ರೂ.200 ಟ್ರಾಫಿಕ್ ಉಲ್ಲಂಘನೆ ದಂಡದ ಪ್ರಕರಣವನ್ನು ಗೆಲ್ಲಲು ರೂ.10 ಸಾವಿರ ಖರ್ಚು ಮಾಡಿದ ಬೈಕ್ ಮಾಲೀಕ

ಕೊರೊನಾ ವೈರಸ್ನಿಂದಾಗಿ ಎಲ್ಲಾ ವಲಯಗಳಲ್ಲೂ ಆರ್ಥಿಕ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ದಾಖಲೆಯ ಮೊತ್ತ ಸಂಗ್ರಹಿಸುತ್ತಿದ್ದಾರೆ. ಸೋಂಕು ನಿರ್ವಹಣೆಗಾಗಿ ಈ ಬಾರಿ ಪೊಲೀಸರು ಹೆಚ್ಚು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ಟ್ರಾಫಿಕ್ ಪೊಲೀಸರು ದಂಡದ ಚಲನ್‌ಗಳನ್ನು ನೀಡುತ್ತಾರೆ. ನಮ್ಮಲ್ಲಿ ಈ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳದೆ ಟ್ರಾಫಿಕ್ ದಂಡದ ಚಲನ್ ಪಾವತಿಸುತ್ತಾರೆ. ಆದರೆ ಪುಣೆಯ ಉದ್ಯಮಿಯೊಬ್ಬರು ರೂ.200 ಟ್ರಾಫಿಕ್ ದಂಡದ ಚಲನ್ ವಿರುದ್ದ ಹೋರಾಡಿದ್ದಾರೆ ಇವರು ಪಾರ್ಕಿಂಗ್ ಚಿಹ್ನಿ ಹಿಂಭಾಗಕ್ಕೆ ಇದ್ದ ಕಡೆ ಪಾರ್ಕ್ ಮಾಡದೆ ಅದರ ಮುಂಭಾಗದಲ್ಲಿ ಬೈಕನ್ನು ಪಾರ್ಕ್ ಮಾಡಿದ್ದರು, ಇದೇ ಕಾರಣದಿಂದ ಟ್ರಾಫಿಕ್ ಪೊಲೀಸರ್ ಅವರಿಗೆ ಈ ವರ್ಷದ ಜನವರಿಯಲ್ಲಿ ಚಲನ್ ಜಾರಿ ಮಾಡಿದ್ದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಜನವರಿಯಲ್ಲಿ ಬಿನೊಯ್ ಗೋಪಾಲನ್ ಅವರು ಪಿಂಪ್ರಿ-ಚಿಂಚ್‌ವಾಡ್ ಟ್ರಾಫಿಕ್ ಪೊಲೀಸರಿಂದ ರೂ.200 ಚಲನ್ ಪಡೆದಿದ್ದರು. ಈ ರೀತಿಯ ಪಾರ್ಕಿಂಗ್ ಚಿಹ್ನೆಯನ್ನು ಸರಿಯಾಗಿ ಗಮನಿಸದೆ ವಾಹನ ಪಾರ್ಕ್ ಮಾಡಿ ಹಲವಾರು ಜನರು ದಂಡ ಕಟ್ಟಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ ಬಿನೊಯ್ ಗೋಪಾಲನ್ ರೂ.200 ಟ್ರಾಫಿಕ್ ದಂಡ ಕಟ್ಟಲು ಸಿದ್ದವಾಗಿರಲಿಲ್ಲ. ಒಂದು ವೇಳೆ ರೂ.200 ಟ್ರಾಫಿಕ್ ದಂಡ ಕಟ್ಟಿದ್ದರೆ ಆ ಪ್ರಕರಣ ಅಲ್ಲಿಗೆ ಅಂತ್ಯ ಕಾಣುತ್ತಿತ್ತು. ಆದರೆ ಅವರು ದಂಡ ಕಟ್ಟುವ ಬದಲು ಟ್ರಾಫಿಕ್ ಪೊಲೀಸ್ ಕಚೇರಿಗೆ ಭೇಟಿ ನೀಡಿದರು ಮತ್ತು ಹಲವಾರು ಟ್ರಾಫಿಕ್ ಪೊಲೀಸರನ್ನು ಭೇಟಿಯಾದರು ಮತ್ತು ಹಲವಾರು ಅರ್ಜಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಅವರು ಟ್ರಾಫಿಕ್ ಪೊಲೀಸ್ ಆಯುಕ್ತರ ವಿರುದ್ಧ ಪ್ರಕರಣ ದಾಖಲಿಸಿದರು ಮತ್ತು ಅಸಂಖ್ಯಾತ ವಿಚಾರಣೆಯ ನಂತರ, ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಮತ್ತು ಅವರ ವಿರುದ್ಧ ಹೊರಡಿಸಲಾದ ಆನ್‌ಲೈನ್ ಚಲನ್ ಅನ್ನು ಹಿಂತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ವರದಿಯ ಪ್ರಕಾರ, 45 ವರ್ಷದ ಬಿನೊಯ್ ಗೋಪಾಲನ್ ಪುಣೆಯ ಖರಲ್‌ವಾಡಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾಕ್ಕೆ ಭೇಟಿ ನೀಡುತ್ತಿದ್ದರು. ಬಿನೊಯ್ ತನ್ನ ಬೈಕನ್ನು ಬ್ಯಾಂಕಿನ ಹೊರಗಿನ ಅಧಿಕೃತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಪಾರ್ಕಿಂಗ್ ಸಂಕೇತಗಳ ಬಲಭಾಗದ ಪಾರ್ಕಿಂಗ್ ಚಿಹ್ನೆ ಕಾಣೆಯಾಗಿದೆ ಎಂದು ಬಿನೊಯ್ ಗಮನಿಸಿದರು ಮತ್ತು ಕೆಲವು ದುಷ್ಕರ್ಮಿಗಳು ಅದನ್ನು ತೆಗೆದುಹಾಕಿರಬೇಕು ಎಂದು ಅವರು ಅರಿತುಕೊಂಡರು. ಆದರೆ ಟ್ರಾಫಿಕ್ ಪೊಲಿಸರು ಅವರಿಗೆ ದಂಡ ವಿಧಿಸಿದ್ದರು. ಇದು ತನ್ನ ತಪ್ಪು ಅಲ್ಲ ಎಂದು ಪೊಲೀಸರಿಗೆ ಅರ್ಥಮಾಡಿಸಲು ಬಿನೊಯ್ ಪ್ರಯತ್ನಿಸಿದರು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ, ಪೊಲೀಸರು ಇದನ್ನು ನಂಬಲಿಲ್ಲ. ಅವರು ಈ ವಿಷಯವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದರು. ದುಷ್ಕರ್ಮಿಗಳು ಮಾಡಿರುವುದಾಗಿ ಪುರಾವೆಗಳನ್ನು ಸಲ್ಲಿಸಿದರು. ಅಧಿಕಾರಿಗಳು ಆರಂಭದಲ್ಲಿ ಅವರ ವಾದವನ್ನು ಒಪ್ಪಿಕೊಂಡರು ಮತ್ತು ದಾಖಲೆಗಳ ಪ್ರಕಾರ, ಸ್ಥಳವು ಅಧಿಕೃತ ಪಾರ್ಕಿಂಗ್ ಸ್ಥಳವಾಗಿದೆ ಎಂದು ಪ್ರತಿಪಾದಿಸಿದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ ಪೊಲೀಸರು ಅವರು ಚಲನ್ ರದ್ದುಗೊಳಿಸಲು ನಿರಾಕರಿಸಿದರು. ನಂತರ ಅಳಿಸಿದ ಚಿಹ್ನೆ ತಮ್ಮನ್ನು ಗೊಂದಲಕ್ಕೀಡು ಮಾಡಿದೆ ಎಂದು ಒಪ್ಪಿಕೊಂಡಾಗ ಪೊಲೀಸರು ರೂ.200 ದಂಡದ ಚಲನ್ ಅನ್ನು ರದ್ದುಗೊಳಿಸಿದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ ಆರಂಭದಲ್ಲಿ ಪೊಲೀಸರು ಬಿನೊಯ್ ತಪ್ಪಿಲ್ಲ ಎಂದು ಅರಿತರೂ ಚಲನ್ ಅನ್ನು ಆನ್‌ಲೈನ್ ಮೂಲಕ ರದ್ದುಗೊಳಿಸಲು ನಿರಾಕರಿಸಿದ್ದರು. ಪೊಲೀಸರು ಆರಂಭದಲ್ಲಿ ಇಲ್ಲಿ ದಂಡ ಕಟ್ಟು ಇಲ್ಲದಿದ್ದರೆ ನ್ಯಾಯಾಲಯದ ಮೊರೆಹೋದರೆ ಲಕ್ಷಗಳನ್ನು ಖರ್ಚು ಮಾಡಬೇಕೆಂದು ಅವರು ಸಲಹೆ ನೀಡಿದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ ಬಿನೊಯ್ ಮಾಡದ ತಪ್ಪನ್ನು ಒಪ್ಪಿಕೊಂಡಿಲ್ಲ. ತನ್ನ ತಪ್ಪಿಲ್ಲ ಎಂದು ಪೊಲೀಸರ ಜೊತೆ ವಾದವನ್ನು ಮಂಡಿಸಿದ್ದರು, ನಂತರ ಅವರು ಉನ್ನತ ಅಧಿಕಾರಗಳ ಬಳಿ ತೆರಳಿದ್ದರು. ಕೊನೆಗೂ ಪೊಲೀಸರಿಗೂ ಇವರ ಒತ್ತಡ ಹೆಚ್ಚಾಗಿ ಟ್ರಾಫಿಕ್ ದಂಡದ ಚಲನ್ ಅನ್ನು ರದ್ದುಗೊಳಿಸಿದರು.

