ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಯೂಟ್ಯೂಬ್‌ನಲ್ಲಿ ಚಾನೆಲ್ ನಡೆಸುತ್ತಿರುವ ವ್ಯಕ್ತಿಯೊಬ್ಬರು ಜರ್ಮನಿ ಮೂಲದ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಗೆ ಸೇರಿದ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಕಾರನ್ನು ಸುಟ್ಟು ಹಾಕಿ ಕಂಪನಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಮೈಕೆಲ್ ಲಿಟ್ವಿನ್ ಎಂಬುವವರು ಯೂಟ್ಯೂಬ್ ನಲ್ಲಿ 5 ಮಿಲಿಯನ್ ಫಾಲೋವರ್ ಗಳನ್ನು ಹೊಂದಿ, ತಮ್ಮ ದೇಶದಲ್ಲಿ ಜನಪ್ರಿಯರಾಗಿದ್ದಾರೆ. ಅವರು ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಕಾರನ್ನು ಖರೀದಿಸಿದ್ದರು. ಈ ಕಾರು ಆಗಾಗ್ಗೆ ರಿಪೇರಿಗೆ ಬರುತ್ತಿತ್ತು. ಈ ವಿಷಯವನ್ನು ಅವರು ತಾವು ಕಾರು ಖರೀದಿಸಿದ ಶೋರೂಂನವರ ಗಮನಕ್ಕೆ ತಂದಿದ್ದಾರೆ.

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಆದರೆ ಶೋರೂಂನವರು ಸರಿಯಾದ ಪರಿಹಾರವನ್ನು ನೀಡಿಲ್ಲ. ಹಲವು ಬಾರಿ ಶೋರೂಂನವರ ಗಮನಕ್ಕೆ ತಂದರೂ ಕಾರನ್ನು ಸರಿಪಡಿಸದೇ ಇರುವ ಕಾರಣಕ್ಕೆ ಲಿಟ್ವಿನ್ ಬೆಂಝ್ ಕಾರುಗಳ ಬಗ್ಗೆಯೇ ನಿರಾಶೆಗೊಂಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಕಾರಿನ ಸಮಸ್ಯೆ ಸರಿಯಾಗದ ಕಾರಣಕ್ಕೆ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ತೀರ್ಮಾನಕ್ಕೆ ಬಂದಿದ್ದಾರೆ. ಲಿಟ್ವಿನ್ ಈ ಕಾರನ್ನು ಯಾರೂ ಓಡಾಡದ ನಿರ್ಜನ ಪ್ರದೇಶಕ್ಕೆ ತೆಗೆದು ಕೊಂಡು ಹೋಗಿ ಕಾರಿನ ಹೊರ ಭಾಗಕ್ಕೆ ಹಾಗೂ ಒಳಭಾಗಕ್ಕೆ ಪೆಟ್ರೋಲ್ ಸುರಿಯುತ್ತಾರೆ.

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಅವರು ತಮ್ಮ ಸುರಕ್ಷತೆಗಾಗಿ ಕಾರಿನಿಂದ ಸ್ವಲ್ಪ ದೂರ ನಿಂತು ಪೆಟ್ರೋಲ್ ಸುರಿಯುತ್ತಾರೆ. ನಂತರ ಕಾರಿಗೆ ಹತಾಶೆಯಿಂದ ಬೆಂಕಿ ಇಡುತ್ತಾರೆ. ನೋಡ ನೋಡುತ್ತಿದ್ದಂತೆ ಕಾರು ಸಂಪೂರ್ಣವಾಗಿ ಸುಟ್ಟುಹೋಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಲಿಟ್ವಿನ್ ಈ ಘಟನೆಯನ್ನು ರೆಕಾರ್ಡ್ ಮಾಡಿ ವೀಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಸುಟ್ಟುಹಾಕಿದ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಕಾರಿನ ಬೆಲೆ ಭಾರತದ ರೂಪಾಯಿಗಳಲ್ಲಿ ಸುಮಾರು ರೂ.77 ಲಕ್ಷಗಳಾಗುತ್ತದೆ.

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಈ ವೀಡಿಯೊವನ್ನು ನೋಡುವವರಿಗೆ ಅವರು ಪ್ರಚಾರಕ್ಕಾಗಿ ಕಾರಿಗೆ ಬೆಂಕಿ ಇಡುತ್ತಿದ್ದಾರೆಂದು ಅನಿಸದೇ ಇರುವುದಿಲ್ಲ. ಇದರಲ್ಲಿ ಸ್ವಲ್ಪ ಪ್ರಮಾಣದ ಪ್ರಚಾರವನ್ನು ಬಯಸಿದ್ದರೂ, ಮರ್ಸಿಡಿಸ್‌ ಕಂಪನಿಯ ಮೇಲಿನ ಕೋಪ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ಈ ವೀಡಿಯೊವನ್ನು ಇದೂವರೆಗೆ 10 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದರಿಂದ ಬರುವ ಹಣದಿಂದ ಲಿಟ್ವಿನ್‌ ಹೊಸ ಕಾರನ್ನು ಖರೀದಿಸಬಹುದು. ಸುಟ್ಟುಹೋದ ಮರ್ಸಿಡಿಸ್-ಎಎಂಜಿ ಕಾರಿನಲ್ಲಿ 4.0-ಲೀಟರ್ ವಿ 8 ಬೈ-ಟರ್ಬೊ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 639 ಬಿಹೆಚ್‌ಪಿ ಪವರ್ ಹಾಗೂ 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಕಂಪನಿ ಮೇಲಿನ ಕೋಪಕ್ಕೆ ದುಬಾರಿ ಕಾರಿಗೆ ಬೆಂಕಿಯಿಟ್ಟ ಯೂಟ್ಯೂಬ್ ಚಾನೆಲ್ ಮಾಲೀಕ

ನಮ್ಮ ದೇಶದಲ್ಲಿ ಮಾರಾಟವಾಗುವ ಮರ್ಸಿಡಿಸ್ ಬೆಂಝ್ ಜಿಟಿ 63 ಎಸ್ 4 ಮ್ಯಾಟಿಕ್ ಪ್ಲಸ್ 4-ಡೋರ್ ಕೂಪೆ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.4 ಕೋಟಿಗಳಾಗಿದೆ.

Most Read Articles

Kannada
English summary
Youtuber burns his luxury car in protest against company. Read in Kannada.
Story first published: Wednesday, October 28, 2020, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X