ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಭಾರತವು ವಿಶ್ವದಲ್ಲೇ ಅತಿ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಿದೆ. ಈ ಸುರಂಗ ಮಾರ್ಗವನ್ನು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿರವರಿಗೆ ಸಮರ್ಪಿಸಲಾಗಿದ್ದು, ಅವರ ಹೆಸರನ್ನು ಇಡಲಾಗಿದೆ.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಕಳೆದ ಹತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಸುರಂಗ ಮಾರ್ಗವು ಈಗ ಸಿದ್ಧವಾಗಿದೆ. ಈ ಸುರಂಗವು ಸಮುದ್ರ ಮಟ್ಟದಿಂದ ಸುಮಾರು 3100 ಮೀಟರ್ ಎತ್ತರದಲ್ಲಿದೆ. ಈ ಮಾರ್ಗವನ್ನು ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲಡಾಖ್‌ನ ಲೇಹ್ ಪ್ರದೇಶದ ನಡುವೆ ನಿರ್ಮಿಸಲಾಗಿದೆ. ಇದರ ಉದ್ದ 8.8 ಕಿ.ಮೀಗಳಾಗಿದೆ. ಈ ಸುರಂಗವನ್ನು ರೊಡಾಂಗ್ ಎಂದೂ ಕರೆಯಲಾಗುತ್ತದೆ.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಸುರಂಗ ಮಾರ್ಗವು ಅಟಲ್ ಟನಲ್, ರೊಡಾಂಗ್ ಟನಲ್ ಎಂಬ ಹೆಸರುಗಳನ್ನು ಹೊಂದಿದೆ. ಎಲ್ಲಾ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರ ಈ ತಿಂಗಳ ಅಂತ್ಯದ ವೇಳೆಗೆ ಈ ಸುರಂಗ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಈ ಸುರಂಗ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಪೂರ್ಣ ಪ್ರಮಾಣದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗವು ಶೀಘ್ರದಲ್ಲೇ ಬಳಕೆಗೆ ಸಿದ್ದವಾಗಲಿದೆ ಎಂಬ ಸುದ್ದಿ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಸುರಂಗದಲ್ಲಿ ಭದ್ರತೆಗಾಗಿ ಪ್ರತಿ 60 ಮೀಟರ್‌ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನವನ್ನು ಸ್ಥಾಪಿಸಲಾಗಿದೆ. ಈ ಸುರಂಗವನ್ನು ಎಲ್ಲಾ ರೀತಿಯ ಹವಾಮಾನವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಬೆಂಕಿಯನ್ನು ತಡೆಗಟ್ಟಲು ಈ ಸುರಂಗದಲ್ಲಿ ಅಗ್ನಿ ಶಾಮಕಗಳನ್ನು ಸಹ ಸ್ಥಾಪಿಸಲಾಗಿದೆ. ಸುರಕ್ಷತೆಗಾಗಿ ಅಟಲ್ ಸುರಂಗದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸುರಂಗವು 10.5 ಮೀಟರ್ ಅಗಲವನ್ನು ಹೊಂದಿದೆ.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಸುರಂಗದ ಎರಡೂ ಕಡೆ ಪಾದಚಾರಿಗಳಿಗಾಗಿ ಸುಮಾರು 1 ಮೀಟರ್ ನ ಕಾಲುದಾರಿಗಳನ್ನು ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗದ ಮೂಲಕ ಪ್ರಯಾಣಿಸಿದರೆ ಎರಡೂ ನಗರಗಳ ಸಂಚಾರವು 46 ಕಿ.ಮೀಗಳಷ್ಟು ಕಡಿಮೆಯಾಗುತ್ತದೆ. ಈ ಸುರಂಗ ಮಾರ್ಗದಿಂದ ಸಾಕಷ್ಟು ಇಂಧನ ಹಾಗೂ ಸಮಯ ಉಳಿಸಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಸುರಂಗ ಮಾರ್ಗವನ್ನು ನಿರ್ಮಿಸಿದ ಮುಖ್ಯ ಎಂಜಿನಿಯರ್ ಪುರುಷೋತ್ತಮನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುರಂಗ ಯೋಜನೆಯ ನಿರ್ದೇಶಕ ಪರಿಕ್ಷಿತ್ ಮೆಹ್ರಾ, ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಈ ಸುರಂಗವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಸುರಂಗವು ಲೇಹ್ ಅನ್ನು ಸಂಪರ್ಕಿಸುವ ಮೊದಲ ಹೆಜ್ಜೆಯಾಗಿದೆ. ಈ ಸುರಂಗವನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ. ಹೊಸದಾಗಿ ನಿರ್ಮಿಸಲಾದ ಈ ಸುರಂಗ ಮಾರ್ಗವು ಬಳಕೆಯಲ್ಲಿರುವ ಪರ್ವತ ಮಾರ್ಗಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಸಾಮಾನ್ಯವಾಗಿ ಪರ್ವತ ರಸ್ತೆ ಅಪಾಯಕಾರಿಯಾಗಿರುತ್ತದೆ. ಇನ್ನೂ ಅಪಾಯಕಾರಿ ಎಂದರೆ ಲಡಾಖ್‌ಗೆ ಹೋಗುವ ಪರ್ವತ ರಸ್ತೆ. ಈ ಪರ್ವತ ರಸ್ತೆಯಲ್ಲಿ ಹೆಚ್ಚು ತಿರುವುಗಳಿರುವ ಕಾರಣಕ್ಕೆ ಈ ಮಾರ್ಗವು ಹೆಚ್ಚು ಅಪಾಯಕಾರಿಯಾಗಿದೆ.

ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣವಾಯ್ತು ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ

ಈ ಕಾರಣಕ್ಕೆ ಸಮಯ ಹಾಗೂ ಹಣವನ್ನು ಉಳಿಸಲು ಹೊಸ ಸುರಂಗವನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಅಟಲ್ ಸುರಂಗವನ್ನು ಅಪಘಾತದ ಅಪಾಯವನ್ನು ಕಡಿಮೆಗೊಳಿಸಲು ನಿರ್ಮಿಸಲಾಗಿದೆ.

Most Read Articles

Kannada
English summary
Worlds longest tunnel built between Manali and Leh ready for use. Read in Kannada.
Story first published: Saturday, September 19, 2020, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X