Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚೀನಾದಲ್ಲಿ ನಿರ್ಮಾಣವಾಗುತ್ತಿದೆ ಅತ್ಯಾಧುನಿಕ ಸೌಲಭ್ಯವುಳ್ಳ ಅತಿ ಉದ್ದದ ಸೇತುವೆ..!
ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಹೊಸ ಯೋಜನೆಗಳನ್ನು ಸಿದ್ಧಗೊಳಿಸುವ ಚೀನಾ ಸರ್ಕಾರವು ಸದ್ಯ ವಿಶ್ವದ ಅತಿ ಉದ್ದದ ಸೇತುವೆಯೊಂದನ್ನು ನಿರ್ಮಾಣ ಮಾಡುತ್ತಿದ್ದು, ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಗೊಳ್ಳುತ್ತಿರುವ ಸೇತುವೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಜಗತ್ತಿನಲ್ಲೇ ಅತಿ ಉದ್ದದ ಸೇತುವೆಯಾಗಿರುವ ದಯಾಂಗ್ ಮತ್ತುಕುನ್‌ಶಾನ್ ಗ್ರ್ಯಾಂಡ್‌ಗಿಂತಲೂ ಹೆಚ್ಚಿನ ಸೌಲಭ್ಯವುಳ್ಳ ಸೇತುವೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿರುವ ಚೀನಾ ಸರ್ಕಾರವು ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಗರಗಳ ನಡುವೆ 55 ಕಿ.ಮಿ ಉದ್ದದ ಅತ್ಯಾಧುನಿಕ ಸೌಲಭ್ಯವುಳ್ಳ ಸೇತುವೆ ನಿರ್ಮಾಣ ಮಾಡುತ್ತಿದೆ.

ಇದಕ್ಕಾಗಿ ಚೀನಾ 10 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವೆ ಸುಗಮ ಸಂಚಾರಕ್ಕಾಗಿ ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಇದೊಂದು ಕೇವಲ ಸೇತುವೆಯಾಗಿರದೇ ಅತ್ಯಾಧುನಿಕ ಸೌಲಭ್ಯವುಳ್ಳ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸ್ಟೇಷನ್ ಹಾಗೂ ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಐಷಾರಾಮಿ ಹೋಟೆಲ್‌ಗಳು ಕೂಡಾ ಸೇತುವೆಯ ಮೇಲ್ಭಾಗದಲ್ಲಿ ನಿರ್ಮಾಣವಾಗಲಿವೆ.

ಚೀನಾದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯದ ಪ್ರಮಾಣ ಕೂಡಾ ಏರಿಕೆಯಾಗುತ್ತಿದ್ದು, ಇದನ್ನು ತಡೆಯಲು ಹೊಸ ಸೇತುವೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಹೀಗಾಗಿಯೇ ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವಿನ ಒಟ್ಟು 55 ಕಿ.ಮಿ ಉದ್ದದ ಸೇತುವೆಯಲ್ಲಿ 550 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು ನಿರ್ಮಾಣವಾಗಲಿದ್ದು, ಇದು ವಾಹನ ಸವಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ.

ಹೊಸ ಸೇತುವೆ ನಿರ್ಮಾಣದಿಂದಾಗಿ ಹಾಕಾಂಗ್, ಸುಹಾಯ್ ಮತ್ತು ಮಾಕಾಹಾ ನಡುವಿನ ಪ್ರಮಾಣದ ಅವಧಿ ಕೂಡಾ ತಗ್ಗಲಿದ್ದು, ಕೇವಲ 30 ನಿಮಿಷದಲ್ಲಿ ಮೂರು ನಗರಗಳನ್ನು ತಲುಪಬಹುದಾಗಿದೆ.

ಅತ್ಯಾಧುನಿಕ ಸೇತುವೆ ಮೇಲೆ ಖಾಸಗಿ ವಾಹನಗಳು, ಬಸ್ ಮತ್ತು ವಾಣಿಜ್ಯ ವಾಹನಗಳ ಓಡಾಟಕ್ಕೆ ಅವಕಾಶವಿದ್ದು, ನಿಗದಿತ ಶುಲ್ಕ ಪಾವತಿಸಿ ಸಂಚಾರ ಮಾಡಬಹುದಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಇನ್ನು ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೂಡಾ ಕೊನೆಯ ಹಂತದಲ್ಲಿದ್ದು, ಇದೇ ವರ್ಷದ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮೂಲಕ ವಿಶ್ವದ ಅತಿ ಉದ್ದದ ಸೇತುವೆಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಚೀನಾ, ಸಾರಿಗೆ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸೇತುವೆ ಅತಿದೊಡ್ಡ ಯೋಜನೆ ಎಂದು ಹೇಳಬಹುದು.