ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಕಾರು ಅಥವಾ ದ್ವಿಚಕ್ರ ವಾಹನ ಹೊಂದುವುದು ಈಗಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಎಲ್ಲಾ ರೀತಿಯ ಕಾರ್ಯಗಳಿಗೆ ಬಳಸುವುದರಿಂದ ಪ್ರತಿ ಮನೆಯಲ್ಲೂ ಕನಿಷ್ಠ ಪಕ್ಷ ಒಂದಾದರೂ ದ್ವಿಚಕ್ರ ವಾಹನಗಳಿರುತ್ತವೆ. ವಾಹನವಿದ್ದ ಮೇಲೆ ಅವುಗಳು ಪಂಕ್ಚರ್ ಆಗುವುದು ಸಹಜ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಪಂಕ್ಚರ್ ಸಮಸ್ಯೆಯನ್ನು ಎದುರಿಸುವ ಕಾರು ಮಾಲೀಕರು ಪಂಕ್ಚರ್ ಆದ ಟಯರ್ ಗಳನ್ನು ಸ್ಟೆಪ್ನಿ ಮೂಲಕ ಬದಲಿಸುತ್ತಾರೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಸ್ಟೆಪ್ನಿಗಳಿಲ್ಲದ ಕಾರಣಕ್ಕೆ ಪಂಕ್ಚರ್ ಅಂಗಡಿಗೆ ಹೋಗಬೇಕಾಗುತ್ತದೆ. ಈಗ ಬರುತ್ತಿರುವ ಬಹುತೇಕ ವಾಹನಗಳು ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿರುತ್ತವೆ. ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊರತೆಗೆಯದೇ ಸುಲಭವಾಗಿ ಪಂಕ್ಚರ್ ಹಾಕಬಹುದು.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಆದರೆ ಟ್ಯೂಬ್‌ ಹೊಂದಿರುವ ಟಯರ್ ಗಳಿಗೆ ಪಂಕ್ಚರ್ ಹಾಕಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಟಯರ್ ಅನ್ನು ಹೊರತೆಗೆದು, ನಂತರ ಟ್ಯೂಬ್ ಅನ್ನು ಹೊರತೆಗೆದು ಟ್ಯೂಬ್ ನಲ್ಲಿ ಎಲ್ಲಿ ಪಂಕ್ಚರ್ ಆಗಿದೆ ಎಂದು ಪತ್ತೆ ಹಚ್ಚಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಟ್ಯೂಬ್‌ಲೆಸ್ ಟಯರ್‌ಗಳಿಗೆ ಕೆಲ ಕ್ಷಣದಲ್ಲಿಯೇ ಪಂಕ್ಚರ್ ಹಾಕಬಹುದು. ಇದಕ್ಕೆ ತಗುಲುವ ವೆಚ್ಚವು ಕಡಿಮೆ. ಇದಕ್ಕೆ ರೂ.100 ರಿಂದ ರೂ.150ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ. ಪಂಕ್ಚರ್ ಅಂಗಡಿಗಳು ಹೆಚ್ಚಾಗಿ ರಸ್ತೆ ಬದಿಯಲ್ಲಿರುತ್ತವೆ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಪಂಕ್ಚರ್ ಹಾಕುವವನೊಬ್ಬ ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡು, ವಾಹನ ಸವಾರರನ್ನು ಹಗಲು ದರೋಡೆ ಮಾಡುತ್ತಿದ್ದಾನೆ. ಯುವಕನೊಬ್ಬನ ಬೈಕಿನ ಟಯರಿಗೆ ಪಂಕ್ಚರ್ ಹಾಕಲು ರೂ.6,500 ಪೀಕಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಮಹಾರಾಷ್ಟ್ರದ ಥಾಣೆ ನಿವಾಸಿ ಚಿರಾಗ್ ನಿಂಬಾರೆ ಎಂಬ ಯುವಕನೇ ಹೊಸ ಟಯರ್‌ನ ಬೆಲೆಗಿಂತ ಹೆಚ್ಚಿನ ಪಂಕ್ಚರ್ ಶುಲ್ಕವನ್ನು ಪಾವತಿಸಿದವನು. ಚಿರಾಗ್ ನಿಂಬಾರೆ ಪುಣೆಯಲ್ಲಿರುವ ತನ್ನ ಸಂಬಂಧಿಕರು ಹಾಗೂ ಕುಟುಂಬದವರನ್ನು ಭೇಟಿಯಾಗಲು ತನ್ನ ಬೈಕಿನಲ್ಲಿ ಹೊರಟಿದ್ದಾನೆ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಹೀಗೆ ಹೊರಟಾಗ ಆತನ ಬೈಕಿನ ಹಿಂದಿನ ಟಯರ್ ಪಂಕ್ಚರ್ ಆಗಿದೆ. ಪಂಕ್ಚರ್ ಆಗಿರುವುದು ತಕ್ಷಣ ಆತನ ಗಮನಕ್ಕೆ ಬಂದಿಲ್ಲ. ಕೆಲ ದೂರ ಚಲಿಸಿದ ನಂತರ ಪಂಕ್ಚರ್ ಆಗಿರುವುದು ಆತನ ಗಮನಕ್ಕೆ ಬಂದಿದೆ. ಪಂಕ್ಚರ್ ಹಾಕಿಸಲು ರಸ್ತೆಬದಿಯಲ್ಲಿರುವ ಪಂಕ್ಚರ್ ಅಂಗಡಿಗೆ ಹೋಗಿದ್ದಾನೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಮೆಕಾನಿಕ್ ಟಯರ್ ನಲ್ಲಿ ಹಲವಾರು ಪಂಕ್ಚರ್ ಇದ್ದು, ಟಯರ್ ಬದಲಿಸುವಂತೆ ಹೇಳಿದ್ದಾನೆ. ಹೊಸ ಟಯರಿನ ಬೆಲೆ ರೂ.8,500 ಎಂದು ಹೇಳಿದ್ದಾನೆ. ಚಿರಾಗ್ ಹೊಸ ಟಯರ್ ಹಾಕುವ ಅಗತ್ಯವಿಲ್ಲ, ಪಂಕ್ಚರ್ ಹಾಕಿದರೆ ಸಾಕು ಎಂದು ಹೇಳಿದ್ದಾನೆ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಪಂಕ್ಚರ್ ಹಾಕಿದ ನಂತರ ಮೆಕಾನಿಕ್ ಪಂಕ್ಚರ್ ಹಾಕಲು ರೂ.9,500ಗಳಾಗಿದೆ ಎಂದು ಚಿರಾಗ್ ಗೆ ಬಿಲ್ ನೀಡಿದ್ದಾನೆ. ಈ ಬಗ್ಗೆ ಚಿರಾಗ್ ಹಾಗೂ ಮೆಕಾನಿಕ್ ನಡುವೆ ಮಾತಿನ ಚಕಮಕಿ ನಡೆದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಟಯರ್ ನಲ್ಲಿ 60ಕ್ಕೂ ಹೆಚ್ಚು ಪಂಕ್ಚರ್‌ಗಳಾಗಿದ್ದು ಅವುಗಳನ್ನು ಸರಿಪಡಿಸಲು ಬೇಕಾದ ಎಲ್ಲಾ ಉಪಕರಣಗಳನ್ನು ಹೊರಗಿನಿಂದ ಖರೀದಿಸಿ ತಂದಿರುವುದಾಗಿ ಮೆಕಾನಿಕ್ ಹೇಳಿದ್ದಾನೆ. ಕೆಲ ಸಮಯದ ಮಾತಿನ ಚಕಮಕಿಯ ನಂತರ ಮೆಕಾನಿಕ್ ರೂ.6,500 ನೀಡಬೇಕೆಂದು ಹೇಳಿದ್ದಾನೆ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಇದೇ ವೇಳೆ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಮೆಕಾನಿಕ್ ಪರವಾಗಿ ಮಾತನಾಡಿದ್ದಾರೆ. ರೂ.6,500 ನೀಡಲೇ ಬೇಕೆಂದು ಒತ್ತಾಯಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಿರಾಗ್ ರೂ.6,500 ಪಾವತಿಸಿ ಅಲ್ಲಿದ್ದ ಹೊರಟು ಹೋಗಿದ್ದಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಈ ಬಗ್ಗೆ ಚಿರಾಗ್ ಯಾವುದೇ ದೂರು ದಾಖಲಿಸಿಲ್ಲ. ಈ ಘಟನೆ ಬಗ್ಗೆ ಪುಣೆ ಮಿರರ್‌ ಜೊತೆಗೆ ಮಾತನಾಡಿರುವ ಚಿರಾಗ್ ನಿಂಬಾರೆ ತುರ್ತು ಕೆಲಸವಿದ್ದ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲವೆಂದು ಹೇಳಿದ್ದಾನೆ.

ಹೊಸ ಟಯರ್‌ ಬೆಲೆಗಿಂತ ಪಂಕ್ಚರ್ ಗೆ ಹೆಚ್ಚು ಹಣ ತೆತ್ತ ಬೈಕ್ ಸವಾರ

ಘಟನೆಯ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಯುವಕನು ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಈ ರೀತಿಯ ಘಟನೆಗಳಿಂದ ಮೋಸ ಹೋದವರು ಮುಂದೆ ಬಂದು ದೂರು ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಂಕ್ಚರ್ ಹಾಕಿಸಲು ಇಷ್ಟೊಂದು ಹಣವನ್ನು ನೀಡುವ ಬದಲು ಹೊಸ ಟಯರ್ ಖರೀದಿಸಬಹುದಿತ್ತು ಎಂದು ಇಂಟರ್ ನೆಟ್ ಬಳಕೆದಾರರು ಹೇಳುತ್ತಿದ್ದಾರೆ.

Most Read Articles

Kannada
English summary
Youngster from Thane paid Rs.6500 for bike tyre puncture. Read in Kannada.
Story first published: Thursday, September 24, 2020, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X