ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು..!

ಜೀವನದಲ್ಲಿ ಬಂದಿದ್ದನ್ನು ಖುಷಿಯಿಂದ ಸ್ವಿಕರಿಸಿ ಮುಂದೆ ನಡೆದ್ರೆ ಅದರಲ್ಲೇ ಯಶಸ್ವಿಯಾಗುವುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಕ್ಕೆ ಈ ಮಹಿಳೆಯ ಯಶೋಗಾಥೆಯೇ ಸಾಕ್ಷಿ.

By Manoj B.k

ಜೀವನದಲ್ಲಿ ಪ್ರತಿಯೊಬ್ಬರಿಗೂ ನಾನು ಹೀಗೆ ಆಗಬೇಕೆಂಬ ದೊಡ್ಡ ದೊಡ್ಡ ಕನಸುಗಳಿರುತ್ತವೆ. ಆದ್ರೆ ಬಹುತೇಕರ ಜೀವನದಲ್ಲಿ ಕಂಡ ಕನಸುಗಳು ಸಾಧ್ಯವಾಗುವುದು ಕಷ್ಟ ಸಾಧ್ಯ. ಹಾಗಾಂತ ಜೀವನವು ಅಷ್ಟಕ್ಕೆ ಮುಗಿಯುವುದಿಲ್ಲಾ. ಜೀವನದಲ್ಲಿ ಬಂದಿದ್ದನ್ನು ಖುಷಿಯಿಂದಲೇ ಸ್ವಿಕರಿಸಿ ಮುಂದೆ ನಡೆದಲ್ಲಿ ಅದರಲ್ಲಿಯೇ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಕ್ಕೆ ಈ ಮಹಿಳೆಯ ಯಶೋಗಾಥೆಯೇ ಸಾಕ್ಷಿ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಅಂದಹಾಗೆ, ಈ ಮಹಿಳೆಯ ಹೆಸರು ಯೋಗಿತಾ ರಘುವಂಶಿ. ಮೂಲತಃ ಮಹಾರಾಷ್ಟ್ರದವರು. ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಡಬಲ್‌ ಡಿಗ್ರಿ ಪದವೀಧರೆ ಅಂದ್ರೆ ನೀವು ನಂಬಲೇಬೇಕು. ಬಿ.ಕಾಂ ನಂತರ ಕಾನೂನು ಪದವಿ ಪಡೆದ ಇವರು ಟ್ರಕ್ ಡ್ರೈವರ್ ವೃತ್ತಿಯನ್ನೇ ಆಯ್ದುಕೊಂಡ ಕಾರಣ ಕೇಳಿದ್ರೆ ನಿಮಗೆ ಶಾಕ್ ಆಗದೆ ಇರಲಾರದು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

