ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಯುವತಿಯೊಬ್ಬಳು ರಸ್ತೆ ಮಧ್ಯದಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಕಾಣಬಹುದು.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಈ ವೀಡಿಯೊದಲ್ಲಿರುವ ಯುವತಿ ಕ್ಯಾಬ್ ಚಾಲಕನ ಸೆಲ್ ಫೋನ್ ಅನ್ನು ಹೊಡೆದು ಹಾಕಿದ್ದಾಳೆ ಎಂದು ತಿಳಿದು ಬಂದಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಅರೆಸ್ಟ್ ಲಕ್ನೋ ಗರ್ಲ್ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಯುವತಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿರುವುದನ್ನು ನೋಡಿದ ವಾಹನ ಸವಾರರು ಒಂದು ಕ್ಷಣ ಗಾಬರಿಯಾದರು.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ವೈರಲ್ ಆಗಿರುವ ಈ ವೀಡಿಯೊದಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಸಹ ಕಾಣಬಹುದು. ಆದರೆ ಅವರು ಯುವತಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡುವುದನ್ನು ತಡೆಯಲಿಲ್ಲ. ಬದಲಿಗೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಮಹಿಳೆ ಎಂಬ ಕಾರಣಕ್ಕೆ ಅವರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲಿಲ್ಲ ಎಂದು ಹೇಳಲಾಗಿದೆ. ಈ ಘಟನೆ ನಡೆದಾಗ ಸ್ಥಳದಲ್ಲಿ ಮಹಿಳಾ ಪೊಲೀಸರು ಯಾರು ಇರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ವೀಡಿಯೊದಲ್ಲಿ ಯುವತಿ ಕ್ಯಾಬ್ ಚಾಲಕನ ಮೇಲೆ ಥಳಿಸುತ್ತಲೇ ಇದ್ದಾಳೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಕೆಲ ಸಮಯದ ನಂತರ ಅಲ್ಲಿದ್ದವರು ಈ ಘಟನೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಆದರೆ ಆ ಯುವತಿ ಕ್ಯಾಬ್ ಚಾಲಕನಿಗೆ ಸಹಾಯ ಮಾಡಲು ಬಂದ ವ್ಯಕ್ತಿಯ ಮೇಲೆಯೇ ಹಲ್ಲೆ ಮಾಡಿದ್ದಾಳೆ. ಆದರೆ ಆತ ಕ್ಯಾಬ್ ಚಾಲಕನಂತೆ ಸುಮ್ಮನಿರಲಿಲ್ಲ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಬದಲಿಗೆ ತನ್ನ ಮೇಲೆ ಹಲ್ಲೆ ಮಾಡಿದ ಯುವತಿಯ ವಿರುದ್ಧ ತಿರುಗಿ ಬಿದ್ದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಗೆ ಏನು ಕಾರಣ ಎಂಬುದು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ವಾಹನಗಳು ವೇಗವಾಗಿ ಬರುತ್ತಿದ್ದಾಗ ಆ ಯುವತಿ ಜೀಬ್ರಾ ಕ್ರಾಸಿಂಗ್‌ ಮೇಲೆ ನಿಧಾನವಾಗಿ ನಡೆದು ಕೊಂಡು ಹೋಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಆಗ ಆ ಹಾದಿಯಲ್ಲಿ ಬಸ್ಸೊಂದು ಸಾಗುವುದನ್ನು ವೀಡಿಯೊದಲ್ಲಿ ಕಾಣಬಹುದು.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಇದೇ ವೇಳೆ ಯುವತಿಯಿಂದ ಹಲ್ಲೆಗೊಳಗಾದ ಕ್ಯಾಬ್ ಚಾಲಕ ಸಹ ಅದೇ ದಾರಿಯಲ್ಲಿ ಕಾರು ಚಾಲನೆ ಮಾಡುತ್ತಾ ಬಂದಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ಕಾರಣ ಕ್ಯಾಬ್ ಚಾಲಕ ಯುವತಿಯನ್ನು ಗಮನಿಸಿರಲಿಲ್ಲವೆಂದು ಕಾಣುತ್ತದೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಯುವತಿ ಕಂಡ ತಕ್ಷಣವೇ ತನ್ನ ಕಾರ್ ಅನ್ನು ನಿಲ್ಲಿಸಿದ್ದಾನೆ. ಇದರಿಂದ ಯುವತಿಗೆ ಯಾವುದೇ ತೊಂದರೆಯಾಗಿಲ್ಲ. ಆದರೂ ಸಹ ಆ ಯುವತಿ ಕಾರಿನ ಮೇಲೆ ಗುದ್ದುತ್ತಾ ಕ್ಯಾಬ್ ಚಾಲಕನನ್ನು ಕಾರಿನಿಂದ ಹೊರಗೆ ಬರುವಂತೆ ಮಾಡುತ್ತಾಳೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಕ್ಯಾಬ್ ಚಾಲಕ ಹೊರ ಬರುತ್ತಲೇ ಈ ಎಲ್ಲಾ ಘಟನೆಗಳು ನಡೆದಿವೆ. ಘಟನೆ ಕುರಿತು ಪೊಲೀಸರು ಕ್ಯಾಬ್ ಚಾಲಕನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಆತನ ವಿರುದ್ಧ ಯಾವ ಯಾವ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಪೊಲೀಸರು ಕ್ಯಾಬ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಸುದ್ದಿ ವೇಗವಾಗಿ ಹರಡುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಕ್ಯಾಬ್ ಚಾಲಕನಿಗೆ ಬೆಂಬಲ ಸೂಚಿಸಿದ್ದಾರೆ. ಇದರ ಜೊತೆಗೆ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಟ್ವಿಟರ್‌ನಲ್ಲಿ ಅರೆಸ್ಟ್ ಲಕ್ನೋ ಗರ್ಲ್ ಎಂಬ ಹ್ಯಾಶ್‌ಟ್ಯಾಗ್ ಆರಂಭಿಸಿ ಕ್ಯಾಬ್ ಚಾಲಕನಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ನಡು ರಸ್ತೆಯಲ್ಲಿ ನಡೆದ ಈ ಘಟನೆ ಭಾರೀ ಸಂಚಲನವನ್ನುಂಟು ಮಾಡಿದೆ.

ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವತಿ

ಹಲವು ನೆಟಿಜನ್‌ಗಳು ಸಾರ್ವಜನಿಕ ರಸ್ತೆಯಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಯುವತಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಲಕ್ನೋ ಪೊಲೀಸರು ಈ ಯುವತಿಯ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡ ಬೇಕಿದೆ.

Most Read Articles

Kannada
English summary
Young lady thrashes cab driver in public road video goes viral details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X