ವಿಶ್ವದ ಅತಿ ಸಣ್ಣ ಕಾರಿನ ವಿಶಿಷ್ಟತೆಗಳನ್ನು ಬಲ್ಲೀರಾ?

By Nagaraja

ವಿಶ್ವದ ಅತಿ ಸಣ್ಣ ಕಾರೆಂಬ ಕೀರ್ತಿಗೆ ಪಾತ್ರವಾಗಿರುವ 1964ರ ಪೀಲ್ ಪಿ50 ಹರಾಜುವೊಂದರಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ವಾಹನ ಮೂಲಗಳಿಂದ ಬಂದ ಮಾಹಿತಿಗಳ ಪ್ರಕಾರ ವಿಶ್ವದ ಅತಿ ಚಿಕ್ಕ ಕಾರೆಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿರುವ ಪೀಲ್50 ಬರೋಬ್ಬರಿ 1.2 ಕೋಟಿ ರುಪಾಯಿಗಳಿಗೆ ಹರಾಜುಗೊಂಡಿದೆ.

Also Read: ಅಬುದಾಬಿ ಶೇಖ್ ಬಳಿಯಿದೆ ವಿಶ್ವದ ಅತಿದೊಡ್ಡ ಟ್ರಕ್

ಫ್ಲೋರಿಡಾದಲ್ಲಿ ನಡೆದ ಆರ್‌ಎಂ ಸೋಥೆಬಿಯ 2016 ಅಮೆಲಿಯಾ ಐಲ್ಯಾಂಡ್ ಹರಾಜಿನಲ್ಲಿ ಪೀಲ್ ಪಿ50 ಕ್ಲಾಸಿಕ್ ಕಾರು ಭಾರಿ ಬೇಡಿಕೆಗೆ ಗ್ರಾಸವಾಗಿತ್ತು. ಅಷ್ಟಕ್ಕೂ ಇತರ ಕಾರುಗಳಿಗಿಂತ ಇದು ಹೇಗೆ ಭಿನ್ನ ಎಂದುದನ್ನು ನೋಡೋಣವೇ...

49 ಸಿಸಿ ಎಂಜಿನ್

49 ಸಿಸಿ ಎಂಜಿನ್

ವಿಶ್ವದ ಅತಿ ಅಗ್ಗದ ಪೀಲ್ ಪಿ50 ಕಾರಿನಲ್ಲಿ 49 ಸಿಸಿ ಫ್ಯಾನ್ ಕೂಲ್ಡ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

4 ಅಶ್ವಶಕ್ತಿ

4 ಅಶ್ವಶಕ್ತಿ

ಇದು ಬರಿ ನಾಲ್ಕು ಅಶ್ವಶಕ್ತಿಯನ್ನಷ್ಟೇ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

 ರಿವರ್ಸ್ ಗೇರ್ ಇಲ್ಲ

ರಿವರ್ಸ್ ಗೇರ್ ಇಲ್ಲ

ಮೂರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುವ ಈ ಚೊಕ್ಕದಾದ ಕಾರಿನಲ್ಲಿ ರಿವರ್ಸ್ ಗೇರ್ ಇರುವುದಿಲ್ಲ.

ಗರಿಷ್ಠ ವೇಗ

ಗರಿಷ್ಠ ವೇಗ

ಪ್ರಸ್ತುತ ಕಾರು ಗಂಟೆಗೆ 61 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಏಕಮಾತ್ರ ಹೆಡ್ ಲ್ಯಾಂಪ್

ಏಕಮಾತ್ರ ಹೆಡ್ ಲ್ಯಾಂಪ್

ಫೈಬರ್ ಗ್ಲಾಸ್ ನಿಂದ ನಿರ್ಮಿಸಲಾಗಿರುವ ವಿಶ್ವದ ಅತಿ ಸಣ್ಣ ಕಾರಿನ ಮುಂಭಾಗದಲ್ಲಿ ಏಕಮಾತ್ರ ಹೆಡ್ ಲ್ಯಾಂಪ್ ಇರಲಿದೆ.

