ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ದೇಶದಲ್ಲಿನ ಬಹುತೇಕ ರಸ್ತೆಗಳು ಕಿರಿದಾಗಿರುವ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ. ಹೀಗಾಗಿ ವಾಹನ ಸವಾರರ ನಡುವೆ ಸಣ್ಣ ಪುಟ್ಟ ಗಲಾಟೆಗಳಾಗುವುದು ಹೊಸ ಸುದ್ದಿ ಏನು ಅಲ್ಲಾ.

By Rahul Ts

ದೇಶದಲ್ಲಿನ ಬಹುತೇಕ ರಸ್ತೆಗಳು ಕಿರಿದಾಗಿರುವ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ. ಹೀಗಾಗಿ ವಾಹನ ಸವಾರರ ನಡುವೆ ಸಣ್ಣ ಪುಟ್ಟ ಗಲಾಟೆಗಳಾಗುವುದು ಹೊಸ ಸುದ್ದಿ ಏನು ಅಲ್ಲಾ. ಆದ್ರೆ ಇಲ್ಲೊಬ್ಬ ಮಹಿಳೆ ಮಾತ್ರ ತನ್ನ ವಾಹನಕ್ಕೆ ದಾರಿ ಬಿಟ್ಟುಕೊಡದ ಆಟೋ ಚಾಲಕನಿಗೆ ಗನ್ ಹಿಡಿದು ಅವಾಜ್ ಹಾಕಿದ್ದಾಳೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಟ್ರಾಫಿಕ್ ಕಿರಿಕಿರಿಯಲ್ಲಿ ಕೆಲವು ಸಂದರ್ಭಗಳಲ್ಲಿ ವಾಹನಗಳು ಒಂದಕ್ಕೊಂದು ಟಚ್ ಆಗುವುದು ಮಾಮೂಲಿ. ಆದರೂ ಅದು ಕೆಲವೊಮ್ಮೆ ವಾಹನ ಸವಾರರ ನಡುವೆ ದೊಡ್ಡ ದೊಡ್ಡ ಗಲಾಟೆಗಳಿಗೆ ಕಾರಣವಾಗುತ್ತೆ. ಇಲ್ಲೂ ಕೂಡಾ ಅಂತದ್ದೆ ಪ್ರಕರಣ ನಡೆದಿದ್ದು, ಆಟೋ ಚಾಲಕ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕೋಪಗೊಂಡ ಮಹಿಳೆಯೊಬ್ಬಳು ಗನ್‌ನಿಂದ ಶೂಟ್ ಮಾಡಲು ಮುಂದಾದ ಘಟನೆ ನಡೆದಿದೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಟ್ರಾಫಿಕ್ ದಟ್ಟಣೆಯಲ್ಲಿ ಸ್ಕೂಟರ್‌ ರೈಡ್ ಮಾಡುತ್ತಿದ್ದಾಗ ತನ್ನ ಸ್ಕೂಟರ್‌ಗೆ ಆಟೋ ಚಾಲಕ ಅಡ್ಡಿಪಡಿಸಿದ್ದಾನೆ ಎಂದು ಕೂಪಿತಗೊಂಡ ಮಹಿಳೆಯು ಸಾರ್ವಜನಿಕವಾಗಿ ಗನ್‌ ಹಿಡಿದು ಶೂಟ್ ಮಾಡಲು ಯತ್ನಿಸಿದ್ದು, ಇದೀಗ ಮಹಿಳೆಯ ರೌದ್ರಾವತಾರದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಹಾಗಾದ್ರೆ ಅಲ್ಲಿ ಅಸಲಿಗೆ ನಡೆದುದ್ದೇನು? ಅಷ್ಟಕ್ಕೂ ಆ ಮಹಿಳೆಯು ಗನ್‌ನಿಂದ ಆಟೋ ಚಾಲಕನನ್ನು ಶೂಟ್ ಮಾಡಲು ಯತ್ನಿಸಿದ್ದು ಏಕೆ? ಈ ವಿಚಾರಗಳನ್ನು ತಿಳಿಯಲು ಕೆಳಗಿನ ಸ್ಲೈಡರ್‍‍ಗಳಲ್ಲಿ ಓದಿ..

