ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಈಗ ಟೆಕ್ನಾಲಜಿಯು ತುಂಬಾ ಮುಂದುವರೆದಿದ್ದು, ತಪ್ಪು ಮಾಡಿದವರನ್ನು ಅಧಿಕಾರಿಗಳು ಸುಲಭವಾಗಿ ಸೆರೆ ಹಿಡಿಯುತ್ತಿದ್ದಾರೆ. ಹೈದರಾಬಾದ್‌ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಈ ಬಗ್ಗೆ ಎಬಿಎನ್ ತೆಲುಗು ವರದಿ ಮಾಡಿದೆ. ಸಾರ್ವಜನಿಕ ರಸ್ತೆಗಳಲ್ಲಿ ಯುವಕರು ಕಾರು, ಬೈಕುಗಳುಲ್ಲಿ ಸ್ಟಂಟ್ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಈ ಯುವಕ ಕೂಡ ಇದೇ ರೀತಿ ಸ್ಟಂಟ್ ಮಾಡಿದ್ದಾನೆ. ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಯುವಕನ ಬಂಧನದ ಬಗ್ಗೆ ಸೈಬರಾಬಾದ್ ಪೊಲೀಸರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಬಂಧನಕ್ಕೊಳಗಾಗದ ಯುವಕ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವಾಗ ಆತನನ್ನು ಹಿಂಬಾಲಿಸಿದವರು ಆತ ಸ್ಟಂಟ್ ಮಾಡುವ ವೀಡಿಯೊ ತೆಗೆದುಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಈ ವೀಡಿಯೊ ವೈರಲ್ ಆದ ನಂತರ ಎಚ್ಚೆತ್ತ ಸೈಬರಾಬಾದ್ ಪೊಲೀಸರು ಯುವಕನ ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆತನ ಪತ್ತೆಗೆ ಮುಂದಾಗಿದ್ದಾರೆ. ಕೊನೆಗೆ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಬಂಧಿತ ಯುವಕನ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡಿದ ಆರೋಪ ಹಾಗೂ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್'ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಯುವಕನ ಚಾಲಕ ಪರವಾನಗಿಯನ್ನು ರದ್ದುಗೊಳಿಸಲು ಪೊಲೀಸರು ಶಿಫಾರಸು ಮಾಡಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುವುದು ವಾಹನ ಚಾಲಕನಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ಪ್ರಯಾಣಿಸುವ ಇತರರ ಮೇಲೂ ಪರಿಣಾಮ ಬೀರುತ್ತದೆ.

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಆದರೂ ಯುವಕರು ಸ್ಟಂಟ್ ಮಾಡುವುದನ್ನು ಮುಂದುವರೆಸಿದ್ದಾರೆ. ದೇಶಾದ್ಯಂತ ಸಾರ್ವಜನಿಕ ರಸ್ತೆಗಳಲ್ಲಿ ಸಾಹಸದಲ್ಲಿ ತೊಡಗಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುತ್ತಿದ್ದಾರೆ. ಸಂಚಾರಿ ಪೊಲೀಸರು ಸಿಸಿಟಿವಿಗಳ ಸಹಾಯದಿಂದ ಸ್ಟಂಟ್ ಮಾಡುವವರನ್ನು ಮಾತ್ರವಲ್ಲದೇ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಸಹ ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದಾರೆ.

ಇ ಚಲನ್'ಗಳನ್ನು ವಾಹನ ಮಾಲೀಕರಿಗೆ ಫೋಟೋ ಹಾಗೂ ವೀಡಿಯೊ ಸಾಕ್ಷ್ಯಗಳ ಸಮೇತ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ವಾಹನ ಸವಾರರು ರಸ್ತೆಯಲ್ಲಿ ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಂಚಾರ ನಿಯಮಗಳನ್ನು ಪಾಲಿಸುವುದು ಸೂಕ್ತ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಬೈಕ್ ಸವಾರ

ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಹ ಸಿಸಿಟಿವಿ ಕ್ಯಾಮೆರಾಗಳು ವಾಹನ ಸವಾರರನ್ನು ಮೇಲ್ವಿಚಾರಣೆ ಮಾಡುತ್ತಿರುತ್ತವೆ ಎಂಬುದನ್ನು ವಾಹನ ಸವಾರರುಅರಿತು ವಾಹನ ಚಾಲನೆ ಮಾಡುವುದು ಒಳಿತು.

Most Read Articles

Kannada
English summary
Youth arrested for doing bike stunt in Hyderabad. Read in Kannada.
Story first published: Friday, March 5, 2021, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X