ವರ್ಷಾಂತ್ಯಕ್ಕೆ ಮಹೀಂದ್ರಾ ಬೈಕ್ ರಸ್ತೆಗಿಳಿಯಲಿದೆ

Mahindra set to rule Motor Cycle market
ನವದೆಹಲಿ, ಆ.5: ದೇಶದ ಪ್ರಮುಖ ಟ್ರಾಕ್ಟರ್ ಮತ್ತು ಉಪಯುಕ್ತ ವಾಹನ ತಯಾರಿಕಾ ಕಂಪೆನಿ ಮಹೀಂದ್ರಾ ಅಂಡ್ ಮಹೀಂದ್ರಾ ಇದೀಗ ಈ ವರ್ಷಾಂತ್ಯದೊಳಗೆ ಮೋಟಾರ್ ಸೈಕಲ್ ಗಳನ್ನು ತಯಾರಿಸಿ ರಸ್ತೆಗಿಳಿಸಲಿದೆ.

ಕಂಪೆನಿ ಕಳೆದ 10 ತಿಂಗಳ ಅವಧಿಯಲ್ಲಿ 1,00,000 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ 18 ತಿಂಗಳಿನಲ್ಲಿ 1 ಲಕ್ಷ ಸ್ಕೂಟರ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದ್ದು, 10 ತಿಂಗಳಿನಲ್ಲೇ ಗುರಿ ಸಾಧಿಸಿರುವುದರಿಂದ ಸ್ಫೂರ್ತಿಗೊಂಡು ಮೋಟಾರ್ ಸೈಕಲ್ ತಯಾರಿಕೆಗೆ ಮುಂದಾಗಿದೆ.

ಇಟಲಿ ವಿನ್ಯಾಸದ ಮೆರಗು: ಸ್ಕೂಟರ್ ಗಳನ್ನು ತಯಾರಿಸುತ್ತಿರುವ ಘಟಕದ ಜತೆಯಲ್ಲೇ ಬೈಕ್ ಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ ಎಂದು ಕಂಪೆನಿಯ ದ್ವಿ ಚಕ್ರ ವಾಹನ ವಿಭಾಗದ ಅಧ್ಯಕ್ಷ ಅನೂಪ್ ಮಾಥುರ್ ಹೇಳಿದರು. ಕಂಪೆನಿ 2008 ರಲ್ಲಿ ಇಟಲಿ ಮೂಲದ ಎಂಜಿನ್ಸ್ ಇಂಜಿನಿಯರಿಂಗ್ ಕಂಪೆನಿಯನ್ನು ಖರೀದಿಸಿದ್ದು ಇಲ್ಲಿ ಮೋಟಾರ್ ಸೈಕಲ್ ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಕಂಪೆನಿಯ ಪಿತಂಪುರದಲ್ಲಿರುವ ಸ್ಕೂಟರ್ ತಯಾರಿಕಾ ಘಟಕ ವಾರ್ಷಿಕ 5 ರಿಂದ 6 ಲಕ್ಷ ಸ್ಕೂಟರ್ ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಡಿಸೆಂಬರ್ ವೇಳೆಗೆ ಕಂಪೆನಿ ಸ್ಕೂಟರ್ ಗಳ ಮಾರಾಟವನ್ನು ಎರಡು ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಮಾಥುರ್ ಹೇಳಿದರು. ಕಂಪೆನಿ ಜುಲೈ ತಿಂಗಳ ಸ್ಕೂಟರ್ ಮಾರಾಟದಲ್ಲಿ ಶೇ.329 ಏರಿಕೆ ದಾಖಲಿಸಿದೆ.

ಗ್ರಾಮೀಣ ಭಾಗದಲ್ಲಿ ಅಚ್ಚುಮೆಚ್ಚು: ಸ್ಕೂಟರ್ ತಯಾರಿಕೆಗೂ ಮುನ್ನ ಮಹೀಂದ್ರಾ ಕೈನೆಟಿಕ್ ಮೋಟಾರ್ ನಲ್ಲಿ ಶೇ.11 ಪಾಲನ್ನು ಖರೀದಿಸಿತ್ತು. ಗ್ರಾಮೀಣ ಭಾಗದಲ್ಲಿ ಬೈಕ್ ಗಳಿಗೆ ಉತ್ತಮ ಮಾರುಕಟ್ಟೆ ಇದೆ ಎಂದ ಮಾಥುರ್ ಅವರು, ಟೈರ್ 2 ಹಾಗೂ 3 ನಗರಗಳಲ್ಲಿ ಮಾರಾಟಗಾರರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಕಂಪೆನಿ ಈಗ ದೇಶಾದ್ಯಂತ 350 ಮಾರಾಟಗಾರರನ್ನು ಹೊಂದಿದ್ದು, ಮುಂದಿನ ತಿಂಗಳುಗಳಲ್ಲಿ ಇನ್ನೂ 50 ಮಾರಾಟಗಾರರನ್ನು ನೇಮಕ ಮಾಡಿಕೊಳ್ಳಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ದ್ವಿ ಚಕ್ರ ವಾಹನಗಳ ಬ್ರಾಂಡ್ ನ್ನು ಸೃಷ್ಟಿಸಲು ಕಂಪೆನಿ ತಯಾರಿ ನಡೆಸಿದೆ ಎಂದು ಮಾಥುರ್ ಹೇಳಿದರು.

ಕಂಪೆನಿ ಈಗ ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾಕ್ಕೆ ದ್ವಿ ಚಕ್ರ ವಾಹನಗಳನ್ನು ರಫ್ತು ಮಾಡುತ್ತಿದ್ದು ಮುಂದಿನ ತಿಂಗಳುಗಳಲ್ಲಿ ಕಾಂಬೋಡಿಯಾ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಗೆ ರಫ್ತು ಮಾಡಲಿದೆ ಎಂದು ಮಾಥುರ್ ಹೇಳಿದರು. ಹೆಚ್ಚಿನ ಮಾಹಿತಿಗೆ ಮಹೀಂದ್ರಾ ದ್ವಿಚಕ್ರವಾಹನ ವೆಬ್ ತಾಣ ವೀಕ್ಷಿಸಿ

Most Read Articles

Kannada
Story first published: Monday, June 18, 2012, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X