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಮೇಲೆ ಹೇಳಿರುವ ಹಾಗೆ ವಾಹನ ಚಲಾಯಿಸುವಾಗ ಕೋಪಗೊಳ್ಳುವುದು ತಪ್ಪು. ಯಾಕೆಂದ್ರೆ ಅದರಿಂದಾಗುವ ಅಪಘಾತಗಳು ಕೂಡಾ ಹೆಚ್ಚು. ಆದ್ರೆ ಇಲ್ಲಿ ಒಬ್ಬ ಮಹಿಳೆ ಮಾತ್ರ ತನ್ನ ಕೋಪವನ್ನು ಸಂಭಾಳಿಸಿಕೊಳ್ಳದೆ ಆಟೋ ಡ್ರೈವರ್‍‌ನನ್ನು ಶೂಟ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾಳೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ದೆಹಲಿ ಸಮೀಪದಲ್ಲಿರುವ ಗುರ್‍‍‍ಗ್ರಾಮ್ ಭಾವನಿ ಎನ್‍‍ಕ್ಲೇವ್ ಸೊಸೈಟಿಯವರಾದ ಆಟೋ ಡ್ರೈವರ್ ಸುನೀಲ್ ಕಟಾರಿ ಅವರು ತನ್ನ ಆಟೋ ರಿಕ್ಷಾವನ್ನು ಕಿರಿದಾದ ರಸ್ತೆಯಲ್ಲಿ ನಿಲ್ಲಿಸಿ ಫೋನಿನಲ್ಲಿ ಮಾತನಾಡಿದ್ದೆ ದೊಡ್ಡ ತಪ್ಪಾಗಿ ಹೋಗಿದೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಫೋನ್‌ನಲ್ಲಿ ಮಾತನಾಡುತ್ತಿದ್ದರಿಂದಲೇ ತನ್ನ ಕೆಲಸಕ್ಕೆ ತಡವಾಯ್ತು ಎಂದು ಕೋಪಗೊಂಡ 35 ವರ್ಷದ ಸಪ್ನಾ ಎಂಬ ಮಹಿಳೆಯು ಆಟೋ ಡ್ರೈವರ್ ಜೊತೆಗೆ ಜಗಳಕ್ಕೆ ಇಳಿದ್ದಾಳೆ. ಆದ್ರೆ ಜಗಳವಷ್ಟೇ ಆಗಿದ್ದರೆ ಅದು ಸುದ್ದಿಯೇ ಆಗಿರುತ್ತಿರಲಿಲ್ಲ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಗನ್ ತೆಗೆದೆ ಬಿಟ್ಲು

ಆಟೋ ಡ್ರೈವರ್ ಜೊತೆ ಜಗಳ ಮಾಡಿದ ಸಪ್ನಾ ಕೆಲವು ನಿಮೀಷಗಳ ಕಾಲ ಆ ಸ್ಥಳದಿಂದ ಹೊರಟು ಹೊದ್ಲು. ಇನ್ನೇನು ಜಗಳ ಮುಗಿತು ಅಂದುಕೊಳ್ಳುವಷ್ಟರಲ್ಲಿ ತನ್ನ ಪತಿ ಯೂನಿಸ್, ಕೆಲವರು ಸ್ನೇಹಿತನನ್ನು ಕರೆದುಕೊಂಡು ಬಂದ ಮತ್ತೆ ಜಗಳಕ್ಕಿಳಿದ ಈ ಲೇಡಿ ಇದ್ದಕ್ಕಿದ್ದಂತೆ ಗನ್ ಎತ್ತಿಕೊಂಡು ಶೂಟ್ ಮಾಡಲು ಮುಂದಾದಳು.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಈ ವೇಳೆ ಸರಿಯಾಗಿ ಗನ್ ರೀಲೋಡ್ ಆಗದ ಹಿನ್ನೆಲೆಯಲ್ಲಿ ಕೆಲಕಾಲ ರೀಲೋಡ್ ಮಾಡಲು ಯತ್ನಿಸಿದ ಸಪ್ನಾ ಆಟೋ ಡ್ರೈವರ್ ಕಥೆ ಮುಗಿಸಿ ಬೀಡುವೆ ಅಂತಾ ಜೋರಾಗಿ ಅವಾಜ್ ಹಾಕ್ತಾಳೆ. ಅಷ್ಟರಲ್ಲೇ ಅಲ್ಲಿಯೇ ಇದ್ದ ಕೆಲವರು ಗನ್ ಕಸಿದುಕೊಂಡು ನಡೆಯಬಹುದು ಒಂದು ದುರಂತವನ್ನು ವಿಫಲಗೊಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಈ ಘಟನೆಯನ್ನು ಅಲ್ಲಿದ್ದ ಯುವಕರು ತಮ್ಮ ಮೊಬೈಲ್‍‍ನಿಂದ ವೀಡಿಯೊ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಖತರ್ನಾಕ್ ಲೇಡಿಯು ಸಾರ್ವಜನಿಕವಾಗಿಯೇ ಅವಾಜ್ ಹಾಕುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಲೇಡಿ ಕೈಯಲ್ಲಿದ್ದ ಗನ್ ಸೀಜ್

