ಅಬ್ಬಾ... ಡ್ರೈವರ್ ಇಲ್ಲದೆ ರಸ್ತೆಯಲ್ಲಿ ಓಡಿತು ಟ್ರಕ್ - ಒಂದು ಕ್ಷಣ ಎಲ್ಲರಿಗೂ ಶಾಕ್!

ಇಲ್ಲೊಂದು ಟ್ರಕ್ ಡ್ರೈವರ್ ಇಲ್ಲದೆಯೇ ರಸೆಯಲ್ಲಿ ಚಲಿಸಿದೆ. ಇದನ್ನು ನೋಡಿದ ಅಲ್ಲಿದ್ದವರೂ ಕ್ಷಣಕಾಲ ಆಶ್ಚರ್ಯಪಟ್ಟಿದ್ದಾರೆ. ಆ ಟ್ರಕ್ ರೋಡಿನ ಬೇರೆ ಯಾವುದೇ ವಾಹನಗಳಿಗೆ ಕೊಂಚವು ಅಡಚಣೆ ಮಾಡದೇ ತನ್ನ ಪಾಡಿಗೆ ನಿರ್ದಿಷ್ಟ ಗುರಿ ಕಡೆಗೆ ಸಾಗಿದೆ. ಅಷ್ಟಕ್ಕೂ ಚಾಲಕ ರಹಿತ ಟ್ರಕ್ ಹೀಗೆ ಓಡಿದ್ದು ಎಲ್ಲಿ ಅಂತ ನೀವು ತಿಳಿದುಕೊಳ್ಳಬೇಕೇ.. ಅದನ್ನು ಇಲ್ಲಿ ವಿವರಿಸಿದ್ದೇವೆ.

ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನ ರಸ್ತೆಯಲ್ಲಿ 'ಸ್ಕ್ಯಾನಿಯಾ' ಕಂಪನಿಯ ಪ್ರಾಯೋಗಿಕ ಹಂತದಲ್ಲಿರುವ ಟ್ರಕ್, ಯಾವುದೇ ಚಾಲಕನ ಸಹಾಯವಿಲ್ಲದೆ ತಾನಾಗಿಯೇ ಓಡಿದೆ. ಅನಿರೀಕ್ಷಿತ ಸಮಸ್ಯೆ ಎದುರಾಗದ ಮಾತ್ರ ಅದನ್ನು ನಿಯಂತ್ರಿಸಲು ಹಿರಿಯ ಚಾಲಕನೊಬ್ಬ ಅದರಲ್ಲಿ ಕುಳಿತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸ್ಕ್ಯಾನಿಯಾ ಮುಖ್ಯಸ್ಥ ಪೀಟರ್ ಹಾಫ್ಮಾರ್, 'ಇದು ಯುರೋಪ್‌ನಲ್ಲಿ ಮೊದಲ ಪ್ರಯತ್ನವಾಗಿದೆ. ವಾಣಿಜ್ಯ ಸರಕು ಸಾಗಿಸಲು ಇಂತಹ ಟ್ರಕ್ ಅಭಿವೃದ್ದಿಪಡಿಸುವುದನ್ನು ಆರಂಭಿಸಿದ್ದೇವೆ. ಅದನ್ನು ನಿರ್ದಿಷ್ಟ ಗುರಿಯತ್ತ ಓಡಿಸುವ ಪ್ರಯತ್ನ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಪ್ರಾಯೋಗಿಕ ಹಂತದಲ್ಲಿರುವ ಈ ಟ್ರಕ್, ಸ್ವೀಡನ್‌ನ ದಕ್ಷಿಣದಲ್ಲಿರುವ ಸೊಡೆರ್ಟಾಲ್ಜೆ ಮತ್ತು ಜೊಂಕೋಪಿಂಗ್ ನಡುವೆ ಸುಮಾರು 300 ಕಿಲೋಮೀಟರ್ (186 ಮೈಲುಗಳು)ವರೆಗೆ ತ್ವರಿತವಾಗಿ ಆಹಾರ ಸರಕುಗಳನ್ನು ತಲುಪಿಸಲಿದೆ. ವಾಹನ ಹೊರಭಾಗವನ್ನು ಬಹುತೇಕ ಇತರೆ ಟ್ರಕ್ ರೀತಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಮೇಲ್ಭಾಗ ಕ್ಯಾಮೆರಾ ಮತ್ತು ಬಗ್ ಆಂಟೆನಾಗಳನ್ನು ಹೋಲುವ ಎರಡು ಸೆನ್ಸಾರ್ ಅನ್ನು ಅಳವಡಿಕೆ ಮಾಡಲಾಗಿದೆ. ಟ್ರಕ್ ಒಳಭಾಗದಲ್ಲಿ ಕೆಲವೊಂದು ಯಾಂತ್ರಿಕ ಸಾಧಗಳನ್ನೂ ಅಳವಡಿಸಲಾಗಿದೆ.

