‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ತಮ್ಮ ಊರುಗಳನ್ನು ಬಿಟ್ಟು ಬೇರೆ ಊರುಗಳಲ್ಲಿರುವವರು ತಮ್ಮ ಕುಟುಂಬಗಳಿಂದ ದೂರವಿರ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ದೂರದ ಊರಿನಲ್ಲಿ ಸಿಲುಕಿದ್ದ ತನ್ನ ಮಗನನ್ನು ವಾಪಸ್ ಕರೆತರಲು ತಾಯಿಯೊಬ್ಬರು ಸ್ಕೂಟರ್‌ನಲ್ಲಿ ತೆರಳಿದ ಘಟನೆ ನಡೆದಿದೆ.

‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ವಯಸ್ಸಾದ ತಾಯಿಗೆ ಮಗ ನೆರವಾಗಬೇಕು. ಆದರೆ ವಯಸ್ಸಾದ ತಾಯಿಯೇ ತನ್ನ ಮಗನಿಗಾಗಿ ಬಹುದೂರ ಪ್ರಯಾಣಿಸಿದ್ದಾರೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ 50 ವರ್ಷ ವಯಸ್ಸಿನ ರಜಿಯಾ ಬೇಗಂ ಎಂಬ ಮಹಿಳೆಯೇ ತಮ್ಮ ಮಗನನ್ನು ಕರೆತರಲು ಬಹುದೂರ ಪ್ರಯಾಣಿಸಿದ ಮಹಿಳೆ. ಲಾಕ್‌ಡೌನ್‌ನಿಂದಾಗಿ ಆಂಧ್ರಪ್ರದೇಶದಲ್ಲಿ ನೆಲ್ಲೂರಿನಲ್ಲಿ ಸಿಲುಕಿದ್ದ ತಮ್ಮ ಮಗನನ್ನು ಕರೆತರಲು ಅವರು ತಮ್ಮ ಸ್ಕೂಟರ್‌ನಲ್ಲಿ 1400 ಕಿ.ಮೀ ಪ್ರಯಾಣಿಸಿದ್ದಾರೆ.

‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಈ ಪ್ರಯಾಣವನ್ನು ಪೂರ್ಣಗೊಳಿಸಲು ಅವರು 3 ದಿನಗಳನ್ನು ತೆಗೆದುಕೊಂಡಿದ್ದಾರೆ. ಸೋಮವಾರ ತಮ್ಮ ಪ್ರಯಾಣವನ್ನು ಆರಂಭಿಸಿದ ಅವರು ಮಂಗಳವಾರ ಮಧ್ಯಾಹ್ನ 700 ಕಿ.ಮೀ ಪ್ರಯಾಣಿಸುವ ಮೂಲಕ ಆಂಧ್ರಪ್ರದೇಶದ ನೆಲ್ಲೂರು ತಲುಪಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಬುಧವಾರ ಸಂಜೆ ತಮ್ಮ ಮಗನ ಜೊತೆ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಹೀಗೆ ಮೂರು ದಿನದಲ್ಲಿ ಒಟ್ಟಾರೆಯಾಗಿ 1400 ಕಿ.ಮೀ ಪ್ರಯಾಣಿಸಿದ್ದಾರೆ. ಅಮ್ಮ ಮಗ ಇಬ್ಬರಿಗೂ ಪ್ರಯಾಣಿಸಲು ಪೊಲೀಸರು ಸಹಾಯ ಮಾಡಿದ್ದಾರೆ.

‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಅವರನ್ನು ಅನೇಕ ಸ್ಥಳಗಳಲ್ಲಿ ತಡೆದು ನಿಲ್ಲಿಸಲಾಗಿತ್ತು. ತಮ್ಮ ಮಗನನ್ನು ವಾಪಸ್ ಕರೆ ತರಲು ರಜಿಯಾ ಬೇಗಂರವರಿಗೆ ಬೋಧನ್‌ನ ಸಹಾಯಕ ಆಯುಕ್ತರಾದ ವಿ ಜೈಪಾಲ್ ರೆಡ್ಡಿರವರು ನೆರವು ನೀಡಿದ್ದಾರೆ ಎಂದು ವರದಿಯಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಕಾರಣಕ್ಕೆ ರಸ್ತೆಗಳು ನಿರ್ಜನವಾಗಿದ್ದು, ಹಳ್ಳಿಗಳು ಖಾಲಿಯಾಗಿದ್ದವು ಎಂದು ರಜಿಯಾ ಬೇಗಂ ಹೇಳಿದ್ದಾರೆ. ತಮ್ಮನ್ನು ಅಂತರರಾಜ್ಯ ಗಡಿಯಲ್ಲಿ ತಡೆಯಲಿಲ್ಲವೆಂದು ಹಾಗೂ ಪೊಲೀಸರು ತಮಗೆ ಸಂಪೂರ್ಣ ಸಹಾಯ ಮಾಡಿದ್ದಾರೆಂದು ಅವರು ಹೇಳಿದ್ದಾರೆ.

‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಲಾಕ್‌ಡೌನ್‌ನಿಂದಾಗಿ ಅನೇಕ ಜನರು ತಮ್ಮ ಮನೆಗಳಿಂದ ದೂರದಲ್ಲಿರುವ ಬೇರೆ ಸ್ಥಳಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ತಮ್ಮ ಊರುಗಳನ್ನು ತಲುಪಲು ಅವರಿಗೆ ಸಂಬಂಧಪಟ್ಟ ರಾಜ್ಯಗಳ ಪೊಲೀಸರು ಸಹಾಯ ಮಾಡುತ್ತಿದ್ದಾರೆ. ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಅವರು ಇರುವ ಜಾಗದಲ್ಲಿಯೇ ತಡೆದು ನಿಲ್ಲಿಸಲಾಗಿದೆ.

Most Read Articles

Kannada
English summary
Women rides 1400km on scooty to bring her son home from Andhra Pradesh during lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X