ವಿಶ್ವದ ಮೊದಲ ಹೈಬ್ರೀಡ್ ಬೈಕ್ ಗೆ ಚಾಲನೆ

By Super

Eko Vehicle
ಬೆಂಗಳೂರು, ಡಿ.17: ನಗರದ ಇಕೊ ವೆಹಿಕಲ್ಸ್ ಕಂಪೆನಿ ವಿನ್ಯಾಸದ ಹೈಬ್ರೀಡ್ ಬೈಕುಗಳಿಗೆ ಬುಧವಾರ ಚಾಲನೆ ನೀಡಲಾಯಿತು. ಇಕೊ ಕಂಪೆನಿ ನಿರ್ಮಾಣದ ಈ ಬೈಕ್ ಗಳಿಗೆ ವಿಶ್ವದ ಪ್ರಥಮ ಹೈಬ್ರೀಡ್ ಬೈಕ್ ಹಾಗೂ ಸ್ಕೂಟರ್ ಎಂಬ ಮಾನ್ಯತೆ ಸಿಕ್ಕಿದೆ.

ಅಮೆರಿಕ ಹಾಗೂ ಯುಕೆ ಮೂಲದ ಕಂಪೆನಿಗಳ ಸಹಯೋಗದೊಂದಿಗೆ ET-120 ಹಾಗೂ ಸ್ಟ್ರೈಕ್ ಎಂಬ ಹೈಬ್ರೀಡ್ ದ್ವಿಚಕ್ರವಾಹನಗಳನ್ನು ಬೆಂಗಳೂರಿನ ಇಕೊ ವೆಹಿಕಲ್ಸ್ ಕಂಪೆನಿ ನಿರ್ಮಿಸಿದೆ.ಪೆಟ್ರೋಲ್ ಹಾಗೂ ಬ್ಯಾಟರಿ ಚಾಲಿತ ಈ ವಾಹನಗಳು, ಪ್ರತಿ ಲೀ ಪೆಟ್ರೋಲ್ ಗೆ ಅಧಿಕ ಮೈಲೇಜ್ ನೀಡಲಿದೆ ಎಂದು ಸಂಸ್ಥೆ ಹೇಳಿದೆ. 'ನಾವು ಹೈಬ್ರೀಡ್ ತಂತ್ರಜ್ಞಾನವನ್ನು ಬಳಸಿದ್ದೇವೆ. ಎಲೆಕ್ಟ್ರಾನಿಕ್ ಮೋಟರ್ ನೊಂದಿಗೆ ಗ್ಯಾಸೊಲಿನ್ ಅಥವಾ ಪೆಟ್ರೊಲ್ ಮೋಟರ್ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ' ಎಂದು ಇಕೊ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷ ಅನಿಲ್ ಅನಂತಕೃಷ್ಣ ಹೇಳಿದರು.

ಇಟಿ-120 ಹೈಬ್ರಿಡ್ ವಾಹನದ ಸ್ಥೂಲ ಪರಿಚಯ:
* ಅಮೆರಿಕದ ಎಮರ್ಜಿಂಗ್ ವೆಹಿಕಲ್ ಟೆಕ್ನಾಲಜೀಸ್ ಕಂಪೆನಿ ಸಹಭಾಗಿತ್ವದಲ್ಲಿ ಇಕೋ ಕಂಪೆನಿಯಿಂದ ನಿರ್ಮಾಣ.
* ಎಲೆಕ್ಟ್ರಿಕಲ್ ಹಾಗೂ ಪೆಟ್ರೋಲ್ ಬಳಸಿ ಚಲಿಸುವ ದ್ವಿಚಕ್ರ ವಾಹನ.
* 120ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿದ್ದು. ಪ್ರತಿ ಲೀಟರ್ ಗೆ 120 ಕಿ.ಮೀ ನೀಡಲಿದೆ.
* ಮಾರ್ಚ್ ವೇಳೆಗೆ ಗ್ರಾಹಕರಿಗೆ ಲಭ್ಯ. ಬೆಲೆ ಸುಮಾರು 40 ಸಾವಿರ ರು.

ಸ್ಟ್ರೈಕ್ ವಾಹನ:
ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ. ಒಂದು ಬಾರಿ ಬ್ಯಾಟರಿ ಚಾರ್ಚ್ ಆದ ನಂತರ 50-80 ಕಿ.ಮೀ ಕ್ರಮಿಸಬಹುದು. ಬೆಲೆ ಸುಮಾರು 22 ಸಾವಿರ ರು.

(ಏಜೆನ್ಸೀಸ್)

Most Read Articles

Kannada
Story first published: Monday, June 18, 2012, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X