ಯಾವುದೇ ಕಾರಣಕ್ಕೂ ಫೀಚರ್ಸ್ ಬಗೆಗೆ ತಿಳಿದುಕೊಳ್ಳುವಾಗ ಅವರಸ ಬೇಡವೇ ಬೇಡ. ಪರಿಣಿತಿ ಹೊಂದಿರುವವರು ಎನಾದ್ರು ಮಾಹಿತಿ ನೀಡುತ್ತಿರುವಾಗ ಅದರ ಬಗ್ಗೆ ಪರಿಶೀಲಿಸಿ ವಾಹನ ಚಾಲನೆ ಮಾಡಿ. ಇಲ್ಲವಾದ್ರೆ ಅವಸರದಿಂದ ವರ್ತಿಸಿದ್ದಲ್ಲಿ ಇಂತಹ ಅವಘಡಗಳು ತಪ್ಪಿದ್ದಲ್ಲ.

Most Read Articles

Kannada
English summary
Car Purchase Gone Wrong: Woman Crashes Display Car In Hyundai Showroom. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X