1991ರಲ್ಲಿ ಪದವಿ ಶಿಕ್ಷಣದ ನಂತರ ಕೆಲಕಾಲ ವಕೀಲ ವೃತ್ತಿ ಮಾಡಿದ್ದ ಇವರು ಮಧ್ಯಪ್ರದೇಶದ ಭೂಪಾಲ್ ಮೂಲದ ರಘುವಂಶಿ ಎಂಬುವುರನ್ನು ವಿವಾಹವಾಗಿದ್ದರು. ಮೊದಮೊದಲು ಖುಷಿಯಾಗಿಯೇ ನಡೆಯುತ್ತಿದ್ದ ಸಂಸಾರ ನೌಕೆಯು ತದನಂತರ ಆರ್ಥಿಕ ಮುಗ್ಗಟ್ಟನಿಂದಾಗಿ ಜೀವನ ನಿರ್ವಹಣೆಯು ಒಂದು ದೊಡ್ಡ ಸವಾಲಾಗಿತ್ತು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಇದೇ ವೇಳೆ ಯೋಗಿತಾ ರಘುವಂಶಿ ಅವರ ಪತಿ ಅಪಘಾತ ಒಂದರಲ್ಲಿ ಮೃತರಾಗಿದಲ್ಲದೇ ಸಾಲ ಸೂಲ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದ ಆ ಕುಟುಂಬಕ್ಕೆ ಮನೆ ಯಜಮಾನನ ಸಾವು ಬರ ಸಿಡಿಲು ಬಡಿದಂತಾಯಿತು. ಆದ್ರೆ ಆ ಪರಿಸ್ಥಿತಿಯನ್ನು ನಿಭಾಯಿಸಿದ ಯೋಗಿತಾ ಧೈರ್ಯವನ್ನು ನಾವು ಮೆಚ್ಚಲೇಬೇಕು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಏನೇ ಕಷ್ಟ ಬಂದರೂ ಎದೆಗುಂದದೆ ಹೋರಾಡುವ ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅರಿತ ಯೋಗಿತಾ ತನ್ನ ವಕೀಲ ವೃತ್ತಿಗೆ ಗುಡ್‌ಬೈ ಹೇಳಿ ಟ್ರಕ್ ಡ್ರೈವಿಂಗ್‌ಗೆ ಸೇರಿಕೊಂಡರು. ವಕೀಲ ವೃತ್ತಿಗಿಂತಲೂ ಹೆಚ್ಚಿನ ಗಳಿಕೆ ಮಾಡಬಹುದು ಎನ್ನುವ ಉದ್ದೇಶದಿಂದ ವಕೀಲ ವೃತ್ತಿಗೆ ಯೋಗಿತಾ ಅವರು ಗುಡ್‌ಬೈ ಹೇಳಿದ್ದರಂತೆ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಇದಕ್ಕೆ ಕಾರಣ, ಹಿರಿಯ ವಕೀಲರ ಬಳಿ ವೃತ್ತಿ ಅಭ್ಯಾಸಕ್ಕೆ ಹೋಗುವಾಗ ಅವರು ನೀಡುವ ಸಂಬಳವು ತನ್ನ ಸಂಸಾರಕ್ಕೆ ಸಾಕಾಗದು ಎಂದು ನಿರ್ಧರಿಸಿದ ಯೋಗಿತಾ ಅವರು ಕಷ್ಟದ ನಡುವೆ ದಿನಂಪ್ರತಿ ಗಳಿಕೆಗಾಗಿ ಟ್ರಕ್ ಚಾಲನೆಯನ್ನು ಆಯ್ಕೆ ಮಾಡಿಕೊಂಡರು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಟ್ರಕ್ ಡ್ರೈವರ್ ವೃತ್ತಿ ಅಂದ್ರೆ ಏನೋ ಒಂದು ರೀತಿ ಕೀಳಾಗಿ ಕಾಣುವ ಜನರ ಮಧ್ಯೆ ಅದೇ ವೃತ್ತಿಯಲ್ಲೇ ಏನಾದ್ರೂ ಸಾಧನೆ ಮಾಡಲೇಬೇಕೆಂದುಕೊಂಡ ಯೋಗಿತಾ ಅವರು ನಿಯತ್ತಿನ ದುಡಿಮೆಗೆ ಯಾವ ಕೆಲಸ ಆದ್ರೆ ಏನಂತೆ ಎಂದು ಟ್ರಕ್ ಸ್ಟ್ರೀರಿಂಗ್ ಹಿಡಿದೆ ಬಿಟ್ರು...

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಸದ್ಯ ಮಹಾರಾಷ್ಟ್ರದಲ್ಲಿ ನೆಲೆಸಿರುವ ಯೋಗಿತಾ ರಘುವಂಶಿಯವರು ಮುಂಬೈನಿಂದ ದೇಶದ ವಿವಿಧ ಭಾಗಗಳಿಗೆ ಗೂಡ್ಸ್ ಸಾಗಾಣಿಕೆಗಾಗಿ ಟ್ರಕ್ ಚಾಲನೆ ಮಾಡುತ್ತಿದ್ದು, ದೇಶದ ಏಕೈಕ ಸರ್ಟಿಫೈಡ್ ಟ್ರಕ್ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಸದ್ಯ ಯೋಗಿತಾ ಅವರು ಸ್ವಂತಕ್ಕೊಂದು ಟ್ರಕ್ ಖರೀದಿಸಿ ಬಾಡಿಗೆಗೆ ಬಿಟ್ಟಿದ್ದು, 2013ರಿಂದ ಇದುವರೆಗೆ ದೇಶದ ವಿವಿಧಡೆ ಬರೋಬ್ಬರಿ 5 ಲಕ್ಷ ಕಿ.ಮೀ ಟ್ರಕ್ ಚಾಲನೆ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಒಂದೇ ಒಂದು ಸಣ್ಣ ಅಪಘಾತವಾಗದಂತೆ ಎಚ್ಚರಿಕೆಯ ವಾಹನ ಚಾಲನೆ ಮಾಡಿರುವುದನ್ನು ಮೆಚ್ಚಲೇಬೇಕು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

48 ವರ್ಷದ ಯೋಗಿತಾ ಅವರಿಗೆ ಇಬ್ಬರು ಪುತ್ರಿಯರು ಸಹ ಇದ್ದು, ಇಬ್ಬರೂ ಸಹ ಪದವಿ ಶಿಕ್ಷಣ ಓದುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಟ್ರಕ್ ಚಾಲನೆಯನ್ನೇ ನಂಬಿಕೊಂಡಿರುವ ಯೋಗಿತಾ ಅವರ ಜೀವನ ಶೈಲಿಯನ್ನು ನೋಡಿದ್ರೆ ಪ್ರತಿಯೊಬ್ಬರು ಹೆಮ್ಮೆಪಡಬೇಕಾದ ವಿಚಾರ.

Most Read Articles

Kannada
English summary
We Salute the Spirit of India’s Most Academically Qualified Woman Truck Driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X