ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಭಾರತದಲ್ಲಿ ದುಬಾರಿ ಬೆಲೆಯ ಆಮದು ಸುಂಕದ ಹೊರತಾಗಿಯೂ ಐಷಾರಾಮಿ ಕಾರುಗಳ ಮಾರಾಟವು ಸಾಕಷ್ಟು ಮುಂಚೂಣಿ ಸಾಧಿಸುತ್ತಿದ್ದು, ಪ್ರಮುಖ ಐಷಾರಾಮಿ ಕಾರು ಕಂಪನಿಗಳು ಇತ್ತೀಚೆಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿವೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಜೊತೆ ಸೂಪರ್ ಕಾರುಗಳ ಮಾರಾಟ ಪ್ರಮಾಣವು ಕೂಡಾ ಸಾಕಷ್ಟು ಸುಧಾರಿಸಿದ್ದು, ಇತ್ತೀಚೆಗೆ ಹಲವಾರು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಹೆಚ್ಚಿನ ಮಟ್ಟದ ಸೂಪರ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ದೇಶದ ಫುಡ್‌ ಡೆಲಿವರಿ ದೈತ್ಯ ಜೊಮ್ಯಾಟೊದ ಸಂಸ್ಥಾಪಕ ದೀಪಿಂದರ್‌ ಗೋಯಲ್‌ ಕೂಡಾ ಇದೀಗ ಬಹುಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಎಸ್‌ಯುವಿ ಖರೀದಿಸಿದ್ದಾರೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಪ್ರಮುಖ ಪ್ರತಿಸ್ಪರ್ಧಿ ಕಂಪನಿಗಳಿಂತಲೂ ಹೆಚ್ಚಿನ ಮಟ್ಟದ ಲಾಭಾಂಶ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜೊಮ್ಯಾಟೊ ಸಿಇಓ ದೀಪಿಂದರ್‌ ಗೋಯಲ್‌ ಇದೀಗ ಬಹುಕೋಟಿ ಮೌಲ್ಯದ ಉರುಸ್ ಎಸ್‌ಯುವಿಯ ಮಾಲೀಕರಾಗಿದ್ದಾರೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಕಳೆದ ವರ್ಷ ತಮ್ಮ ಕಂಪನಿಯ ಲಾಭಾಂಶದಲ್ಲಿ ಬರೋಬ್ಬರಿ ರೂ. 700 ಕೋಟಿಯಷ್ಟು ದೇಣಿಗೆ ಸಲ್ಲಿಸಿದ್ದ ದೀಪಿಂದರ್‌ ಗೋಯಲ್‌ ಭಾರೀ ಮೆಚ್ಚುಗೆಗೆ ಕಾರಣರಾಗಿದ್ದು, ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಮಾಲೀಕತ್ವ ಹೊಂದಿರುವ ದೀಪಿಂದರ್‌ ಇದೀಗ ಮತ್ತೊಂದು ಐಷಾರಾಮಿ ಎಸ್‌ಯುವಿ ಮಾಲೀಕರಾಗಿದ್ದಾರೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ದೀಪಿಂದರ್‌ ಗೋಯಲ್‌ ಖರೀದಿಸಿರುವ ಲ್ಯಾಂಬೋರ್ಗಿನಿ ಉರುಸ್ ಐಷಾರಾಮಿ ಎಸ್‌ಯುವಿಯು ಆನ್ ರೋಡ್ ಪ್ರಕಾರ ರೂ. 3.66 ಕೋಟಿ ಬೆಲೆ ಹೊಂದಿದ್ದು, ಸ್ಟ್ಯಾಂಡರ್ಡ್ ಮತ್ತು ಪರ್ಲ್ ಕ್ಯಾಪ್ಸಲ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಐಷಾರಾಮಿ ಎಸ್‌ಯುವಿ ಕಾರು ಖರೀದಿದಾರರಲ್ಲಿ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಉರುಸ್ ಕಾರು ಮಾದರಿಯು ದುಬಾರಿ ಬೆಲೆ ನಡುವೆಯೂ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, 2018ರಲ್ಲಿ ಬಿಡುಗಡೆಯಾದ ಹೊಸ ಕಾರು ಇದುವರೆಗೆ ಭಾರತದಲ್ಲಿ 200 ಯುನಿಟ್‌ಗಿಂತಲೂ ಹೆಚ್ಚು ಮಾರಾಟಗೊಂಡಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