ಈ ಟ್ರಕ್ ಇಂಜಿನಿಯರ್ ಗೋರಾನ್ ಫ್ಜಲ್ಲಿಡ್ ಅವರು, ಪ್ರಯಾಣಿಕರ ಸೀಟಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದಾರೆ. ಅವರ ಲ್ಯಾಪ್‌ಟಾಪ್‌, ಟ್ರಕ್‌ನ ಕ್ಯಾಮೆರಾಗಳಿಂದ ವೀಡಿಯೊವನ್ನು ಸ್ವೀಕರಿಸುತ್ತಿದ್ದು, ವಾಹನದ ರಸ್ತೆಯಲ್ಲಿ ಯಾವುದನ್ನು ನೋಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲೇ ಇರುವ ಎರಡನೇ ಸ್ಕ್ರೀನ್ ಸಮೀಪದಲ್ಲೇ ಚಲಿಸುತ್ತಿರುವ ವಾಹನಗಳ 3D ದೃಶ್ಯಗಳನ್ನು ನೀಡುತ್ತಿದೆ. ಇದರಲ್ಲಿ ಸೆನ್ಸಾರ್ ಒಳಗೊಂಡಂತೆ ಇರುವ ಎಲ್ಲಾ ಇನ್‌ಪುಟ್ ಅನ್ನು GPS ಸಿಸ್ಟಮ್‌ನೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.

ಹಸ್ತಚಾಲಿತವಾಗಿ ಚಾಲನೆ ಮಾಡುಕ್ಕಿಂದಲೂ ಸ್ವತಃ ಈ ಟ್ರಕ್ ಉತ್ತಮವಾಗಿ ಚಾಲನೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಸಾಕಷ್ಟು ಪ್ರಯೋಗಗಳಿಂದ ಕಂಡುಬಂದ ದೋಷಗಳಿಗೆ ಪರಿಹಾರ ಒದಗಿಸಿದ್ದರಿಂದ ಟ್ರಕ್ ಈ ಹಂತಕ್ಕೆ ಬಂದಿದ್ದು, ಇತರೆ ವಾಹನಗಳು ಅನಿರೀಕ್ಷಿತವಾಗಿ ಪಕ್ಕಕ್ಕೆ ಬಂದಾಗ ಅದರ ಬ್ರೇಕಿಂಗ್ ವ್ಯವಸ್ಥೆ ಯಾವ ರೀತಿ ಕಾರ್ಯ ನಿರ್ವಹಿಸಿತ್ತದೆ ಎನ್ನುವದನ್ನು ಸಹ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಈ ಚಾಲಕ ರಹಿತ ಟ್ರಕ್‌ನಲ್ಲಿ ಕೊಂಚ ಮಟ್ಟಿಗೆ ಅಡಚಣೆಗಳಿವೆ. 2030ರ ದಶಕದ ಆರಂಭದಲ್ಲಿ ಇದನ್ನುಸಿದ್ಧಗೊಳಿಸುವ ನಿರೀಕ್ಷೆಯಿದೆ.

