ಕಳ್ಳರು ಪ್ರಧಾನಿ ಕ್ಯಾಮರಾನ್ ಸೈಕಲನ್ನೇ ಬಿಟ್ಟಿರಲಿಲ್ಲ!

ಅದೊಂದು ಕಾಲವಿತ್ತು. ಭಾರತದ ರಾಜಕೀಯ ಧುರೀಣರು ಬೈಸಿಕಲ್ ಸವಾರಿ ಮೂಲಕ ಸಾರ್ವಜನಿಕ ಸಂಪರ್ಕ ಇಟ್ಟುಕೊಳ್ಳುತ್ತಿದ್ದರು. ಆದರೆ ಅಧಿಕಾರ ದೊರಕಿದ ನಂತರ ಇವರೆಲ್ಲ ಐಷಾರಾಮಿ ಕಾರುಗಳಿಗೆ ಕನ್ವರ್ಟ್ ಆಗಿದ್ದಾರೆ. ಒಂದು ಆಶಾದಾಯಕ ಸುದ್ದಿಯೆಂಬಂತೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಕೂಡ ಬೈಸಿಕಲ್ ಬಳಕೆ ಮಾಡುತ್ತಾರೆ.

ಇತ್ತೀಚೆಗೆ ಆಸ್ತಿ ಘೋಷಣೆಯಲ್ಲಿ ಪಿ. ಚಿದಂಬರಂ ಬಳಿ ಒಂದು ಬೈಸಿಕಲ್ ಇರುವುದು ತಿಳಿದು ಬಂದಿದೆ. ಅದಕ್ಕೆ ಅವರು ಪಾವತಿಸಿದ್ದು 1,239 ರುಪಾಯಿ. ಅವರು ನಿತ್ಯ ಬೈಸಿಕಲ್ ಬಳಸುವ ಕುರಿತು ಮಾಹಿತಿಯಿಲ್ಲ. ಜೊತೆಗೆ ಅವರಲ್ಲಿ ಫೋರ್ಡ್ ಫಿಯೆಸ್ಟಾ ಮತ್ತು ಒಂದು ಫೋಕ್ಸ್ ವ್ಯಾಗನ್ ಕಾರಿದೆ.

ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಮತ್ತು ಹಾಲಿ ಪ್ರಧಾನಿ ಡೇವಿಡ್ ಕ್ಯಾಮರಾನ್ ನಿಮಗೆ ಗೊತ್ತಿರಬೇಕು. ಅವರು ನಿತ್ಯ ಬಳಕೆಗೆ ಬೈಸಿಕಲ್ ಬಳಸುವ ಮೂಲಕ ಸಾಕಷ್ಟು ಸಾಕಷ್ಟು ಸುದ್ದಿ ಮಾಡಿದ್ದಾರೆ.

ವಿಟ್ಟೋರಿಯೊ ಡೆಸಿಕಾ ನಿರ್ದೇಶಿಸಿದ ಜನಪ್ರಿಯ ಸಿನಿಮಾ ಬೈಸಿಕಲ್ ಥೀವ್ಸ್. ಅದರಲ್ಲಿ ಬೈಸಿಕಲ್ ಕಳೆದುಕೊಂಡ ಸಾಮಾನ್ಯ ವ್ಯಕ್ತಿ ಅನುಭವಿಸುವ ಸಂಕಷ್ಟ ಹೃದಯ ತಟ್ಟುತ್ತದೆ. ಆದರೆ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥರಾಗಿದ್ದ ಡೇವಿಡ್ ಕ್ಯಾಮರಾನ್ ಬೈಸಿಕಲ್ ಕೂಡ ಹಲವು ಬಾರಿ ಕಳ್ಳತನವಾಗಿದೆ ಅಂದ್ರೆ ನಂಬಲೇಬೇಕು.

