ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಅಂತರ್ಯುದ್ಧದಿಂದ ಬಳಲುತ್ತಿರುವ ದೇಶಗಳಲ್ಲಿ ಯೆಮೆನ್ ಕೂಡ ಸೇರಿದೆ. ಯೆಮೆನ್ ಬಡತನದಿಂದ ನರಳುತ್ತಿರುವ ಬಡ ದೇಶ. ಅಂತರ್ಯುದ್ಧದಿಂದ ಯೆಮನ್‌ನಲ್ಲಿ ಬಡತನ ಮತ್ತಷ್ಟು ಉಲ್ಬಣಗೊಂಡಿದೆ.

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಈಗ ಕರೋನಾ ವೈರಸ್ ನಿಂದಾಗಿ ಯೆಮನ್‌ನಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಭಾರಿ ಮಳೆಯೂ ಸಹ ಯೆಮೆನ್ ಜನರ ಜೀವನವನ್ನು ತತ್ತರಿಸುವಂತೆ ಮಾಡಿದೆ. ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಯೆಮೆನ್ ಜನರಿಗೆ ನೆರವಾಗಲು ಅಮೆರಿಕಾದ ವ್ಯಕ್ತಿಯೊಬ್ಬರು ಸುದೀರ್ಘ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಜನರು ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಹಣವನ್ನೂ ನೀಡುತ್ತಿದ್ದಾರೆ.

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಯೆಮನ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಹಣ ಸಂಗ್ರಹಿಸುವುದಕ್ಕಾಗಿ ಅಮೆರಿಕಾದ ವ್ಯಕ್ತಿಯೊಬ್ಬರು ಅಮೆರಿಕಾದ ಪೂ ಪೂ ಪಾಯಿಂಟ್‌ನಿಂದ ಪೀ ಪೀ ಕ್ರೀಕ್‌ಗೆ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಇದುವರೆಗೂ ಅವರು 4 ಸಾವಿರ ಕಿ.ಮೀಗಿಂತ ಹೆಚ್ಚು ಸೈಕಲ್ ಸವಾರಿ ಮಾಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಹಣ ಸಂಗ್ರಹಿಸುವುದರ ಜೊತೆಗೆ ಜನರಿಗೆ ಯೆಮೆನ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರುಬೆನ್ ಲೋಪೆಜ್ ಎಂಬುವವರೇ ಯೆಮೆನ್ ಗಾಗಿ ಹಣ ಸಂಗ್ರಹಿಸಲು ಸೈಕಲ್ ಸವಾರಿ ಮಾಡುತ್ತಿರುವವರು.

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

36 ದಿನಗಳಲ್ಲಿ ಅವರು 4,000 ಕಿ.ಮೀ ಸಂಚರಿಸಿದ್ದಾರೆ. ಅವರು ತಮ್ಮ ಸೈಕಲ್ ಪ್ರಯಾಣದ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಅಮೆರಿಕಾದಲ್ಲಿರುವ ಗ್ರಾಮೀಣ ಪ್ರದೇಶದ ಅದ್ಭುತ ಭೂದೃಶ್ಯಗಳ ಫೋಟೋಗಳನ್ನು ಶೇರ್ ಮಾಡುವ ಮೂಲಕ, ತಮ್ಮ ಅನುಭವವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ರುಬೆನ್ ಲೋಪೆಜ್ ತಮ್ಮ ಪ್ರಯಾಣವನ್ನು ಅಮೆರಿಕಾದ ವಾಷಿಂಗ್ಟನ್ ರಾಜ್ಯದ ಪೂ ಪೂ ಪಾಯಿಂಟ್‌ನಿಂದ ಆರಂಭಿಸಿದರು. ಸದ್ಯಕ್ಕೆ ಅವರು ಓಹಿಯೋ ಪ್ರಾಂತ್ಯದ ಪೀ ಪೀ ಕ್ರೀಕ್‌ ತಲುಪಿದ್ದಾರೆ.

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಅವರು 36 ದಿನಗಳಲ್ಲಿ 9 ಪ್ರಾಂತ್ಯಗಳ ಮೂಲಕ ಪ್ರಯಾಣಿಸಿದ್ದಾರೆ. ರುಬೆನ್ ಲೋಪೆಜ್ 5,000 ಅಮೆರಿಕನ್ ಡಾಲರ್ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆಂದು ಹೇಳಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

4,000 ಕಿ.ಮೀ ಪ್ರಯಾಣದ ನಂತರ ಅವರು ತಮ್ಮ ನಿಧಿ ಸಂಗ್ರಹದ ಗುರಿಯನ್ನು ತಲುಪಿದ್ದಾರೆ ಎಂದು ವರದಿಯಾಗಿದೆ. ಇದುವರೆಗೂ ಸುಮಾರು 7,000 ಅಮೆರಿಕನ್ ಡಾಲರ್ ಗಳಷ್ಟು ಹಣವನ್ನು ಸಂಗ್ರಹಿಸಲಾಗಿದೆ.

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಆದರೆ ಅವರು 60 ದಿನಗಳಲ್ಲಿ 5,000 ಕಿ.ಮೀ ಪ್ರಯಾಣಿಸುವ ಮತ್ತೊಂದು ಗುರಿಯನ್ನು ಹೊಂದಿದ್ದಾರೆ. ಮುಂದಿನ 24 ದಿನಗಳಲ್ಲಿ ರುಬೆನ್ ಲೋಪೆಜ್ ಪೀ ಪೀ ಕ್ರೀಕ್ ನಿಂದ ಪೀ ಪೀ ದ್ವೀಪದ ಕಡೆಗೆ ಸಾಗಲಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಡ ದೇಶಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾದ ಶ್ರೀಮಂತ ದೇಶದ ಪ್ರಜೆ

ಅಲ್ಲಿ ಅವರ ಪ್ರಯಾಣ ಕೊನೆಗೊಳ್ಳಲಿದೆ. ರುಬೆನ್ ಲೋಪೆಜ್ ಅವರ ಈ ಪ್ರಯಾಣದ ಬಗ್ಗೆ ಗೋಫಂಡ್ ಮಿ ವರದಿ ಮಾಡಿದೆ. ತಾವು ಸಂಗ್ರಹಿಸುವ ಸಂಪೂರ್ಣ ಮೊತ್ತವನ್ನು ಯೆಮೆನ್ ರಿಲೀಫ್ ಅಂಡ್ ರೀಕನ್ಸ್ಟ್ರಕ್ಷನ್ ಫೌಂಡೇಶನ್ (ವೈಆರ್ ಆರ್ ಎಫ್) ಗೆ ನೀಡಲಾಗುವುದು ಎಂದು ರುಬೆನ್ ಲೋಪೆಜ್ ಹೇಳಿದ್ದಾರೆ.

Most Read Articles

Kannada
English summary
Youngster from US collecting fund for Yemen through cycling. Read in Kannada.
Story first published: Wednesday, September 30, 2020, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X