ರಸ್ತೆಗಿಳಿಯಲಿದೆ ಪರವಾನಿಗೆ ಹಂಗಿಲ್ಲದ ಎರಡು ಸ್ಕೂಟರ್

ಪರವಾನಿಗೆ, ರಿಜಿಸ್ಟ್ರೇಷನ್ ಹಂಗಿಲ್ಲದ ವಾಹನವೊಂದರ ಅನ್ವೇಷಣೆಯಲ್ಲಿದ್ದವರಿಗೆ ಇಲ್ಲೊಂದು ಶುಭಸುದ್ದಿಯಿದೆ. ಬೈಸಿಕಲ್ ತಯಾರಿಕಾ ಕಂಪನಿ "ಹೈ-ಬ್ರಿಡ್" ದೇಶದಲ್ಲಿ ನೂತನ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಶೀಘ್ರದಲ್ಲಿ ಪರಿಚಯಿಸಲಿದೆ. ಶಬ್ದರಹಿತ, ಹೊಗೆರಹಿತ, ಪೆಟ್ರೊಲ್ ರಹಿತ, ರಿಜಿಸ್ಟ್ರೇಷನ್ ರಹಿತ, ಪರವಾನಗಿ ರಹಿತ ಸ್ಕೂಟರ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವುದಾಗಿ "ಹೈ-ಬ್ರಿಡ್" ಚೇರ್ಮನ್ ಹೇಳಿದ್ದಾರೆ.

ಈಗ ಕಂಪನಿಯು ಪರಿಸರ ಸ್ನೇಹಿ ವಾಹನ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದು ನೂತನ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ "ಗೋ ಗ್ರೀನ್" ನತ್ತ ಹೆಜ್ಜೆಯಿರಿಸಿದೆ. ಹೈ-ಬ್ರಿಡ್ ಕಂಪನಿಯ ಬೈಸಿಕಲ್ ಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕಂಪನಿಯು ಅಮೆರಿಕ, ಯುರೋಪ್, ಜಪಾನ್ ಮತ್ತು ಆಫ್ರೀಕಾ ದೇಶಗಳು ಬಯಸಿದ ತಂತ್ರಜ್ಞಾನದ ಬೈಸಿಕಲ್ ಗಳನ್ನು ರಫ್ತು ಮಾಡುತ್ತಿದೆ.

ಕಂಪನಿಯ ನೂತನ ಸ್ಕೂಟರ್ ಗಳು ಲೀಥಿಯಂ ಐಯಾನ್ ಬ್ಯಾಟರಿಯಿಂದ ಚಲಿಸುತ್ತವೆ.. ಇದರಲ್ಲಿ ಸವಾರ ಪ್ರತಿಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಇದು ಆನ್ ಬೋರ್ಡ್ ಚಾರ್ಜರ್ ಹೊಂದಿದ್ದು ಮನೆಯಲ್ಲಿರುವ ಎಲೆಕ್ಟ್ರಿಕ್ ಪ್ಲಗ್ ಮೂಲಕವೂ ಚಾರ್ಜ್ ಮಾಡಬಹುದಾಗಿದೆ. ನೂತನ ಸ್ಕೂಟರ್ ಶಬ್ದರಹಿತ, ಹೊಗೆರಹಿತ, ಪೆಟ್ರೊಲ್ ರಹಿತ, ರಿಜಿಸ್ಟ್ರೇಷನ್ ರಹಿತ, ಪರವಾನಗಿ ರಹಿತವಾಗಿದೆ. ಇದರ ನಿರ್ವಹಣೆ ವೆಚ್ಚವೂ ಕಡಿಮೆ ಎಂದು ಕಂಪನಿ ಹೇಳಿದೆ.

Most Read Articles

Kannada
English summary
The fast growing electric two wheeler segment is getting a new face in Hi-Bird which is set to launch two models in scooter. The company is popular in bicycles for quite a long time and the move is to promote go-green concept in India.
Story first published: Tuesday, March 29, 2011, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X