2008ರಲ್ಲಿ ಅವರು ಶಾಪಿಂಗ್ ಮುಗಿಸಿ ಬಂದ ನಂತರ ಅವರ ಬೈಸಿಕಲ್ ಕಾಣೆಯಾಗಿತ್ತು. ಯುವಕರ ಗ್ಯಾಂಗೊಂದು ಅವರ ಬೈಸಿಕಲ್ ಕಳ್ಳತನ ಮಾಡಿತ್ತು. ಮತ್ತೊಮ್ಮೆ ಮನೆ ಸಮೀಪದಲ್ಲಿ ಸೈಕಲ್ ನಿಲ್ಲಿಸಿ ಹೋದಾಗ ಅಲ್ಲಿಂದಲೂ ಬೈಸಿಕಲ್ ಕಳ್ಳತನವಾಗಿತ್ತು.

ಡೇವಿಡ್ ಕ್ಯಾಮರಾನ್ ಒಮ್ಮೆ ಬೈಸಿಕಲ್ ಸವಾರಿ ಮಾಡುತ್ತ ಟ್ರಾಫಿಕ್ ಕೆಂಪು ಸಿಗ್ನಲ್ ದಾಟಿ ಬಿಟ್ಟರು. ಬೆಂಗಳೂರಿನಲ್ಲಾದರೆ ಬೈಸಿಕಲ್ ಸವಾರರು ಟ್ರಾಫಿಕ್ ರೂಲ್ಸ್ ಪಾಲಿಸೋದಿಲ್ಲ. ಟ್ರಾಫಿಕ್ ಸಿಗ್ನಲ್ ನಿಯಮ ಉಲ್ಲಂಘಿಸಿದರೂ ದೊಡ್ಡ ವಿಷಯವಾಗೋದಿಲ್ಲ. ಆದರೆ ಡೇವಿಡ್ ಕ್ಯಾಮರಾನ್ ಒಮ್ಮೆ(2008ರಲ್ಲಿ) ಕೆಂಪು ಸಿಗ್ನಲ್ ದಾಟಿ ಸಂಚಾರಿ ನಿಯಮ ಉಲ್ಲಂಘಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅವರು ತನ್ನ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೂಡ ಕೇಳಿದ್ದರು.

ಮತ್ತೊಮ್ಮೆ ಡೇವಿಡ್ ಕ್ಯಾಮರಾನ್ ಸುರಕ್ಷತೆಯ ಹೆಲ್ಮೆಟ್ ಹಾಕದೇ ಬೈಸಿಕಲ್ ಸವಾರಿ ಮಾಡುತ್ತಿದ್ದರು. ಇದು ಟ್ರಾಫಿಕ್ ಕ್ಯಾಮರಾದಲ್ಲಿ ದಾಖಲಾಗಿತ್ತು. ಇವರು ಕೆಟ್ಟ ಮಾದರಿಯಾಗುತ್ತಿದ್ದಾರೆ ಎಂದು ಈ ಕುರಿತು ವ್ಯಾಪಕ ಟೀಕೆಯೂ ಕೇಳಿಬಂದಿತ್ತು. ಅವರು ಪ್ರಧಾನಿಯಾಗಿ ಆಯ್ಕೆಗೊಂಡ ನಂತರ ಯಾವುದೇ ಕಳ್ಳರಿಗೆ ಅವರ ಸೈಕಲ್ ಕದಿಯೋ ಗುಂಡಿಗೆ ಇರಲಿಲ್ಲ.  ಕ್ಯಾಮರಾನ್ ಬೈಸಿಕಲ್ ಸವಾರಿಯಲ್ಲಿ ಇಂಟ್ರೆಸ್ಟಿಂಗ್ ಸುದ್ದಿಗಳು ಸಾಕಷ್ಟಿವೆ. ಸದ್ಯಕ್ಕೆ ಇಷ್ಟು ಸಾಕು.

Most Read Articles

Kannada
English summary
Indian politicians ride bicycles to get in touch with public but end up hifting to luxury cars once they attain power. However as a ray of hope there are still some politicians who still own a bicycle. In a recent disclosure of assets Union Home Minister P.Chidambaram has a bicycle. On the international front, British Prime minister David Cameron also owns several bicycles. Two of them were reportedly stolen in London
Story first published: Saturday, September 17, 2011, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X