ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಸ್ವಿಜರ್‍‍ಲ್ಯಾಂಡ್ ಮೂಲದ ನಿರ್ಮಾಣ ಸಲಕರಣೆಗಳ ಉತ್ಪಾದನಾ ಕಂಪನಿಯಾದ ಕುಹ್ನ್ ಶ್ವಿಜ್ ವಿಶ್ವದ ಅತಿದೊಡ್ಡ ವಿದ್ಯುತ್ ವಾಹನವನ್ನು ವಿನ್ಯಾಸಗೊಳಿಸಿದೆ. ಈ ವಾಹನವು 45 ಟನ್ ತೂಕದ ಡಂಪ್ ಟ್ರಕ್ ಆಗಿದ್ದು, 65 ಟನ್‍‍ಗಳವರೆಗಿನ ಸರಕುಗಳನ್ನು ಸಾಗಿಸುತ್ತದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಗಮನಿಸಬೇಕಾದ ಸಂಗತಿಯೆಂದರೆ ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ಯಾವುದೇ ರೀತಿಯ ವಿದ್ಯುತ್ ಬೇಕಾಗಿಲ್ಲ. ವರದಿಗಳ ಪ್ರಕಾರ ಈ ಟ್ರಕ್ ತನ್ನ ಕಾರ್ಯವನ್ನು ನಿರ್ವಹಿಸುವಾಗ ತನಗೆ ಚಾರ್ಜ್ ಆಗಲು ಬೇಕಾಗಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಈ ದೈತ್ಯ ಟ್ರಕ್ ಅನ್ನು ಎಲೆಕ್ಟ್ರೊ ಡ್ಯಾಂಪರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಟ್ರಕ್‍‍ನ ಗಾತ್ರದ ಬಗ್ಗೆ ಹೇಳುವುದಾದರೆ, ಈ ಟ್ರಕ್ 9.36 ಮೀ ಉದ್ದ, 4.24 ಮೀ ಅಗಲ ಹಾಗೂ 4.4 ಮೀ ಎತ್ತರ ಹಾಗೂ 4.30 ಮೀ ವ್ಹೀಲ್‍‍ಬೇಸ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಸಾಮಾನ್ಯವಾದ ಎಲೆಕ್ಟ್ರಿಕ್ ವಾಹನಗಳಂತೆ ಈ ಎಲೆಕ್ಟ್ರಿಕ್ ಟ್ರಕ್‍‍ನಲ್ಲಿಯೂ ಸಹ ಇ-ಡ್ಯಾಂಪರ್‍‍ಗಳನ್ನು ಬ್ರೇಕ್ ಮಾಡಿದಾಗ ಪವರ್ ಉತ್ಪಾದನೆಯಾಗುತ್ತದೆ. ಈ ಪ್ರಕ್ರಿಯೆಯನ್ನು ರಿಜನರೇಟಿವ್ ಬ್ರೇಕಿಂಗ್ ಎಂದು ಕರೆಯಲಾಗುತ್ತದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಈ ಎಲೆಕ್ಟ್ರಿಕ್ ಟ್ರಕ್ ಅನ್ನು ಚಾಲನೆ ಮಾಡುತ್ತಿರುವವರು ಬ್ರೇಕ್ ಹಾಕಿದಾಗ ಈ ಟ್ರಕ್‍‍ನಲ್ಲಿರುವ ಎಲೆಕ್ಟ್ರಿಕ್ ಮೋಟರ್ ವಿರುದ್ದವಾದ ದಿಕ್ಕಿನಲ್ಲಿ ಸುತ್ತಿ ಪವರ್ ಅನ್ನು ಉತ್ಪಾದಿಸುತ್ತದೆ. ಹೀಗೆ ಉತ್ಪಾದನೆಯಾಗುವ ಪವರ್, ಡ್ಯಾಂಪರ್‍‍‍ನಲ್ಲಿರುವ ಬ್ಯಾಟರಿಯಲ್ಲಿ ಸ್ಟೋರ್ ಆಗುತ್ತದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಟ್ರಕ್‍‍ನಲ್ಲಿರುವ ಲೋಡ್ ಹೆಚ್ಚಾದಂತೆಲ್ಲಾ ಬ್ರೇಕಿಂಗ್ ನಿಧಾನಗೊಂಡು ಹೆಚ್ಚು ಪವರ್ ಸಂಗ್ರಹವಾಗುತ್ತದೆ. ಇದರಿಂದಾಗಿ ಇ-ಡ್ಯಾಂಪರ್‍‍ಗಳು ಹೆಚ್ಚು ಎಫಿಶಿಯಂಟ್ ಆಗಿರುತ್ತವೆ. ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿಯಾಗಿರುತ್ತವೆ.

ವರದಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಟ್ರಕ್‍‍ನ ಇ-ಡ್ಯಾಂಪರ್‍‍ನಲ್ಲಿರುವ ಬ್ಯಾಟರಿಯ ತೂಕವೇ 4.5 ಟನ್‍‍ಗಳಾಗುತ್ತದೆ. ಅಂದರೆ 7 ಟೆಸ್ಲಾ ಎಸ್ ಕಾರುಗಳ ಸ್ಟೋರೇಜ್ ಸಾಮರ್ಥ್ಯಕ್ಕೆ ಸರಿಸಮನಾಗಿರುತ್ತದೆ.

ಈ ಎಲೆಕ್ಟ್ರಿಕ್ ಟ್ರಕ್ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ..!

ಇದರ ಜೊತೆಗೆ ಎಲೆಕ್ಟ್ರೊ ಡ್ಯಾಂಪರ್ ಪ್ರತಿ ವರ್ಷ 130 ಟನ್‍‍ನಷ್ಟು ಕಾರ್ಬನ್ ಡೈ ಆಕ್ಸೈಡ್ ಪರಿಸರಕ್ಕೆ ಸೇರುವುದನ್ನು ತಡೆಗಟ್ಟಲು ನೆರವಾಗುತ್ತದೆ. ಜೊತೆಗೆ ಪ್ರತಿ ವರ್ಷ 1,00,000 ಟನ್ ಡೀಸೆಲ್ ಬಳಕೆಯನ್ನು ತಡೆಯುತ್ತದೆ. ಸದ್ಯಕ್ಕೆ ಕಂಪನಿಯು ಸ್ವಿಜರ್‍‍ಲ್ಯಾಂಡ್‍‍ನ ಬೀಲ್ ಬಳಿಯಿರುವ ಗಣಿಯಲ್ಲಿ ಈ ಎಲೆಕ್ಟ್ರಿಕ್ ಟ್ರಕ್‍‍ನ ಮೂಲ ಮಾದರಿಯನ್ನು ನಿಯೋಜಿಸಿದೆ.

Most Read Articles

Kannada
English summary
This electric truck does not need power for charging. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X