ರೂ.200 ಟ್ರಾಫಿಕ್ ದಂಡಕ್ಕೆ ಹೋರಾಡಿ ರೂ.10 ಸಾವಿರ ಖರ್ಚು ಮಾಡಿದ ಉದ್ಯಮಿ

ಆದರೆ ಅವರು ಇದ್ದಕ್ಕಾಗಿ ಎರಡು ತಿಂಗಳು ಪೊಲೀಸ್ ಇಲಾಖೆಯ ಕಚೇರಿಗಳಲ್ಲಿ ಅಲೆದಾಡಿದ್ದಾರೆ. ಇದಕ್ಕಾಗಿ ಅವರು ಎರಡು ತಿಂಗಳಿನಲ್ಲಿ ಬರೊಬ್ಬರಿ ರೂ. 10 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಇಲ್ಲಿ ಅವರು ದಂಡ ಕಟ್ಟಿ ಸುಮ್ಮನೆ ಇರಬಹುದಿತ್ತಿತ್ತು. ಆದರೆ ತನ್ನದಲ್ಲದ ತಪ್ಪಿಗೆ ದಂಡ ಕಟ್ಟಲು ಅವರು ಸಿದ್ದರಿರಲಿಲ್ಲ. ಆದರೆ ಅವರು ನ್ಯಾಯಕ್ಕಾಗಿ ಖರ್ಚು ಮಾಡಿರುವುದು ಗಮನಿಸಬೇಕಾದ ವಿಚಾರವಾಗಿದೆ.

Most Read Articles

Kannada
English summary
Pune Businessman Spends Rs. 10,000 To Win a Rs. 200 Traffic Fine Case. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X