ಹ್ಯೊಸಂಗ್ ಆಫ್ ರೋಡ್ ಆರ್‌ಟಿ25ಡಿ ಬೈಕ್ ಬರುತ್ತಂತೆ!

ಕೊರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿ ಹ್ಯೊಸಂಗ್ ದೇಶದಲ್ಲಿ ಗಾರ್‌ವೇರ್ ಜೊತೆಸೇರಿ ಆರ್‌ಟಿ250ಡಿ ಹೆಸರಿನ ಆಫ್ ರೋಡ್ ಬೈಕನ್ನು ಹೊರತರಲು ಯೋಜಿಸಿದೆ ಎಂದು ವರದಿಗಳು ಹೇಳಿವೆ.

ಕಂಪನಿಯು ಈ ಹಿಂದೆ 250ಸಿಸಿಯಿಂದ 400ಸಿಸಿವರೆಗಿನ ಬೈಕುಗಳನ್ನು ದೇಶಕ್ಕೆ ಪರಿಚಯಿಸುವ ಇಂಗಿತ ವ್ಯಕ್ತಪಡಿಸಿತ್ತು. ಹೀಗಾಗಿ ಕಂಪನಿಯು ಜಿಟಿ650 ಪರಿಚಯಿಸುವ ಕುರಿತು ವದಂತಿಗಳಿದ್ದವು. ಇದೀಗ ಕಂಪನಿ ಆಫ್ ರೋಡ್ ಮಾರುಕಟ್ಟೆಯತ್ತ ಗಮನ ಹರಿಸಿದ್ದು ಅಚ್ಚರಿಯ ವಿಷಯ.

ಕಂಪನಿಯು ಈಗಾಗಲೇ ಆರ್‌ಟಿ125ಡಿ ಆಫ್ ರೋಡ್ ಬೈಕನ್ನು ಅಭಿವೃದ್ಧಿಪಡಿಸಿದೆ. ಇದು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಆರ್‌ಟಿ250ಡಿ ಕೊಂಚ ಬೃಹತ್ ಎಂಜಿನ್ ಹೊಂದಿರಲಿದೆ. ಕಂಪನಿಯು ಗಾರ್‌ವೇರ್-ಹ್ಯೊಸಂಗ್ ಘಟಕಕ್ಕೆ ಸಿಕೆಡಿ ಹಾದಿ ಮೂಲಕ ನೂತನ ಬೈಕುಗಳನ್ನು ಆಮದುಮಾಡಿಕೊಳ್ಳುವ ನಿರೀಕ್ಷೆಯಿದೆ.

ಗಾರ್‌ವೇರ್-ಹ್ಯೊಸಂಗ್ ಜಂಟಿ ಉದ್ಯಮವು ಈಗ ದೇಶಕ್ಕೆ ಮೂರು ಬೈಕುಗಳನ್ನು ಪರಿಚಯಿಸಿದೆ. ಇದರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಆರ್‌ಟಿ250ಡಿ ಮೂಲಕ ಕಂಪನಿ ದೇಶದಲ್ಲಿ ಬೈಕುಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸಕ್ಕೆ ಚಾಲನೆ ನೀಡಲಿದೆ.

ಇತ್ತೀಚೆಗೆ ದೇಶದ ರಸ್ತೆಗೆ ಕೆಟಿಎಂ ಡ್ಯೂಕ್ 200 ಬೈಕ್ ಆಗಮಿಸಿತ್ತು. ಬಜಾಜ್ ಪಲ್ಸರ್ 200ಎನ್ಎಸ್ ಕೂಡ ಶೀಘ್ರದಲ್ಲಿ ಆಗಮಿಸಲಿದೆ. ಇದೇ ಸಮಯದಲ್ಲಿ ಹ್ಯೊಸಂಗ್ ಕೂಡ 200ಸಿಸಿಗಿಂತ ಹೆಚ್ಚು ಶಕ್ತಿಶಾಲಿ ಬೈಕನ್ನು ಪರಿಚಯಿಸಲು ಯೋಜಿಸಿದೆ.

ದೇಶದಲ್ಲಿ ಆನ್-ಆಫ್ ರೋಡ್ ಅವಳಿ ಸಾಮರ್ಥ್ಯದ ಬೈಕು ಮಾರುಕಟ್ಟೆ ಹೆಚ್ಚು ಬೆಳೆದಿಲ್ಲ. ಇತ್ತೀಚೆಗೆ ಹೀರೊ ಮೊಟೊಕಾರ್ಪ್ ಕಂಪನಿಯು ಇಂಪಲ್ಸ್ ಮೂಲಕ ಆಫ್ ರೋಡ್ ಬೈಕ್ ಸೆಗ್ಮೆಂಟಿಗೆ ಲಗ್ಗೆಯಿಟ್ಟಿತ್ತು. ಹೋಂಡಾ ಕಂಪನಿ ಕೂಡ ಆಫ್ ರೋಡ್ ಬೈಕ್ ಪರಿಚಯಿಸುವ ಯೋಜನೆ ಹೊಂದಿದೆ ಎಂದು ವರದಿಗಳು ಹೇಳಿವೆ. ಹೋಂಡಾ ಕಂಪನಿಯ ಸಿಆರ್‌ಎಫ್250ಎಲ್ ಬೈಕ್ ಮುಂದಿನ ವರ್ಷ ಆಗಮಿಸುವ ನಿರೀಕ್ಷೆಯಿದೆ.

ಆಫ್ ರೋಡಿನಲ್ಲೂ ಟ್ರಾಫಿಕ್ ಜಾಮ್ ಆಗುವ ಸೂಚನೆ ದಟ್ಟವಾಗಿದೆ.

Most Read Articles

Kannada
English summary
Hyosung, the Korean motorcycle manufacturer working in India with its partner Garware is reportedly planning to launch an off road bike named the RT250D. Hyosung earlier expressed its interest to launch 250cc to 400cc bikes in India. But Hyosung has surprised all be its off road bike RT250D.
Story first published: Friday, May 4, 2012, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X