ಸ್ವಯಂ-ಚಾಲನಾ ಟ್ರಕ್‌ ಮಾರುಕಟ್ಟೆಗೆ ಬಂದರೆ, ಟ್ರಕ್ ಡ್ರೈವರ್‌ಗಳ ಉದ್ಯೋಗ ಕಡಿತವಾಗಲಿದೆಯೇ ಎಂಬುದರ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿವೆ. ಪ್ರಪಂಚದ ಅತ್ಯಂತ ಸಾಮಾನ್ಯ ವೃತ್ತಿಗಳಲ್ಲಿ ಇದು ಸಹ ಒಂದಾಗಿದೆ. ಆದರೆ ಜಾಗತಿಕವಾಗಿ ಚಾಲಕರ ಕೊರತೆಯನ್ನು ಬಗೆಹರಿಸಲು ಇಂತಹ ವಾಹನಗಳ ಅಗತ್ಯವಿದೆ ಎಂದು 'ಸ್ಕ್ಯಾನಿಯಾ' ಕಂಪನಿ ಮುಖ್ಯಸ್ಥ ಹಾಫ್ಮಾರ್ ಅಭಿಪ್ರಾಯವಾಗಿದೆ. ಕೃತಕ ಬುದ್ಧಿಮತ್ತೆಯು ಲಾಜಿಸ್ಟಿಕ್ಸ್‌ನ ಎಲ್ಲಾ ಅಂಶಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಜೂನ್‌ನಲ್ಲಿ ಇಂಟರ್‌ನ್ಯಾಷನಲ್ ರೋಡ್ ಟ್ರಾನ್ಸ್‌ಪೋರ್ಟ್ ಯೂನಿಯನ್ (IRU) ನೀಡಿದ ವರದಿಯ ಪ್ರಕಾರ, 2021ರಲ್ಲಿ ಪ್ರಪಂಚದಾದ್ಯಂತ 2.6 ಮಿಲಿಯನ್ ಟ್ರಕ್ ಡ್ರೈವರ್‌ ಹುದ್ದೆಗಳು ಖಾಲಿ ಇದ್ದು, ಇದು ಈ ಕ್ಷೇತ್ರದಲ್ಲಿ ಎಷ್ಟು ಮಾನವ ಸಂಪನ್ಮೂಲದ ಅಗತ್ಯವಿದೆ ಎನ್ನುವುದನ್ನು ತೋರಿಸುತ್ತದೆ. ಮಾನವರ ರೀತಿ ಕಂಪ್ಯೂಟರ್‌ಗಳಿಗೆ ನಿದ್ರೆ ಅಥವಾ ವಿಶ್ರಾಂತಿ ಅಗತ್ಯವಿಲ್ಲ. ಕಡಿಮೆ ಟ್ರಾಫಿಕ್ ಇರುವ ಸಮಯ ಅಥವಾ ಹೆದ್ದಾರಿಗಳ ಬದಲು, ನಿಧಾನವಾಗಿ ಚಾಲನೆ ಮಾಡುವ ರಸ್ತೆಗಳಲ್ಲಿ ಇತಂಹ ವಾಹನಗಳನ್ನು ಬಳಕೆ ಮಾಡಬಹುದು ಎಂದು ಹಾಫ್ಮಾರ್ ಸಲಹೆಯಾಗಿದೆ.

ಸ್ವಯಂ ಚಾಲಿತ ಟ್ರಕ್‌ಗಳನ್ನು ರಸ್ತೆಗಿಳಿಸಲು ಇತರೆ ಹಲವಾರು ಕಂಪನಿಗಳು ರೇಸ್‌ನಲ್ಲಿವೆ. ಸ್ಟಾರ್ಟ್-ಅಪ್‌ಗಳಾದ ಅರೋರಾ, ವೇಮೊ, ಎಂಬಾರ್ಕ್, ಕೊಡಿಯಾಕ್ ಮತ್ತು ಟಾರ್ಕ್ (ಡೈಮ್ಲರ್ ಜೊತೆಗೆ) ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ, ಚೀನಾದ ಬೈದು 2021ರ ಕೊನೆಯಲ್ಲಿ ಸ್ವಯಂ-ಚಾಲನಾ ಟ್ರಕ್ ತಯಾರಿಕೆ ಮಾಡುವುದಾಗಿ ತಿಳಿಸಿತ್ತು. ಇಷ್ಟೇ ಅಲ್ಲದೆ, ಸ್ವೀಡಿಶ್ ಕಂಪನಿ ಐನ್‌ರೈಡ್ ಶೀಘ್ರದಲ್ಲೇ ಜರ್ಮನಿಯಲ್ಲಿ ರಸ್ತೆಗಳಲ್ಲಿ ಈ ರೀತಿಯ ಟ್ರಕ್‌ಗಳನ್ನು ಪರೀಕ್ಷೆಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ವರದಿಯಾಗಿದೆ.

Most Read Articles

Kannada
English summary
Wow a truck ran on the road without a driver a moment of shock for everyone
Story first published: Thursday, December 1, 2022, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X