532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಗಾಳಿಯಂತೆ ವೇಗವಾಗಿ ಚಲಿಸುವ ಕಾರುಗಳನ್ನು ಕಾರು ಪ್ರಿಯರು ಹೆಚ್ಚು ಇಷ್ಟ ಪಡುತ್ತಾರೆ. ಇತ್ತೀಚೆಗೆ ಪ್ರಪಂಚದ ಅತಿ ವೇಗದ ಕಾರನ್ನು ಚಾಲನೆ ಮಾಡಲಾಗಿದೆ. ಗಂಟೆಗೆ 508 ಕಿ.ಮೀ ವೇಗದಲ್ಲಿ ಸಾಗುವ ಎಸ್‌ಎಸ್‌ಸಿ ಟುವಟಾರಾ ವಿಶ್ವದ ಅತಿ ವೇಗದ ಉತ್ಪಾದನಾ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಈ ಮೂಲಕ ಗಂಟೆಗೆ 447.19 ಕಿ.ಮೀ ವೇಗದಲ್ಲಿ ಸಾಗಿದ್ದ ಕೊಯಿನಿಗ್‌ಸೆಗ್ ಅಗೆರಾ ಆರ್‌ಎಸ್ ಕಾರನ್ನು ಹಿಂದಿಕ್ಕಿದೆ. ಎಸ್‌ಎಸ್‌ಸಿ ಟುವಟಾರಾ ಅತಿ ಹೆಚ್ಚಿನ ವೇಗವನ್ನು ಹೊಂದಿದೆ. ಈ ಮೂಲಕ ಇದುವರೆಗಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ತಿಂಗಳ 10ರಂದು, ಲಾಸ್ ವೇಗಾಸ್ ನಗರದ ಹೊರವಲಯದಲ್ಲಿರುವ ಖಾಲಿಯಾದ ಹಾಗೂ ನೇರವಾದ ರಸ್ತೆಗಳಲ್ಲಿ, ರಸ್ತೆ ಟಯರ್ ಹಾಗೂ ರೇಸ್ ರಹಿತ ಇಂಧನದೊಂದಿಗೆ ಎಸ್‌ಎಸ್‌ಸಿ ಟುವಟಾರಾವನ್ನು ಪರೀಕ್ಷಿಸಲಾಯಿತು.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಈ ಪರೀಕ್ಷೆಯಲ್ಲಿಯೇ ಹಳೆಯ ದಾಖಲೆಯನ್ನು ಮುರಿಯಲಾಗಿದೆ. ಈ ಕಾರನ್ನು ವೃತ್ತಿಪರ ರೇಸರ್ ಆಲಿವರ್ ವೆಬ್ ರವರು ಎರಡು ಬಾರಿ ಚಾಲನೆ ಮಾಡಿದರು. ಒಂದು ಬಾರಿಯ ಚಾಲನೆಯಲ್ಲಿ 484.53 ಕಿ.ಮೀ ವೇಗದಲ್ಲಿ ಚಲಿಸಿದರೆ, ಮತ್ತೊಂದು ಬಾರಿ ಗಂಟೆಗೆ 532.93 ಕಿ.ಮೀ ವೇಗದಲ್ಲಿ ಚಲಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಅಂದರೆ ಸರಾಸರಿ 508 ಕಿ.ಮೀ ವೇಗದಲ್ಲಿ ಸಾಗಿದ್ದಾರೆ. ಈ ಮೂಲಕ ಸಾರ್ವಜನಿಕ ರಸ್ತೆಯಲ್ಲಿ ಗಂಟೆಗೆ 532.93 ಕಿ.ಮೀ ವೇಗದಲ್ಲಿ ಸಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪರೀಕ್ಷೆಯನ್ನು ಮೇಲ್ವಿಚಾರಣೆ ಮಾಡಲು ಹಾಗೂ ವೇಗವನ್ನು ದಾಖಲಿಸಲು ವಿಶೇಷ ಜಿಪಿಎಸ್ ಅಳತೆ ಸಾಧನಗಳನ್ನು ಬಳಸಲಾಗಿತ್ತು.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಜೊತೆಗೆ ಇಡೀ ಪರೀಕ್ಷೆಯನ್ನು ಮೇಲ್ವಿಚಾರಣೆ ಮಾಡಲು 15 ಉಪಗ್ರಹ ಹಾಗೂ 2 ಪ್ರಮಾಣೀಕೃತ ಸಾಕ್ಷಿಗಳನ್ನು ಸಹ ಕರೆಸಲಾಗಿತ್ತು. ಎಸ್‌ಎಸ್‌ಸಿ ಟುವಟಾರಾ ಇನ್ನೂ ವೇಗವಾಗಿ ಚಲಿಸಬಹುದಿತ್ತು. ಆದರೆ ಕ್ರಾಸ್‌ವಿಂಡ್‌ನಿಂದ ಅಡ್ಡಿಯಾಯಿತು ಎಂದು ಆಲಿವರ್ ವೆಬ್ ಹೇಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಪ್ರಪಂಚದ ಅತಿ ವೇಗದ ಕಾರ್ ಆದ ಎಸ್‌ಎಸ್‌ಸಿ ಟುವಟಾರಾದಲ್ಲಿ ಟ್ವಿನ್-ಟರ್ಬೊ 5.9 ಲೀಟರಿನ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 1726 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಈ ಕಾರು 1,247 ಕೆ.ಜಿ ತೂಕವನ್ನು ಹೊಂದಿದೆ. ವಿಶ್ವಾದ್ಯಂತ ಈ ಕಾರಿನ 100 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಾಗುವುದು. ಈ ಕಾರಿನ ಬೆಲೆ ಸುಮಾರು ರೂ.11.73 ಲಕ್ಷಗಳಾಗಿದೆ. ಎಸ್‌ಎಸ್‌ಸಿ ಟುವಟಾರಾ ಕಾರನ್ನು ಹಲವು ದಾಖಲೆಗಳನ್ನು ನಿರ್ಮಿಸುವ ಸಲುವಾಗಿ ಉತ್ಪಾದಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಕಂಪನಿಯು ಮುಂಬರುವ ದಿನಗಳಲ್ಲಿ ಈ ಕಾರನ್ನು ವೇಗವಾಗಿ ಚಾಲನೆ ಮಾಡಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಈ ಕಾರಿನ ಕುರಿತು ಡಾಕ್ಯುಮೆಂಟ್ ತಯಾರಿಸಲಾಗುತ್ತಿದೆ. ಈ ಡಾಕ್ಯುಮೆಂಟ್ ಅನ್ನು ಸದ್ಯದಲ್ಲೇ ವೀಕ್ಷಿಸಬಹುದು.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ಶೆಲ್ಬಿ ಸೂಪರ್‌ಕಾರ್ಸ್ ಎಂಬ ಕಂಪನಿಯು ಎಸ್‌ಎಸ್‌ಸಿ ಟುವಟಾರಾ ಹೈಪರ್ ಕಾರ್ ಅನ್ನು ಉತ್ಪಾದಿಸಿದೆ. ಕೇವಲ 24 ಜನ ಸಿಬ್ಬಂದಿಯೊಂದಿಗೆ ಈ ಕಂಪನಿಯನ್ನು 1998ರಲ್ಲಿ ಆರಂಭಿಸಲಾಯಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈಗ ಈ ಕಂಪನಿಯು ವಿಶ್ವದ ಅತಿ ವೇಗದ ಕಾರನ್ನು ಉತ್ಪಾದಿಸಿದೆ. ಕಂಪನಿಯು ಉತ್ಪಾದಿಸಿರುವ ಈ ಕಾರು ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ. ಈಗಾಗಲೇ ಈ ಕಾರಿನ 12 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

