ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಕಾನೂನು ಬಾಹಿರ. ಜೊತೆಗೆ ಭಾರೀ ಪ್ರಮಾಣದ ದಂಡವನ್ನು ಸಹ ವಿಧಿಸಲಾಗುತ್ತದೆ. ಲರ್ನರ್ ಲೈಸೆನ್ಸ್ (ಎಲ್‍ಎಲ್) ಪಡೆದ ಒಂದು ತಿಂಗಳ ನಂತರ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ತೆಗೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಈ ಮೊದಲು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಗಾಗಿ ಅರ್ಜಿ ಸಲ್ಲಿಸಿದ ನಂತರ 20 ರಿಂದ 30 ದಿನಗಳ ಕಾಲ ಕಾಯಬೇಕಾಗಿತ್ತು. ಈಗ ಅರ್ಜಿ ಸಲ್ಲಿಸಿದ ದಿನವೇ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಅನ್ನು ತೆಗೆದುಕೊಳ್ಳಬಹುದಾಗಿದೆ. ಈ ನಿಯಮವು ಇಂದಿನಿಂದ ಜಾರಿಗೆ ಬರಲಿದೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಈ ನಿಯಮವನ್ನು ಮುಂಬೈನಲ್ಲಿರುವ ಟಾರ್ಡಿಯೊ (ಐಲ್ಯಾಂಡ್ ಸಿಟಿ), ವಡಾಲಾ, ಅಂಧೇರಿಗಳಲ್ಲಿರುವ ಆರ್‍‍ಟಿ‍ಒಗಳಲ್ಲಿ ಜಾರಿಗೆ ತರಲಾಗಿದೆ. ಈ ವಿಷಯವನ್ನು ಮುಂಬೈನ ಆರ್‍‍ಟಿ‍ಒ ಅಧಿಕಾರಿಗಳು ಭಾನುವಾರ ಖಚಿತಪಡಿಸಿದ್ದಾರೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಆದರೆ ಲರ್ನರ್ ಲೈಸೆನ್ಸ್ ಟೆಸ್ಟ್ ಪಡೆಯಲು ಬಯಸುವವರು ಅರ್ಜಿ ಸಲ್ಲಿಸಿದ ಮರುದಿನ ಟೆಸ್ಟ್ ಗೆ ಹಾಜರಾಗಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಆರ್‍‍ಟಿ‍ಒ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಆರ್‍‍ಟಿ‍ಒಗಳ ಜೊತೆಗೆ ಬೊರಿವಿಲಿ ಆರ್‍‍ಟಿ‍ಒ ಅಧಿಕಾರಿಗಳು ಸಹ ಇದೇ ನಿಯಮವನ್ನು ಶೀಘ್ರವೇ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಈ ಕುರಿತು ಮಾತನಾಡಿದ ಟಾರ್ಡಿಯೊ ಆರ್‍‍ಟಿ‍ಒ ಅಧಿಕಾರಿ ಸುಭಾಷ್ ಪೆದಂಕರ್‍‍ರವರು, ಏಜೆಂಟ್‍‍ಗಳು ಟೆಸ್ಟ್ ಪಡೆಯಲು ಸ್ಲಾಟ್‍‍ಗಳನ್ನು ಬ್ಲಾಕ್ ಮಾಡುತ್ತಿದ್ದರು. ನಾವು ಹೊಸ ನಿಯಮದಿಂದಾಗಿ ಈ ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಈ ಮೊದಲು ಪ್ರತಿದಿನ 100 ಜನ ಟೆಸ್ಟ್ ತೆಗೆದುಕೊಳ್ಳುತ್ತಿದ್ದರು. ನಾವು ಇದನ್ನು 200 ಜನರಿಗೆ ಹೆಚ್ಚಿಸಿದ್ದೇವೆ. ಇದರಿಂದಾಗಿ ಹೆಚ್ಚು ಜನರು ಟೆಸ್ಟ್ ತೆಗೆದುಕೊಳ್ಳಲು ಅನುಕೂಲವಾಗಲಿದೆ. ನಮ್ಮ ಆರ್‍‍ಟಿ‍ಒದಲ್ಲಿ ಈ ಮೊದಲು ಅರ್ಜಿ ಸಲ್ಲಿಸಿ 20ರಿಂದ 30 ದಿನಗಳವರೆಗೆ ಕಾಯಬೇಕಾಗಿತ್ತು.