ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ದೇಶಾದ್ಯಂತ ಲಾಕ್‌ಡೌನ್ ಜಾರಿಯಾದಾಗಿನಿಂದ ಜನರ ಸಂಚಾರವು ಕಡಿಮೆಯಾಗಿದೆ. ಕೆಲವರು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ನಂತರ ವಾಹನ ಕಳ್ಳತನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿದಿನ ಹೊಸ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ಇತ್ತೀಚೆಗೆ ಚೆನ್ನೈನಲ್ಲಿಯೂ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚೆನ್ನೈ ನಿವಾಸಿ ಅಶೋಕ್ ಕುಮಾರ್ ರವರು ಯಾವಾಗಲೂ ತಮ್ಮ ಬೈಕನ್ನು ಮನೆಯ ಹೊರಗೆ ನಿಲ್ಲಿಸುತ್ತಾರೆ. ಎಂದಿನಂತೆ ಕಳೆದ ವಾರವು ಬೈಕನ್ನು ಮನೆಯ ಹೊರಗೆ ನಿಲ್ಲಿಸಿದ್ದಾರೆ. ಆದರೆ ಮರುದಿನ ನೋಡಿದಾಗ ಅವರ ಬೈಕ್ ಕಾಣೆಯಾಗಿತ್ತು.

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ಅಶೋಕ್ ಕುಮಾರ್ ತಮ್ಮ ಬೈಕ್ ಗಾಗಿ ಹಲವು ಕಡೆ ಹುಡುಕಾಟ ನಡೆಸಿದ್ದಾರೆ. ಬೈಕ್ ಪತ್ತೆಯಾಗದೇ ಇದ್ದಾಗ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೂವರು ಯುವಕರು ನಕಲಿ ಕೀಗಳನ್ನು ಬಳಸಿ ಬೈಕ್‌ ಕದಿಯುತ್ತಿರುವುದು ಕಂಡು ಬಂದಿದೆ. ಪೊಲೀಸರು ಈ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಕಳ್ಳರನ್ನು ಹುಡುಕಲು ಆರಂಭಿಸಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಬೈಕ್ ಕದ್ದ ಯುವಕರು ಬೈಕ್ ಅನ್ನು ಹೊತ್ತು ಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಖದೀಮರು ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ.

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ವಾಹನಗಳ್ಳರು ವಾಹನಗಳನ್ನು ಕಳುವು ಮಾಡಲು ನಕಲಿ ಕೀ ಬಳಸುವುದರಿಂದ ಹಿಡಿದು ಬೀಗವನ್ನು ಮುರಿದು ಹಾಕುವವರೆಗೆ ಎಲ್ಲಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಕಾರಣಕ್ಕೆ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು, ಅದರಲ್ಲೂ ವಿಶೇಷವಾಗಿ ಲಾಕ್‌ಡೌನ್ಅ ವಧಿಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವುದು ಅತಿ ಮುಖ್ಯ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ವಾಹನಗಳು ಕಳ್ಳತನವಾಗದಂತೆ ತಡೆಯುವ ಕೆಲವು ಕ್ರಮಗಳು:

1. ವಾಹನಗಳನ್ನು ಕಾಂಪೌಂಡ್ ಅಥವಾ ಗೇಟ್ ಗಳ ಒಳಗೆ ನಿಲ್ಲಿಸಿ.

2. ವಾಹನವನ್ನು ನಿಲ್ಲಿಸಿದ ನಂತರ ಲಾಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

3. ಸಾಧ್ಯವಾದರೆ ವಾಹನದಲ್ಲಿ ಜಿಪಿಎಸ್ ಹಾಗೂ ಅಲರ್ಟ್ ಸಿಸ್ಟಂಗಳನ್ನು ಅಳವಡಿಸಿ.

4. ವಾಹನಗಳನ್ನು ಯಾವುದೇ ಕಾರಣಕ್ಕೂ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಬೇಡಿ.

5. ಅಪರಿಚಿತ ವ್ಯಕ್ತಿಗಳಿಗೆ ವಾಹನದ ಕೀಗಳನ್ನು ನೀಡದಿರಿ.

ವಾಹನಗಳನ್ನು ನಿಲ್ಲಿಸಿ ಹೊರಗೆ ಹೋಗುತ್ತಿದ್ದರೆ, ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಬದಲು ಪೇ ಪಾರ್ಕಿಂಗ್ ಗಳನ್ನು ಬಳಸುವುದು ಒಳ್ಳೆಯದು. ಇದರಿಂದ ಕಳ್ಳತನದ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ಇತ್ತೀಚೆಗೆ ಲಕ್ನೋ ಪೊಲೀಸರು ವಾಹನಗಳ್ಳರನ್ನು ಬಂಧಿಸಿ ರೂ.11 ಕೋಟಿ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಲಕ್ನೋ ಪೊಲೀಸರು ಐವರನ್ನು ಬಂಧಿಸಿ ಒಟ್ಟು 112 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು

ಇದು ದೇಶದ ಅತಿದೊಡ್ಡ ಕಾರು ಕಳ್ಳತನ ಪ್ರಕರಣವಾಗಿದೆ ಎಂದು ಲಕ್ನೋ ಪೊಲೀಸರು ಹೇಳಿದ್ದಾರೆ. ಈ ಗ್ಯಾಂಗ್‌ ಇದುವರೆಗೆ 2000ಕ್ಕೂ ಹೆಚ್ಚು ವಾಹನಗಳನ್ನು ಕಳವು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ವಾಹನಗಳ ಮಾಹಿತಿಯನ್ನು ಮರೆಮಾಡಲು ಈ ಗ್ಯಾಂಗ್ ಅಪಘಾತಕ್ಕೀಡಾದ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿತ್ತು.

ಮೂಲ: ಪುತಿಯಥಲೈಮುರಾಯ್

Most Read Articles

Kannada
English summary
Youth steals bike with duplicate key in Chennai. Read in Kannada.
Story first published: Saturday, August 8, 2020, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X