ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ತಮ್ಮದೇ ಆದ ಕ್ರೇಜ್ ಇದೆ. ಕ್ಲಾಸಿಕ್ ಹಾಗೂ ಬುಲೆಟ್ ರಾಯಲ್ ಎನ್‌ಫೀಲ್ಡ್ ಕಂಪನಿಯ ಅತ್ಯಂತ ಜನಪ್ರಿಯ ಬೈಕ್‌ಗಳಾಗಿವೆ. ರಾಯಲ್ ಎನ್‌ಫೀಲ್ಡ್ ಬೈಕುಗಳು ಸಾಮಾನ್ಯ ಪ್ಯಾಸೆಂಜರ್ ಬೈಕುಗಳಿಗಿಂತ ಭಿನ್ನವಾಗಿರುವುದರಿಂದ ಈ ಬೈಕ್ ಹೊಂದುವುದು ಜನರಿಗೆ ಪ್ರತಿಷ್ಟೆಯ ಸಂಗತಿಯಾಗಿದೆ.

ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ರಾಯಲ್ ಎನ್‌ಫೀಲ್ಡ್‌ ಬೈಕ್‌ ಗಳನ್ನು ಮಾಡಿಫೈಗೊಳಿಸಿರುವ ಹಲವು ವೀಡಿಯೊಗಳನ್ನು ನೋಡಿದ್ದೇವೆ. ಈಗ ಹೊಸ ವೀಡಿಯೊವೊಂದು ಹೊರ ಬಂದಿದೆ. ಈ ವೀಡಿಯೊದಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ ಜನರ ಹೃದಯದೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಕಾಣಬಹುದು. ಈ ವೀಡಿಯೊವನ್ನು ಕೆನಬಿ ಲೈಫ್‌ಸ್ಟೈಲ್ ಎಂಬ ಯೂಟ್ಯೂಬ್ ಚಾನೆಲ್‌ ಶೇರ್ ಮಾಡಿದೆ.

ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ಈ ಚಾನೆಲ್ ನಡೆಸುತ್ತಿರುವ ಹುಡುಗ ತನ್ನ ತಂದೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ನೀಡುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದಾನೆ. ಬೈಕ್ ಪಡೆಯುವ ತಂದೆ ಎಷ್ಟು ಖುಷಿಯಾಗುತ್ತಾರೆ ಎಂಬುದನ್ನು ವೀಡಿಯೊದಲ್ಲಿ ಕಾಣಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ಈ ಬೈಕ್‌ ಅನ್ನು ಲಾಕ್‌ಡೌನ್‌ಗೆ ಮುಂಚೆ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಹಠಾತ್ತನೇ ಜಾರಿಯಾದ ಲಾಕ್‌ಡೌನ್ ಕಾರಣಕ್ಕೆ ಬೈಕಿನ ವಿತರಣೆಯನ್ನು ಮುಂದೂಡಲಾಗಿತ್ತು. ಈ ವೀಡಿಯೊದಲ್ಲಿ ಹುಡುಗನು ರಾಯಲ್ ಎನ್‌ಫೀಲ್ಡ್ ಶೋರೂಂಗೆ ಹೋಗಿ ಕ್ರೋಮ್ ಬ್ಲಾಕ್ ಬಣ್ಣದ ಕ್ಲಾಸಿಕ್ 350 ಬೈಕ್ ಅನ್ನು ಪಡೆಯುತ್ತಾನೆ.

ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ಶೋರೂಂನಿಂದ ಬೈಕ್ ಪಡೆದ ನಂತರ ಅದನ್ನು ತನ್ನ ಮನೆಗೆ ತರುತ್ತಾನೆ. ನಂತರ ತನ್ನ ತಂದೆಗೆ ಸರ್ ಪ್ರೈಸ್ ನೀಡಲು ಅವರನ್ನು ಹೊರಗೆ ಕರೆಯುತ್ತಾನೆ. ಬೈಕ್ ನೋಡಿದ ತಂದೆಯ ಸಂತೋಷವನ್ನು ಹೇಳತೀರದು. ಬೈಕ್ ನೋಡಿದ ನಂತರ ಈ ಬೈಕ್ ಅನ್ನು ತಮಗಾಗಿಯೇ ಖರೀದಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೈಕ್ ನೋಡಿ ಖುಷಿಯಾಗುವ ಹುಡುಗನ ತಂದೆ, ಹೊಸ ಬೈಕಿನ ಚಾಲನೆ ಮಾಡುತ್ತಾರೆ. ಲಾಕ್‌ಡೌನ್‌ ಕಾರಣದಿಂದಾಗಿ ಬೈಕಿನ ವಿತರಣೆ ವಿಳಂಬವಾಯಿತು ಎಂದು ಹುಡುಗ ತನ್ನ ತಂದೆಗೆ ಹೇಳುತ್ತಾನೆ.

ತಂದೆಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್‌ ಮಾಲೀಕ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ 346 ಸಿಸಿಯ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 20 ಬಿಹೆಚ್‌ಪಿ ಪವರ್ ಹಾಗೂ 28 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕ್ಲಾಸಿಕ್ 350 ಬೈಕಿನ ಹೊಸ ಮಾದರಿಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ನೊಂದಿಗೆ ಎರಡು ಡಿಸ್ಕ್ ಬ್ರೇಕ್ ನೀಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.55 ಲಕ್ಷಗಳಾಗಿದೆ.

Most Read Articles

Kannada
English summary
Youtube channel owner gifts Royal Enfield classic 350 bike to father. Read in Kannada.
Story first published: Thursday, August 13, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X