Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐತಿಹಾಸಿಕ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದೆ ನಮ್ಮ ದೇಶದ ಈ ರೈಲ್ವೇ ಬ್ರಿಡ್ಜ್
ಜಮ್ಮು-ಕಾಶ್ಮೀರದ ಚೆನಬ್ ನದಿಗೆ ಅಡ್ಡಲಾಗಿ ರೈಲ್ವೇ ಬ್ರಿಡ್ಜ್ ಒಂದು ನಿರ್ಮಾಣವಾಗುತ್ತಿದ್ದು, ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತಲೂ ಹೆಚ್ಚು ಎತ್ತರವಾಗಿದೆ.

ಪ್ರಸ್ತುತ ಈ ಬ್ರಿಡ್ಜ್‌ನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2019ರ ವೇಳೆಗೆ ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ.

ಐಫೆಲ್ ಟವರ್‌ಗಿಂತ ದೊಡ್ಡದು
ಸದ್ಯ ಜಮ್ಮುವಿನಲ್ಲಿ ನಿರ್ಮಾಣವಾಗುತ್ತಿರುವ ಈ ಬ್ರಿಡ್ಜ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ ನೀವು ನಂಬಲೇಬೇಕು.

ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ
ಹೌದು.. ಈ ಬೃಹತ್ ಯೋಜನೆಗಾಗಿ 1,100 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಂದಿನ 2 ವರ್ಷಗಳಲ್ಲಿ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳ್ಳಲಿವೆ.

ಬಹುಉಪಯೋಗಿ ಈ ವಿಶೇಷ ಸೇತುವೆ
ಒಟ್ಟು 359 ಮೀಟರ್ ಉದ್ದ ಹೊಂದಿರುವ ಈ ಬ್ರಿಡ್ಜ್, ಜಮ್ಮು-ಕಾಶ್ಮೀರದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ.

ಉದ್ಧಮ್‌ಪುರ್-ಶ್ರೀನಗರ-ಬಾರಾಮುಲ್ಲಾ ನಗರಗಳ ನಡುವೆ ಹೊಸ ರೈಲ್ವೇ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಚೆನಬ್ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣ ಅವಶ್ಯಕವಾಗಿದೆ.

ಆಧುನಿಕ ತಂತ್ರಜ್ಞಾನ ಬಳಕೆ
ಅತಿ ಎತ್ತರದ ಪ್ರದೇಶದಲ್ಲಿ ಬ್ರಿಡ್ಜ್ ನಿರ್ಮಾಣ ಹಿನ್ನೆಲೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಚೀನಾದ ಸುಯಿಬಾಯ್ ರೈಲ್ವೇ ಬ್ರಿಡ್ಜ್ (275 ಮೀಟರ್) ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

ಸುರಕ್ಷತೆಗೆ ಹೆಚ್ಚಿನ ಒತ್ತು
ಯಾವುದೇ ಅಹಿತಕರ ಘಟನೆ ನಡೆಯದಂತೆ ಹತ್ತಾರು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬ್ರಿಡ್ಜ್ ನಿರ್ಮಾಣಕ್ಕಾಗಿ ಒಟ್ಟು 24 ಸಾವಿರ ಟನ್ ಸ್ಟೀಲ್ ಬಳಕೆ ಮಾಡಲಾಗುತ್ತಿದೆ.

ಎರಡು ಕಣಿವೆ ನಡುವೆ 359 ಮೀಟರ್ ಉದ್ದ ಹೊಂದಿರುವ ಈ ಬ್ರಿಡ್ಜ್, ಒಟ್ಟು 1.3 ಕಿಲೋ ಮೀಟರ್ ಉದ್ದ ಹೊಂದಿದೆ.

ಬಾಂಬ್ ಬಿದ್ರು ಏನು ಆಗಲ್ಲ
ವಿಶೇಷ ತಂತ್ರಜ್ಞಾನ ಬಳಕೆ ಹಿನ್ನೆಲೆ, ಈ ಬ್ರಿಡ್ಜ್ ಮೇಲೆ ಉಗ್ರರು ದಾಳಿ ಮಾಡಿದರೂ ಯಾವುದೇ ಹಾನಿಯಾಗುವುದಿಲ್ಲ. ಜೊತೆಗೆ ಸೇತುವೆಯ ಪ್ರತಿ ಕಂಬಗಳು ಬಾಂಬ್ ಫ್ರೂಫ್ ವ್ಯವಸ್ಥೆ ಹೊಂದಿವೆ.

ಬಿರುಗಾಳಿಗೂ ಕಗ್ಗುವುದಿಲ್ಲ
ಸ್ಟಿಲ್ ಬ್ರಿಡ್ಜ್ ವಿಶೇಷ ತಂತ್ರಜ್ಞಾನಗಳಿದ್ದು, ಬ್ರಿಡ್ಜ್‌ಗೆ ಬಳಿಯಲಾಗುವ ಬಣ್ಣವು 15 ವರ್ಷಗಳ ಕಾಲ ಬಣ್ಣ ಮಾಸುವುದಿಲ್ಲ.

ಬ್ರಿಡ್ಜ್ ಸುತ್ತು ಭಾರೀ ಭದ್ರತೆ
ಉಗ್ರರ ಬೇದರಿಕೆ ಹಿನ್ನೆಲೆ ಬ್ರಿಡ್ಜ್ ಸುತ್ತ ಹೈ ಸೆಕ್ಯೂರಿಟಿ ಒದಗಿಸಲಾಗಿದ್ದು, ದಿನ 24 ಗಂಟೆಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಸಿಸಿಟಿವಿ ಕಣ್ಣಗಾವಲು
ಹಗಲಿನ ವೇಳೆ ಅಷ್ಟೇ ಅಲ್ಲದೇ ರಾತ್ರಿ ವೇಳೆಯೂ ಬ್ರಿಡ್ಜ್ ಸುತ್ತಮತ್ತ ರಕ್ಷಣಾಕಾರ್ಯ ಕೈಗೊಂಡ ಹಿನ್ನೆಲೆ ಪ್ರಮುಖ ಕಡೆಗಳಲ್ಲಿ ಸಿಸಿಟಿವಿ ಕಣ್ಣಗಾವಲು ಇರಿಸಲಾಗಿದ್ದು, ಉಗ್ರ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ.

ಈ ಸ್ಟೀಲ್ ಬ್ರಿಡ್ಜ್ ಮೇಲೆ ರೈಲುಗಳು ಪ್ರತಿ ಗಂಟೆಗೆ 90 ಕಿ.ಮಿ ವೇಗದಲ್ಲಿ ಚಲಿಸಬಹುದಾಗಿದ್ದು, ಭಾರತೀಯ ರೈಲ್ವೇ ಇಲಾಖೆ ಇದಕ್ಕಾಗಿ ವಿಶೇಷ ಆಸಕ್ತಿ ವಹಿಸಿದೆ.

ಮಾಹಿತಿ ಹಂಚಿಕೊಂಡ ಸುರೇಶ್ ಪ್ರಭು
ಇನ್ನು ವಿಶೇಷ ಬ್ರಿಡ್ಜ್ ನಿರ್ಮಾಣ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಸುರೇಶ್ ಪ್ರಭು, ಇದು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದಿದ್ದಾರೆ.
ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಬ್ರಿಡ್ಜ್ ವೀಕ್ಷಣೆಗಾಗಿ ವಿಡಿಯೋ ತಪ್ಪದೇ ನೋಡಿ.