Just In
Don't Miss!
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!
ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಸಾರಿಗೆ ವ್ಯವಸ್ಥೆಯನ್ನು ಉನ್ನತೀಕರಿಸಲು ಬುಲೆಟ್ ಟ್ರೈನ್ ಸೇವೆಗಳನ್ನು ಆರಂಭಿಸುತ್ತಿವೆ. ಇದರಲ್ಲಿ ಚೀನಾ ಮತ್ತು ಜಪಾನ್ ಈಗಾಗಲೇ ಪ್ರಮುಖ ನಗರಗಳನ್ನು ಸಂಪರ್ಕಿಸಲು ಬುಲೆಟ್ ಟ್ರೈನ್ ಸೇವೆಗಳನ್ನು ಅಧಿಕೃತವಾಗಿ ಆರಂಭಿಸಿದ್ದು, ಇದೀಗ ಮತ್ತೊಂದು ಬಹುನೀರಿಕ್ಷಿತ ವೇಗದ ಬುಲೆಟ್ ಟ್ರೈನ್ ಮಾದರಿಯ ಪ್ರಾಯೋಗಿಕ ಪರೀಕ್ಷೆಗೆ ಜಪಾನ್ ಚಾಲನೆ ನೀಡಿದೆ.

ಬುಲೆಟ್ ಟ್ರೈನ್ಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು ಜಪಾನ್ನಲ್ಲಿ ಮಾತ್ರವಲ್ಲದೇ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಬುಲೆಟ್ ಟ್ರೈನ್ ಒದಗಿಸುವ ಬೃತಹ್ ಯೋಜನೆಯನ್ನು ತನ್ನದಾಗಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮತ್ತಷ್ಟು ವೇಗದಲ್ಲಿ ಚಲಿಸಬಲ್ಲ ಹೊಸ ಬುಲೆಟ್ ಟ್ರೈನ್ ಮಾದರಿಗಳನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥ ಕಾರ್ಯವನ್ನು ಕೈಗೊಂಡಿದೆ.

ನಿನ್ನೆಯಷ್ಟೇ ಅಲ್ಫಾ-ಎಕ್ಸ್ ಹೆಸರಿನ ಹೊಸ ಬುಲೆಟ್ ಟ್ರೈನ್ ಮಾದರಿಯ ಪರೀಕ್ಷಾರ್ಥ ಕಾರ್ಯಕ್ಕೆ ಚಾಲನೆ ನೀಡಿರುವ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು ಗಂಟೆಗೆ 400 ಕಿ.ಮಿ ವೇಗದಲ್ಲಿ ಪರೀಕ್ಷಾರ್ಥ ವೇಗದ ಗುರಿ ಮಟ್ಟಿದೆ.

ಈ ಮೂಲಕ ಅಲ್ಪಾ-ಎಕ್ಸ್ ಬುಲೆಟ್ ಟ್ರೈನ್ ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸಾಮಾನ್ಯ ರೈಲುಗಳ ಹಳಿಗಳ ಮೇಲೆಯೇ ಚಲಿಸುವ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಪಾನ್ ದೇಶದ ಈಶಾನ್ಯ ಭಾಗದಲ್ಲಿರುವ ಸೆಂಡೈ ಮತ್ತು ಅಮೊರಿ ನಗರಗಳ ನಡುವೆ ಹೊಸ ಬುಲೆಟ್ ಟ್ರೈನ್ ವೇಗದ ಚಾಲನೆಯ ಕುರಿತು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 280 ಕಿ.ಮಿ ಅಂತರದಲ್ಲಿರುವ ಈ ಎರಡು ನಗರಗಳನ್ನು ಹೊಸ ಅಲ್ಪಾ-ಎಕ್ಸ್ ಬುಲೆಟ್ ಟ್ರೈನ್ ನಿಗದಿತ ಅವಧಿಯೊಳಗೆ ಗುರಿತಲುಪಲು ಯಶಸ್ವಿಯಾಗಿದೆ.