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ನಂತರ ಇದನ್ನು ಏಳು ದಿನಗಳಿಗೆ ಇಳಿಸಲಾಗಿತ್ತು. ಈಗ ಅರ್ಜಿ ಸಲ್ಲಿಸಿದ ದಿನವೇ ಟೆಸ್ಟ್ ತೆಗೆದುಕೊಳ್ಳಬಹುದು. ಮುಂಜಾನೆ ಅರ್ಜಿ ಸಲ್ಲಿಸಿದರೆ ಅದೇ ದಿನ ಟೆಸ್ಟ್ ತೆಗೆದುಕೊಳ್ಳಬಹುದು. ಮಧ್ಯಾಹ್ನ ಅರ್ಜಿ ಸಲ್ಲಿಸಿದರೆ ಮರುದಿನ ಟೆಸ್ಟ್ ತೆಗೆದುಕೊಳ್ಳಬಹುದು ಎಂದು ಹೇಳಿದರು.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಲೈಸೆನ್ಸ್ ಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ಹೊಸ ಕಚೇರಿಗೆ ವರ್ಗಾಯಿಸಲಾಗುತ್ತಿದೆ. ಹಳೆಯ ಕಚೇರಿಯಲ್ಲಿ ಕೇವಲ 12 ಕಂಪ್ಯೂಟರ್‍‍ಗಳಿದ್ದವು. ಹೊಸ ಕಚೇರಿಯಲ್ಲಿ ಹೆಚ್ಚು ಜನರು ಟೆಸ್ಟ್ ತೆಗೆದುಕೊಳ್ಳಲು ಅನುಕೂಲವಾಗುವಂತೆ 25 ಕಂಪ್ಯೂಟರ್‍‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಲರ್ನರ್ ಲೈಸೆನ್ಸ್ ಟೆಸ್ಟ್ 1.30ರ ವೇಳೆಗೆ ಮುಗಿಯಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ವಡಾಲಾದ ಆರ್‍‍ಟಿ‍ಒ ಅಧಿಕಾರಿ ಪುರುಷೋತ್ತಮ್ ನಿಕಂರವರು ಮಾತನಾಡಿ, ಆನ್‍‍ಲೈನ್ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿರುವ ಕಾರಣಕ್ಕೆ ಹೆಚ್ಚು ಜನರು ಟೆಸ್ಟ್ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದಾಗಿ ಕಾಯುವ ಅವಧಿಯು ಇಲ್ಲವಾಗಿದೆ ಎಂದು ಹೇಳಿದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಆನ್‍‍ಲೈನ್ ಟೆಸ್ಟ್ ಮುಗಿದ ಕೆಲವೇ ಕ್ಷಣಗಳಲ್ಲಿ ಲರ್ನರ್ ಲೈಸೆನ್ಸ್ ಕೈ ಸೇರಲಿದೆ. ಲೈಸೆನ್ಸ್ ಗಳನ್ನು ವೇಗವಾಗಿ ಅರ್ಜಿದಾರರಿಗೆ ತಲುಪಿಸುವಂತೆ ಆರ್‍‍ಟಿ‍ಒ ಅಂಚೆ ಇಲಾಖೆಯೆ ಸಿಬ್ಬಂದಿಯೊಂದಿಗೂ ಮಾತುಕತೆ ನಡೆಸಿದೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಇದುವರೆಗೂ ಮುಂಬೈ ನಗರದಲ್ಲಿ 87 ಲಕ್ಷ ಡ್ರೈವಿಂಗ್ ಲೈಸೆನ್ಸ್ ಗಳನ್ನು ವಿತರಿಸಲಾಗಿದೆ. ಮೊದಲು ಪ್ರತಿದಿನ 200 ಜನರು ಟೆಸ್ಟ್ ಗಾಗಿ ಬರುತ್ತಿದ್ದರು. ಈಗ 300 ಜನರು ಬರುತ್ತಿರುವುದಾಗಿ ಅಂಧೇರಿಯ ಆರ್‍‍ಟಿ‍ಒ ಅಧಿಕಾರಿ ಅಭಯ್ ದೇಶಪಾಂಡೆರವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಇದರ ಜೊತೆಗೆ ಟಾರ್ಡಿಯೊ ಆರ್‍‍ಟಿ‍ಒ ಫಿಟ್‍‍ನೆಸ್ ಪರೀಕ್ಷಾ ವಿಧಾನವನ್ನು ಸಹ ವೇಗಗೊಳಿಸಿದೆ. ಅರ್ಜಿ ಸಲ್ಲಿಸಿದ ದಿನವೇ ಫಿಟ್‍‍ನೆಸ್ ಸರ್ಟಿಫಿಕೇಟ್ ನೀಡಲಾಗುವುದು. ಅದೇ ದಿನ ಸಾಧ್ಯವಾಗದಿದ್ದರೆ ಮರುದಿನ ಖಚಿತವಾಗಿ ನೀಡಲಾಗುವುದೆಂದು ಆರ್‍‍ಟಿಒ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

ಬಾಂಬೆ ಹೈಕೋರ್ಟ್ ಆದೇಶದನ್ವಯ ಟಾರ್ಡಿಯೊ ಆರ್‍‍ಟಿ‍ಒ ಕಚೇರಿಯು 250 ಮೀಟರ್‍‍ನ ಬ್ರೇಕ್ ಟೆಸ್ಟ್ ಟ್ರಾಕ್ ಅನ್ನು ಹೊಸದಾಗಿ ಆರಂಭಿಸಿದೆ. ಈ ಟ್ರಾಕ್‍‍ನಲ್ಲಿ ಟ್ಯಾಕ್ಸಿ, ಕಮರ್ಷಿಯಲ್ ಕ್ಯಾಬ್, ಸ್ಕೂಲ್ ಬಸ್ ಹಾಗೂ ಟೆಂಪೋಗಳ ಫಿಟ್‍‍ನೆಸ್ ಪರೀಕ್ಷೆಯನ್ನು ಆರಂಭಿಸಲಾಗಿದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ಓಡಿಸಲು ಲೈಸೆನ್ಸ್ ಹೊಂದಿರುವವರು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಬಂದಾಗ, ಹೊಸ ಚಾಲನಾ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಹೌದು ಈ ರೀತಿಯ ಪರೀಕ್ಷೆಯನ್ನು ನಾಸಿಕ್‍‍ನಲ್ಲಿ ಶುರು ಮಾಡಲಾಗಿದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಈ ಪರೀಕ್ಷೆಯು ಚಾಲಕರ ಚಾಲನಾ ಶೈಲಿ ಹಾಗೂ ಅದರಿಂದ ಇಂಧನ ಬಳಕೆಯ ಮೇಲೆ ಉಂಟಾಗುವ ಪರಿಣಾಮ ತಿಳಿದು ಬರಲಿದೆ. ಈ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸಿದರೆ, ಅವರ ಚಾಲನಾ ಪರವಾನಗಿಯನ್ನು ನವೀಕರಿಸುವುದಿಲ್ಲ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಅಂತಹವರು ಪುನಃ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ನಾಸಿಕ್‍‍ನ ಆರ್‍‍ಟಿ‍ಒದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಪರೀಕ್ಷೆಯನ್ನು ಈ ವರ್ಷದ ಏಪ್ರಿಲ್ 1ರಿಂದ ಆರಂಭಿಸಲಾಗಿದೆ. ಈ ಪರೀಕ್ಷೆಯನ್ನು ಕೇವಲ ಟ್ರಕ್ ಹಾಗೂ ಬಸ್‍‍ಗಳ ಚಾಲಕರಿಗೆ ಮಾತ್ರ ನಡೆಸಲಾಗುತ್ತದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಈ ವಾಹನಗಳ ಚಾಲಕರು ಬೇರೆ ವಾಹನಗಳ ಚಾಲಕರಿಗೆ ಹೋಲಿಸಿದರೆ ಹೆಚ್ಚು ಬೇಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಾರೆ. ನಾಸಿಕ್‍‍ನಲ್ಲಿ ಭಾರೀ ವಾಹನಗಳ ಚಾಲನಾ ತರಬೇತಿಗಾಗಿ ನಾಲ್ಕು ಚಾಲನಾ ಶಾಲೆಗಳಿವೆ. ಈ ಚಾಲನಾ ಶಾಲೆಗಳಿಗೆ ಇಂಧನ ಬಳಕೆಯ ಉಪಕರಣಗಳನ್ನು ಖರೀದಿಸಲು ಸೂಚಿಸಲಾಗಿದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಇದರಿಂದಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸುವ ಭಾರೀ ವಾಹನಗಳ ಚಾಲಕರು ಚಾಲನಾ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಗಲಿದೆ. ಇಂಧನ ಬಳಕೆಯ ಉಪಕರಣಗಳು, ಎಷ್ಟು ಪ್ರಮಾಣದಲ್ಲಿ ಇಂಧನವನ್ನು ಬಳಸಲಾಗಿದೆ ಎಂಬುದನ್ನು ಮುದ್ರಿಸಿ ನೀಡುತ್ತವೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಚಾಲಕನು ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ಬಳಸಿದ್ದರೆ, ಅವನು ಈ ಪರೀಕ್ಷೆಯಲ್ಲಿ ವಿಫಲನಾಗುತ್ತಾನೆ. ಮತ್ತೆ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಂಧನ ಬಳಕೆಯ ಮುದ್ರಿತ ವಿವರವನ್ನು ಆರ್‌ಟಿಒ ಅಧಿಕಾರಿಗಳಿಗೆ ನೀಡಲಾಗುತ್ತದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ನಂತರ ಅಧಿಕಾರಿಗಳು ಚಾಲನಾ ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸುತ್ತಾರೆ. ಈ ಪರೀಕ್ಷೆಗಾಗಿ 5 ಕಿ.ಮೀ ಉದ್ದದ ರಸ್ತೆಯನ್ನು ಬಳಸಲಾಗುತ್ತದೆ. ಈ ರಸ್ತೆಯು ಕೆಲವು ಕಡೆ ಸಮನಾಗಿದ್ದರೆ, ಕೆಲವು ಕಡೆ ತಿರುವುಗಳನ್ನು, ಕೆಲವು ಕಡೆ ಇಳಿಜಾರುಗಳನ್ನು ಹೊಂದಿರುತ್ತದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯ

ಅಧಿಕಾರಿಗಳ ಪ್ರಕಾರ, ಭಾರೀ ವಾಹನಗಳು ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸುತ್ತವೆ. ಆದ ಕಾರಣ ಭಾರೀ ವಾಹನಗಳ ಚಾಲಕರು ತಮ್ಮ ಚಾಲನಾ ಶೈಲಿಯನ್ನು ಸುಧಾರಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಯೋಜನೆಯಾಗಿದೆ. ಇದರಿಂದ ಇಂಧನದ ಉಳಿತಾಯವಾಗಲಿದೆ. ಪರಿಸರ ಮಾಲಿನ್ಯವೂ ಸಹ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Most Read Articles

Kannada
English summary
Zero waiting time for licence tests - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X