ಒಂದು ಮಿರರ್, ಮೂರು ಚಕ್ರ

ಒಂದು ಮಿರರ್, ಮೂರು ಚಕ್ರ

ಇದರಲ್ಲಿ ಮೂರು ಚಕ್ರಗಳ ಜೋಡಣೆ ಮಾಡಲಾಗಿದ್ದು, ಬಲ ಬದಿಯಲ್ಲಿ ಮಾತ್ರ ಮಿರರ್ ಕಂಡುಬರಲಿದೆ.

 ಸಿಂಗಲ್ ಡೋರ್, ಸಿಂಗಲ್ ಸೀಟು

ಸಿಂಗಲ್ ಡೋರ್, ಸಿಂಗಲ್ ಸೀಟು

ಇನ್ನು ಎಡಬದಿಯಲ್ಲಿ ಮಾತ್ರ ಏಕ ಮಾತ್ರ ಡೋರ್ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ. ಕಾರಿನೊಳಗೆ ಚಾಲಕನಿಗೆ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆಯಿರುತ್ತದೆ.

ಎಂಜಿನ್, ಸ್ಟೀರಿಂಗ್

ಎಂಜಿನ್, ಸ್ಟೀರಿಂಗ್

ಮುಂಭಾಗದ ಚಕ್ರದ ಹಿಂಬದಿಯಲ್ಲಿ ಎಂಜಿನ್ ಜೋಡಣೆ ಮಾಡಲಾಗಿದೆ. ಅಲ್ಲದೆ ಒಳಗಡೆ ದೊಡ್ಡದಾದ ಸ್ಟೀರಿಂಗ್ ವೀಲ್ ಕೊಡಲಾಗಿದೆ.

ವಿಶ್ವದ ಅತಿ ಕಾರು ಪೀಲ್ ಪಿ50 ಹರಾಜು

137 ಸೆಂಟಿಮೀಟರ್ ಉದ್ದ, 99.06 ಸೆಂಟಿಮೀಟರ್ ಅಗಲ, 100 ಸೆಂಟಿಮೀಟರ್ ಎತ್ತರವನ್ನು ಹೊಂದಿರುವ ಪಿ50, ವಿಶ್ವದ ಅತಿ ಸಣ್ಣ ಕಾರೆಂಬ ಗಿನ್ನೆಸ್ ದಾಖಲೆಯನ್ನು 50ಕ್ಕೂ ವರ್ಷಕ್ಕೂ ಹೆಚ್ಚು ಕಾಲ ಉಳಿಸಿಕೊಂಡಿತ್ತು.

56 ಕೆ.ಜಿ ಭಾರ

56 ಕೆ.ಜಿ ಭಾರ

ಇನ್ನು ಕಾರಿನ ಒಟ್ಟಾರೆ ಭಾರ ಬರಿ 56 ಕೆ.ಜಿ ಗಳಾಗಿದ್ದು, 127 ಸೆಂಟಿಮೀಟರ್ ಗಳಷ್ಟು ಚಕ್ರಾಂತರವನ್ನು ಪಡೆದಿದೆ.

ವಿಶ್ವದ ಅತಿ ಕಾರು ಪೀಲ್ ಪಿ50 ಹರಾಜು

ಪೀಲ್ ಎಂಜಿನಿಯರಿಂಗ್ ಸಂಸ್ಥೆಯು 1963-64ರ ಕಾಲಘಟ್ಟದಲ್ಲಿ 47ರಷ್ಟು ಇಂತಹ ಚಿಕ್ಕ ಕಾರುಗಳನ್ನು ನಿರ್ಮಿಸಿತ್ತು. ಈ ಪೈಕಿ 26ರಷ್ಟು ಮಾತ್ರ ಈಗ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಇವನ್ನೂ ಓದಿ

ವಿಶ್ವದ ಅತಿ ದೊಡ್ಡ ಸೈಕಲ್ ನಿಮ್ಮ ಗಮನ ಸೆಳೆಯಿತೇ?

ಯಾವ ರೈಲಿಗೂ ಕಮ್ಮಿಯೇನಲ್ಲ; ಇದುವೇ ಜಗತ್ತಿನ ಅತಿ ಉದ್ದದ ಸೈಕಲ್

Most Read Articles

Kannada
English summary
World's Smallest Car Sells For $176,000 At Auction
Story first published: Tuesday, March 22, 2016, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X