ಸದ್ಯ ಚೀನಾದಲ್ಲಿ ಕಾರ್ಯಚರಣೆ ನಡೆಸುತ್ತಿರುವ ಫಕ್ಸಿಂಗ್ ಬುಲೆಟ್ ಟ್ರೈನ್ ಗಂಟೆಗೆ 350 ಕಿ.ಮಿ ವೇಗದಲ್ಲಿ ಚಲಿಸುತ್ತಿದ್ದು, ಫಕ್ಸಿಂಗ್ ಟ್ರೈನ್ಗಿಂತಲೂ ಸುಧಾರಿತ ತಂತ್ರಜ್ಞಾನ ಮತ್ತು ವೇಗದ ಟಾಪ್ ಸ್ಪೀಡ್ ಹೊಂದಿರುವ ಅಲ್ಪಾ-ಎಕ್ಸ್ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಕೇವಲ 4 ಕಿ.ಮಿ ಅಂತರದಲ್ಲಿ 400ಕಿ.ಮಿ ಟಾಪ್ ಸ್ಪೀಡ್ ಸಾಧಿಸುವ ಅಲ್ಫಾ-ಎಕ್ಸ್ ಬುಲೆಟ್ ಟ್ರೈನ್ ಮಾದರಿಯು 3 ಕಿ.ಮಿ ಅಂತರದಲ್ಲಿ ಟಾಪ್ ಸ್ಪೀಡ್ನಿಂದ ಶೂನ್ಯ ವೇಗ ಸಾಧಿಸುತ್ತದೆ. ಹೀಗಾಗಿ ಫಕ್ಸಿಂಗ್ ಟ್ರೈನ್ಗಿಂತಲೂ ಅಲ್ಫಾ-ಎಕ್ಸ್ ಹೆಚ್ಚಿನ ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!
ಇನ್ನು ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯು 1964ರಿಂದ ಬುಲೆಟ್ ಟ್ರೈನ್ ಮಾದರಿಗಳ ನಿರ್ಮಾಣದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದು, ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಪಡಿಸಲಾಗಿರುವ ಅಲ್ಫಾ-ಎಕ್ಸ್ ಮಾದರಿಯು ಪ್ರಕೃತಿ ವಿಕೋಪಗಳಾಗದ ಭೂಕಂಪನ ಪರಿಣಾಮದಿಂದ ಯಾವುದೇ ಹಾನಿಯಾಗದಿರುವಂತೆ ಹೊಸ ವ್ಯವಸ್ಥೆಯನ್ನು ಸೇರಿಸಲಾಗಿದೆ.

ಭೂಕಂಪನ ಮತ್ತು ಇತರೆ ಯಾವುದೇ ದುರಂತ ಸಂಭವಿಸಬಹುದಾದ ಸಂದರ್ಭಗಳಲ್ಲಿ ಬುಲೆಟ್ ಟ್ರೈನ್ಗಳಲ್ಲಿ ಅತಿ ಕಡಿಮೆ ಅಂತರ ನಿಲುಗಡೆ ಮಾಡುವಂತ ವ್ಯವಸ್ಥೆ ಇದರಲ್ಲಿದ್ದು, ವಿದ್ಯುತ್ಕಾಂತೀಯ ಬ್ರೇಕ್ಗಳ ಜೊತೆಗೆ ಛಾವಣಿಯ-ಆರೋಹಿತವಾದ ವಾಯು ಬಲವೈಜ್ಞಾನಿಕ ಬ್ರೇಕ್ಗಳನ್ನು ಇದರಲ್ಲಿ ಪರಿಚಯಿಸಲಾಗುತ್ತಿದೆ.
MOST READ: ದೇವೇಗೌಡರ ಕನಸಿನ ಯೋಜನೆಯನ್ನು ಸಹಕಾರಗೊಳಿಸಿದ್ದೇ ಪ್ರಧಾನಿ ಮೋದಿ..!

ಹೀಗಾಗಿ ಬುಲೆಟ್ ಟ್ರೈನ್ಗಳಿಂದ ಆಗಾಬಹುದಾದ ಅವಘಡಗಳನ್ನು ತಗ್ಗಿಸಲು ಇದು ಸಾಕಷ್ಟು ಸಹಕಾರಿಯಾಗುತ್ತಿದ್ದು, ಭವಿಷ್ಯದಲ್ಲಿ ಹಳಿಗಿಳಿಯಲಿರುವ ಬುಲೆಟ್ ಟ್ರೈನ್ಗಳಲ್ಲ ಜೆಆರ್ ಈಸ್ಟ್ ರೈಲ್ವೆ ಆಪರೇಟರ್ ಸಂಸ್ಥೆಯ ಹೊಸ ತಂತ್ರಜ್ಞಾನ ಹೆಚ್ಚು ಸದ್ದು ಮಾಡುವ ನೀರಿಕ್ಷೆಯಿದೆ ಎನ್ನಬಹುದು.