532.93 ಕಿ.ಮೀ ವೇಗದಲ್ಲಿ ಸಾಗುವ ಪ್ರಪಂಚದ ಅತಿ ವೇಗದ ಕಾರಿದು...

ನ್ಯೂಜಿಲೆಂಡ್‌ನಲ್ಲಿ ಕಂಡುಬರುವ ಲಿಜರ್ಡ್ ರೇಸ್ ಹೆಸರನ್ನು ಎಸ್‌ಎಸ್‌ಸಿ ಟುವಟಾರಾ ಕಾರಿಗೆ ಇಡಲಾಗಿದೆ. ಈ ಕಾರನ್ನು ಜೇಸನ್ ಕ್ಯಾಸ್ಟ್ರಿಯೋಟಾ ಎಂಬುವವರು ವಿನ್ಯಾಸಗೊಳಿಸಿದ್ದು, ಅದರಲ್ಲಿರುವ ಕಾರ್ವಿ ವಿನ್ಯಾಸದಿಂದಾಗಿ ಕಾರಿಗೆ ಈ ಹೆಸರನ್ನು ಇಡಲಾಗಿದೆ ಎಂದು ಹೇಳಿದರು.

Most Read Articles

Kannada
English summary
Worlds fastest production car SSC Tuatara moves at 508 kmph speed. Read in Kannada.
Story first published: Tuesday, October 20, 2020, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X