ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್, ಟಿವಿಎಸ್

Bajaj, TVS sales race ahead in July
ಚೆನ್ನೈ/ ಪುಣೆ, ಆ.3:ದೇಶದ ಎರಡನೇ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಬಜಾಜ್ ಆಟೋ ದ ಜುಲೈ ತಿಂಗಳ ದ್ವಿ ಚಕ್ರ ವಾಹನ ಮಾರಾಟದಲ್ಲಿ ಶೇ.66 ಹೆಚ್ಚಳ ದಾಖಲಾಗಿದೆ.

ಕಂಪೆನಿ ತನ್ನ ಜನಪ್ರಿಯ ಡಿಸ್ಕವರ್ ಹಾಗೂ ಪಲ್ಸರ್ ಮಾದರಿಯ 2,79,781 ಬೈಕ್ ಗಳನ್ನು ಮಾರಾಟ ಮಾಡಿದ್ದು, ಕಳೆದ 2009 ರ ಜುಲೈ ನಲ್ಲಿ 1,68,163 ಬೈಕ್ ಗಳನ್ನು ಮಾರಾಟ ಮಾಡಿತ್ತು.

ಉತ್ಪಾದನಾ ಸಾಮರ್ಥ್ಯದ ಕೊರತೆಯಿಂದ ದ್ವಿಚಕ್ರ ಹಾಗೂ ತ್ರಿ ಚಕ್ರ ವಾಹನಗಳ ಮಾರಾಟಕ್ಕೆ ಧಕ್ಕೆಯಾಗಿದೆ ಎಂದು ಬಜಾಜ್ ತಿಳಿಸಿದ್ದು, ಕಂಪೆನಿ 2009ರ ಜುಲೈನಲ್ಲಿ 24,104 ಆಟೋಗಳನ್ನು ಮಾರಾಟ ಮಾಡಿದ್ದು ಕಳೆದ ತಿಂಗಳು 38,634 ಆಟೋಗಳನ್ನು ಮಾರಾಟ ಮಾಡಿದೆ.

ಬಜಾಜ್ ನ ವಾಹನಗಳ ರಫ್ತಿನಲ್ಲೂ ಶೇ.56 ಏರಿಕೆ ದಾಖಲಾಗಿದ್ದು ಕಂಪೆನಿ ಕಳೆದ ತಿಂಗಳು 1,06,794 ವಾಹನಗಳನ್ನು ರಫ್ತು ಮಾಡಿದ್ದು 2009 ರ ಜುಲೈನಲ್ಲಿ 68,585 ವಾಹನಗಳನ್ನು ರಫ್ತು ಮಾಡಿತ್ತು.

ದೇಶದ ಮೂರನೇ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಚೆನ್ನೈ ಮೂಲದ ಟಿವಿಎಸ್ ಮೋಟರ್ಸ್ ಮಾರಾಟದಲ್ಲಿ ಹೆಚ್ಚಳ ದಾಖಲಿಸಿದ್ದು, ಜುಲೈ ತಿಂಗಳ ಮೋಟಾರ್ ಸೈಕಲ್ ಮಾರಾಟದಲ್ಲಿ ಶೇ.42 ಹೆಚ್ಚಳ ದಾಖಲಿಸಿದೆ. ಕಂಪೆನಿ ಜುಲೈನಲ್ಲಿ 1,43,039 ವಾಹನಗಳನ್ನು ಮಾರಾಟ ಮಾಡಿದ್ದು, 2009ರ ಜುಲೈನಲ್ಲಿ 1,07,883 ವಾಹನಗಳನ್ನು ಮಾರಾಟ ಮಾಡಿತ್ತು.

ಕಂಪೆನಿ ಜುಲೈ ನಲ್ಲಿ 61,698 ಬೈಕ್ ಗಳನ್ನು ಮಾರಾಟ ಮಾಡಿದ್ದರೆ 2009 ರ ಜುಲೈನಲ್ಲಿ 42,998 ಬೈಕ್ ಗಳನ್ನು ಮಾರಾಟ ಮಾಡಿತ್ತು. ಕಂಪೆನಿಯ ಸ್ಕೂಟರ್ ಗಳ ಮಾರಾಟದಲ್ಲೂ ಶೇ.46 ಏರಿಕೆ ದಾಖಲಾಗಿದ್ದು, ಜುಲೈನಲ್ಲಿ 40,357 ಸ್ಕೂಟರ್ ಗಳನ್ನು ಮಾರಾಟ ಮಾಡಲಾಗಿದ್ದರೆ ಕಳೆದ 2009ರ ಜುಲೈನಲ್ಲಿ 27,673 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ.

ಉತ್ಪಾದನಾ ಸಾಮರ್ಥ್ಯದ ಕೊರತೆಯಿಂದ ದ್ವಿ ಹಾಗೂ ತ್ರಿ ಚಕ್ರ ವಾಹನಗಳ ಮಾರಾಟಕ್ಕೆ ಧಕ್ಕೆಯಾಗಿದೆ ಎಂದು ಬಜಾಜ್ ತಿಳಿಸಿದ್ದು, ಕಂಪೆನಿ 2009 ರ ಜುಲೈನಲ್ಲಿ 24,104 ಆಟೋಗಳನ್ನು ಮಾರಾಟ ಮಾಡಿದ್ದು ಕಳೆದ ತಿಂಗಳು 38,634 ಆಟೋಗಳನ್ನು ಮಾರಾಟ ಮಾಡಿದೆ. ಟಿವಿಎಸ್ ನ ರಫ್ತಿನಲ್ಲೂ ಶೇ 54 ರಷ್ಟು ಏರಿಕೆ ದಾಖಲಾಗಿದೆ.

Most Read Articles

Kannada
Story first published: Tuesday, August 3, 2010, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X