ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಸಾರಿಗೆ ವ್ಯವಸ್ಥೆಯನ್ನು ಉನ್ನತೀಕರಿಸಲು ಬುಲೆಟ್ ಟ್ರೈನ್ ಸೇವೆಗಳನ್ನು ಆರಂಭಿಸುತ್ತಿವೆ. ಇದರಲ್ಲಿ ಚೀನಾ ಮತ್ತು ಜಪಾನ್ ಈಗಾಗಲೇ ಪ್ರಮುಖ ನಗರಗಳನ್ನು ಸಂಪರ್ಕಿಸಲು ಬುಲೆಟ್ ಟ್ರೈನ್ ಸೇವೆಗಳನ್ನು ಅಧಿಕೃತವಾಗಿ ಆರಂಭಿಸಿದ್ದು, ಇದೀಗ ಮತ್ತೊಂದು ಬಹುನೀರಿಕ್ಷಿತ ವೇಗದ ಬುಲೆಟ್ ಟ್ರೈನ್ ಮಾದರಿಯ ಪ್ರಾಯೋಗಿಕ ಪರೀಕ್ಷೆಗೆ ಜಪಾನ್ ಚಾಲನೆ ನೀಡಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಬುಲೆಟ್ ಟ್ರೈನ್‌ಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು ಜಪಾನ್‌ನಲ್ಲಿ ಮಾತ್ರವಲ್ಲದೇ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಬುಲೆಟ್ ಟ್ರೈನ್ ಒದಗಿಸುವ ಬೃತಹ್ ಯೋಜನೆಯನ್ನು ತನ್ನದಾಗಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮತ್ತಷ್ಟು ವೇಗದಲ್ಲಿ ಚಲಿಸಬಲ್ಲ ಹೊಸ ಬುಲೆಟ್ ಟ್ರೈನ್ ಮಾದರಿಗಳನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥ ಕಾರ್ಯವನ್ನು ಕೈಗೊಂಡಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ನಿನ್ನೆಯಷ್ಟೇ ಅಲ್ಫಾ-ಎಕ್ಸ್ ಹೆಸರಿನ ಹೊಸ ಬುಲೆಟ್ ಟ್ರೈನ್ ಮಾದರಿಯ ಪರೀಕ್ಷಾರ್ಥ ಕಾರ್ಯಕ್ಕೆ ಚಾಲನೆ ನೀಡಿರುವ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು ಗಂಟೆಗೆ 400 ಕಿ.ಮಿ ವೇಗದಲ್ಲಿ ಪರೀಕ್ಷಾರ್ಥ ವೇಗದ ಗುರಿ ಮಟ್ಟಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಈ ಮೂಲಕ ಅಲ್ಪಾ-ಎಕ್ಸ್ ಬುಲೆಟ್ ಟ್ರೈನ್ ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸಾಮಾನ್ಯ ರೈಲುಗಳ ಹಳಿಗಳ ಮೇಲೆಯೇ ಚಲಿಸುವ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಜಪಾನ್ ದೇಶದ ಈಶಾನ್ಯ ಭಾಗದಲ್ಲಿರುವ ಸೆಂಡೈ ಮತ್ತು ಅಮೊರಿ ನಗರಗಳ ನಡುವೆ ಹೊಸ ಬುಲೆಟ್ ಟ್ರೈನ್ ವೇಗದ ಚಾಲನೆಯ ಕುರಿತು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 280 ಕಿ.ಮಿ ಅಂತರದಲ್ಲಿರುವ ಈ ಎರಡು ನಗರಗಳನ್ನು ಹೊಸ ಅಲ್ಪಾ-ಎಕ್ಸ್ ಬುಲೆಟ್ ಟ್ರೈನ್ ನಿಗದಿತ ಅವಧಿಯೊಳಗೆ ಗುರಿತಲುಪಲು ಯಶಸ್ವಿಯಾಗಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಸದ್ಯ ಚೀನಾದಲ್ಲಿ ಕಾರ್ಯಚರಣೆ ನಡೆಸುತ್ತಿರುವ ಫಕ್ಸಿಂಗ್ ಬುಲೆಟ್ ಟ್ರೈನ್ ಗಂಟೆಗೆ 350 ಕಿ.ಮಿ ವೇಗದಲ್ಲಿ ಚಲಿಸುತ್ತಿದ್ದು, ಫಕ್ಸಿಂಗ್ ಟ್ರೈನ್‌ಗಿಂತಲೂ ಸುಧಾರಿತ ತಂತ್ರಜ್ಞಾನ ಮತ್ತು ವೇಗದ ಟಾಪ್ ಸ್ಪೀಡ್ ಹೊಂದಿರುವ ಅಲ್ಪಾ-ಎಕ್ಸ್ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಕೇವಲ 4 ಕಿ.ಮಿ ಅಂತರದಲ್ಲಿ 400ಕಿ.ಮಿ ಟಾಪ್ ಸ್ಪೀಡ್ ಸಾಧಿಸುವ ಅಲ್ಫಾ-ಎಕ್ಸ್ ಬುಲೆಟ್ ಟ್ರೈನ್ ಮಾದರಿಯು 3 ಕಿ.ಮಿ ಅಂತರದಲ್ಲಿ ಟಾಪ್‌ ಸ್ಪೀಡ್‌ನಿಂದ ಶೂನ್ಯ ವೇಗ ಸಾಧಿಸುತ್ತದೆ. ಹೀಗಾಗಿ ಫಕ್ಸಿಂಗ್ ಟ್ರೈನ್‌ಗಿಂತಲೂ ಅಲ್ಫಾ-ಎಕ್ಸ್ ಹೆಚ್ಚಿನ ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಇನ್ನು ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು 1964ರಿಂದ ಬುಲೆಟ್ ಟ್ರೈನ್ ಮಾದರಿಗಳ ನಿರ್ಮಾಣದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದು, ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಪಡಿಸಲಾಗಿರುವ ಅಲ್ಫಾ-ಎಕ್ಸ್ ಮಾದರಿಯು ಪ್ರಕೃತಿ ವಿಕೋಪಗಳಾಗದ ಭೂಕಂಪನ ಪರಿಣಾಮದಿಂದ ಯಾವುದೇ ಹಾನಿಯಾಗದಿರುವಂತೆ ಹೊಸ ವ್ಯವಸ್ಥೆಯನ್ನು ಸೇರಿಸಲಾಗಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಭೂಕಂಪನ ಮತ್ತು ಇತರೆ ಯಾವುದೇ ದುರಂತ ಸಂಭವಿಸಬಹುದಾದ ಸಂದರ್ಭಗಳಲ್ಲಿ ಬುಲೆಟ್ ಟ್ರೈನ್‌ಗಳಲ್ಲಿ ಅತಿ ಕಡಿಮೆ ಅಂತರ ನಿಲುಗಡೆ ಮಾಡುವಂತ ವ್ಯವಸ್ಥೆ ಇದರಲ್ಲಿದ್ದು, ವಿದ್ಯುತ್ಕಾಂತೀಯ ಬ್ರೇಕ್‌‌ಗಳ ಜೊತೆಗೆ ಛಾವಣಿಯ-ಆರೋಹಿತವಾದ ವಾಯು ಬಲವೈಜ್ಞಾನಿಕ ಬ್ರೇಕ್‌ಗಳನ್ನು ಇದರಲ್ಲಿ ಪರಿಚಯಿಸಲಾಗುತ್ತಿದೆ.

MOST READ: ದೇವೇಗೌಡರ ಕನಸಿನ ಯೋಜನೆಯನ್ನು ಸಹಕಾರಗೊಳಿಸಿದ್ದೇ ಪ್ರಧಾನಿ ಮೋದಿ..!

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಹೀಗಾಗಿ ಬುಲೆಟ್ ಟ್ರೈನ್‌ಗಳಿಂದ ಆಗಾಬಹುದಾದ ಅವಘಡಗಳನ್ನು ತಗ್ಗಿಸಲು ಇದು ಸಾಕಷ್ಟು ಸಹಕಾರಿಯಾಗುತ್ತಿದ್ದು, ಭವಿಷ್ಯದಲ್ಲಿ ಹಳಿಗಿಳಿಯಲಿರುವ ಬುಲೆಟ್ ಟ್ರೈನ್‌ಗಳಲ್ಲ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯ ಹೊಸ ತಂತ್ರಜ್ಞಾನ ಹೆಚ್ಚು ಸದ್ದು ಮಾಡುವ ನೀರಿಕ್ಷೆಯಿದೆ ಎನ್ನಬಹುದು.

Most Read Articles

Kannada
English summary
World's Fastest Bullet Train Has A Bonkers Top Speed & An Even Crazier Nose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X