ಆಟೋ ಡ್ರೈವರ್ ಸುನೀಲ್ ತನ್ನ ಮೇಲೆ ದಾಳಿ ಮಾಡಿದ ಸಪ್ನಾ ಮತ್ತು ಆಕೆಯ ಪತಿ ಯೂನಸ್ ಮತ್ತು ಪತಿಯ ಸ್ನೇಹಿತನ ಮೇಲೆ ಗುರುಗ್ರಾಮ್‍‍ನ 9ಎ ಪೊಲೀಸ್ ಸ್ಟೇಷನ್‍‍ನಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದು, ಐಪಿಸಿ ಸೆಕ್ಷನ್ 307, 323 ಮತ್ತು 337ರ ಅಡಿ ಪ್ರಕರಣ ದಾಖಲಿಸಿ ಗನ್ ಸೀಜ್ ಮಾಡಲಾಗಿದೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಇನ್ನು ಭಾರತದಲ್ಲಿ ವಾಹನ ಚಾಲಕರ ನಡುವಿನ ದಿನನಿತ್ಯ ಸಣ್ಣಪುಟ್ಟ ಕಿರಿಕಿರಿಗಳು ನಡೆಯುತ್ತಲೇ ಇರುತ್ತವೆ. ಹಾಗಂತ ಗನ್ ತೊರಿಸಿ ಶೂಟ್ ಮಾಡುವೆ ಅಂದ್ರೆ ಹೆಂಗೆ ಅಂತಾ? ಆದ್ದರಿಂದ ವಾಹನ ಚಾಲಕರು ಕೆಲವು ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸುವ ಮೂಲಕ ಇಂತವರಿಂದ ದೂರ ಇರುವುದೇ ವಾಸಿ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಇನ್ನು ಕೆಲವು ಸಂದರ್ಭಗಳಲ್ಲಿ ವಾಹನ ಚಾಲಕರು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ದೊಡ್ದ ರಾದ್ದಾಂತಕ್ಕೆ ಕಾರಣವಾಗುತ್ತವೆ ಎನ್ನುವುದನ್ನ ಅಲ್ಲಗಳೆಯುವಂತಿಲ್ಲ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಮಧ್ಯಪಾನ ಮಾಡಿ ವಾಹನ ಚಲಾಯಿಸದಿರಿ

ಮಧ್ಯಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವುದು ದುರಂತಗಳ ಮೂಲ ಕಾರಣವಾಗಿದೆ. ಹೀಗಾಗಿ ಮಧ್ಯಪಾನ ಮಾಡಿ ದಯವಿಟ್ಟು ವಾಹನ ಚಾಲನೆ ಮಾಡಲೇಬೇಡಿ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಮೊಬೈಲ್ ಫೋನ್ ಬಳಸಬೇಡಿ

ಇತ್ತೀಚೆಗಿನ ವರದಿಗಳ ಪ್ರಕಾರ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಅಪಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿವಹಿಸಿದ್ದಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರಿ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಚಾಲನೆಯಲ್ಲಿ ಸ್ಪರ್ಧೆ ಬೇಡ

ಬೇರೆಯವರನ್ನು ಮೆಚ್ಚಿಸಲು ನೀವು ಯಾವುದೇ ಕಾರಣಕ್ಕೂ ಚಾಲನೆಯಲ್ಲಿ ಸ್ಪರ್ಧೆಗಿಳಿಯಬೇಡಿ. ಈ ವೇಳೆ ಅನಾಹುತಗಳೇ ಹೆಚ್ಚು. ಏಕೆಂದರೆ ನಿಮ್ಮಂತೆಯೆ ನಿಮ್ಮ ಹಿಂದಿರುವ ವಾಹನವು ಮಾಡಿದರೆ ನಿಮಗೂ ಹಾಗು ಅವರಿಗು ತೊಂದರೆ ತಪ್ಪಿದಲ್ಲ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ರಸ್ತೆ ತಿರುವುಗಳ ಬಗ್ಗೆ ಎಚ್ಚರ

ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ತಿರುವುಗಳು ಹೆಚ್ಚು. ಇಂತಹ ವೇಳೆ ಸೂಚನಾ ಫಲಕಗಳನ್ನು ಗಮನಿಸುತ್ತಾ ಪ್ರಯಾಣ ಮಾಡಿ. ಹಾಗೆಯೆ ರಸ್ಥೆಗಳಲ್ಲಿ ತಿರುವುವಾಗ ಇಂಡಿಕೇಟರ್‍‍ಗಳನ್ನು ಬಳ್ಸಿರಿ ಆಗ ನಿಮ್ಮ ಹಿಂದೆ ಹಾಗು ಮುಂಬರುವ ವಾಹನಗಳು ಕೂಡ ನಿಮ್ಮ ತಿರುವಿನ ಬಗ್ಗೆ ಅರೆತಿರುತ್ತಾರೆ.

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಮನ ಸ್ಥಿತಿ

ಇಷ್ಟೆಲ್ಲ ಆದರೂ ಚಾಲಕನ ಮನೋಸ್ಥಿತಿ ಡ್ರೈವಿಂಗ್ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ. ಹಾಗಾಗಿ ನೀವು ಒಳ್ಳೆಯ ಮೂಡ್ ನಲ್ಲಿರದಿದ್ದಲ್ಲಿ ಡ್ರೈವಿಂಗ್ ಮಾಡುವ ಗೋಜಿಗೆ ಹೋಗಬೇಡಿರಿ.

Most Read Articles

Kannada
English summary
Woman on scooter shoots at auto rickshaw driver for not giving way.
Story first published: Friday, June 22, 2018, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X