2018ರ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಉರುಸ್ ಎಸ್‌ಯುವಿ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಲ್ಯಾಂಬೋರ್ಗಿನಿ ಕಂಪನಿಯು ಹೊಸ ಕಾರಿನ ಉತ್ಪಾದನಾ ಪ್ರಮಾಣದಲ್ಲಿ ಹಲವು ಮೈಲಿಗಲ್ಲು ಸಾಧಿಸಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಉರುಸ್ ಕಾರು ಇದುವರೆಗೆ 20 ಸಾವಿಕ್ಕೂ ಹೆಚ್ಚು ಯುನಿಟ್‌ಗಳು ವಿಶ್ವಾದ್ಯಂತ ಮಾರಾಟಗೊಂಡಿದ್ದು, ಲಂಬೋರ್ಗಿನಿ ಕಂಪನಿಗೆ ಹೊಸ ಕಾರು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆಯನ್ನು ಹೊಂದಿರುವ ಉರುಸ್ ಐಷಾರಾಮಿ ಎಸ್‌ಯುವಿ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಲ್ಯಾಂಬೋರ್ಗಿನಿ ನಿರ್ಮಾಣದ ಮೊದಲ ಎಸ್‌ಯುವಿ ಕಾರು ಮಾದರಿ ಇದಾಗಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಸೂಪರ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಲ್ಯಾಂಬೋರ್ಗಿನಿ ಕಂಪನಿಯು ಮೊದಲ ಬಾರಿಗೆ ಉರುಸ್ ಮೂಲಕ ಐಷಾರಾಮಿ ಎಸ್‌ಯುವಿ ವಿಭಾಗಕ್ಕೆ ಹೆಜ್ಜೆಯಿರಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಈ ಮೂಲಕ ಪ್ರತಿ ಗಂಟೆಗೆ 305 ಕಿ.ಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಜೊತಗೆ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಹೊಂದಿರುವ ಹೊಸ ಕಾರು ಲೈಫ್‌ಸ್ಟೈಲ್ ಜೊತೆಗೆ ಅಡ್ವೆಂಚರ್ ಡ್ರೈವ್‌ನಲ್ಲೂ ಮುಂಚೂಣಿ ಹೊಂದಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಸ್ಟ್ರೀಟ್, ಟ್ರ್ಯಾಕ್ ಮತ್ತು ಆಫ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತಹ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇದು ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಸೂಪರ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಲ್ಯಾಂಬೋರ್ಗಿನಿ ಕಂಪನಿಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉರುಸ್ ಮೂಲಕ ಕಂಪನಿಯು ಹೊಸ ದಾಖಲೆಗೆ ಕಾರಣವಾಗಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರು ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 8-ಏರ್‌ಬ್ಯಾಗ್‌ಗಳು, ಅತ್ಯಾಧುನಿಕ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ 85-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯ ಹೊಂದಿದೆ.

ಬಹುಕೋಟಿ ಮೌಲ್ಯದ ಐಷಾರಾಮಿ ಎಸ್‌ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ

ಸದ್ಯ ಹೊಸ ಕಾರು ಯುಎಸ್ಎ ಮಾರುಕಟ್ಟೆಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆಯನ್ನು ಯುರೋಪ್ ಮತ್ತು ಏಷಿಯನ್ ಮಾರುಕಟ್ಟೆಗಳಿಂದ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Zomato founder deepinder goyal s lamborghini urus collection
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X