ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಹೊಸ ಸ್ಥಳಗಳಿಗೆ ಹೋದಾಗ ಜನರು ತಾವು ತಲುಪ ಬೇಕಿರುವ ಪ್ರದೇಶಗಳಿಗೆ ತೆರಳಲು ಗೂಗಲ್ ಮ್ಯಾಪ್'ನ ಮೊರೆ ಹೋಗುತ್ತಾರೆ. ಆದರೆ ಗೂಗಲ್ ಮ್ಯಾಪ್ ಸಹಾಯ ಪಡೆಯುತ್ತಿರುವ ಜನರು ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಇತ್ತೀಚೆಗೆ ರಷ್ಯಾದಲ್ಲಿ ಕೆಲವು ಯುವಕರು ಗೂಗಲ್ ಮ್ಯಾಪ್ ನೆರವು ಪಡೆಯಲು ಹೋಗಿ ಅಪಾಯಕಾರಿ ಸ್ಥಳದಲ್ಲಿ ಸಿಲುಕಿದ್ದರು. ಅವರ ನೆರವಿಗೆ ಯಾರೂ ಧಾವಿಸದ ಕಾರಣ ಅವರು ಅಲ್ಲಿಯೇ ಮೃತ ಪಟ್ಟಿದ್ದರು. ಇದೇ ರೀತಿಯ ಘಟನೆಯೊಂದು ಭಾರತದಲ್ಲಿಯೂ ನಡೆದಿದೆ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಯಾರನ್ನೂ ಕೇಳದೆ ಕೇವಲ ಗೂಗಲ್ ಮ್ಯಾಪ್ ಅನ್ನು ಅವಲಂಬಿಸಿದ ಕೆಲವು ಯುವಕರು ಅಪಾಯಕ್ಕೆ ಸಿಲುಕಿದ್ದಾರೆ. ಮಾತ್ರವಲ್ಲದೇ ಒಬ್ಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ನಡೆದಿರುವುದು ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಮೂವರು ಯುವಕರು ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಮಹಾರಾಷ್ಟ್ರದ ಅತಿ ಎತ್ತರದ ಪರ್ವತವಾದ ಕಲ್ಸುಬೈಗೆ ಚಾರಣಕ್ಕೆಂದು ಹೋಗಿದ್ದಾರೆ. ಅವರಿಗೆ ಸ್ಥಳವು ಹೊಸದಾಗಿರುವ ಕಾರಣಕ್ಕೆ ಗೂಗಲ್ ಮ್ಯಾಪ್ ನೆರವನ್ನು ಪಡೆದಿದ್ದಾರೆ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಗೂಗಲ್ ಮ್ಯಾಪ್ ಮೇಲಿನ ಅತಿಯಾದ ಆತ್ಮವಿಶ್ವಾಸದಿಂದಾಗಿ ಬೇರೆಯವರ ಬಳಿ ವಿಚಾರಿಸುವ ಗೋಜಿಗೆ ಹೋಗಿಲ್ಲ. ಗೂಗಲ್ ಮ್ಯಾಪ್ ತೋರಿಸಿದ ಹಾದಿಯಲ್ಲಿ ಸಾಗಿದ ಯುವಕರು ನೀರಿನಿಂದ ಆವೃತ್ತವಾಗಿರುವ ಸೇತುವೆ ಮೇಲೆ ಹೋಗಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಇಡೀ ಸೇತುವೆ ನದಿ ನೀರಿನಿಂದ ಮುಳುಗಿದೆ. ನೀರಿನ ವೇಗವೂ ಹೆಚ್ಚಾಗಿದೆ. ಯುವಕರು ಕಾರನ್ನು ಸೇತುವೆಯ ಮೇಲೆ ಸಾಧ್ಯವಾದಷ್ಟು ವೇಗವಾಗಿ ಚಾಲನೆ ಮಾಡಿದ್ದಾರೆ. ಇದೇ ವೇಳೆ ನೀರಿನ ಹರಿವು ಹೆಚ್ಚಾಗಿ ಕಾರನ್ನು ನದಿಗೆ ಎಳೆದೊಯ್ದಿದೆ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಕಾರಿನಲ್ಲಿದ್ದ ಇಬ್ಬರು ಯುವಕರು ಈಜಿ ದಡ ಸೇರಿದರೆ, ಕಾರು ಚಾಲನೆ ಮಾಡುತ್ತಿದ್ದ ಸತೀಶ್ ಕುಲೆ ಎಂಬಾತ ಕಾರಿನೊಳಗೆ ಸಿಕ್ಕಿಬಿದ್ದಿದ್ದಾನೆ. ಆತನಿಗೆ ಈಜಲು ಬರುತ್ತಿರಲಿಲ್ಲವೆಂದು ತಿಳಿದು ಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಸತೀಶ್ ಕುಲೆ ನೀರಿನಿಂದ ಹೊರ ಬರಲು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಸ್ಥಳೀಯರು ಆತನನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಕೊನೆಗೆ ಆತನ ಶವವನ್ನು ಹೊರ ತೆಗೆದಿದ್ದಾರೆ. ಈ ಘಟನೆ ಮಧ್ಯ ರಾತ್ರಿ 1.45 ಸುಮಾರಿಗೆ ಸಂಭವಿಸಿದೆ ಎಂದು ಘಟನೆಯಲ್ಲಿ ಪಾರಾದ ಇಬ್ಬರು ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಗೂಗಲ್ ಮ್ಯಾಪ್'ನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಇಲ್ಲದಿರುವುದು ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಕಳೆದ ಕೆಲವು ದಿನಗಳಿಂದ ಈ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಇದೇ ವೇಳೆ ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿ ವಾಹನವನ್ನು ವೇಗವಾಗಿ ಚಾಲನೆ ಮಾಡಿದ್ದು ಸಹ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ವಾಹನವು ನಿಧಾನಗತಿಯಲ್ಲಿ ಚಲಿಸಿದ್ದರೆ ಪ್ರವಾಹವನ್ನು ತಪ್ಪಿಸ ಬಹುದಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಗೂಗಲ್ ಮ್ಯಾಪ್ ಬಳಸುವಾಗ ಸ್ಥಳೀಯರನ್ನು ವಿಚಾರಿಸುವುದು ಒಳಿತು. ಈ ಯುವಕರು ಆ ರೀತಿ ಮಾಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು. ಗೂಗಲ್ ಮ್ಯಾಪ್'ನ ಕಾರ್ಯವು ಅಸಮರ್ಪಕವಾಗಿದ್ದಾಗ ಯುವಕರು ಹೆಚ್ಚು ಎಚ್ಚರಿಕೆಯಿಂದ ಪ್ರಯಾಣಿಸ ಬೇಕು.

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಫಾರ್ಚೂನರ್ ಕಾರು ಚಾಲಕ

ಕೆಲವು ವಾಹನ ಸವಾರರ ಭಂಡ ಧೈರ್ಯದಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಈ ಅಪಘಾತವು ಪ್ರವಾಹ ಪರಿಸ್ಥಿತಿಯಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಹೋಗುವವರು ಹೆಚ್ಚಿನ ಜಾಗೃತೆ ವಹಿಸಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Youth drives car into flooded river following google map. Read in Kannada.
Story first published: Wednesday, January 13, 2021, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X