Just In
- 51 min ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 1 hr ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 1 hr ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 1 hr ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲೆಕ್ಟ್ರಿಕ್ ಬೈಕ್ ಕಂಪನಿಗಳಿಗಿದು ಸವಾಲಿನ ಸಮಯ
ದೇಶದ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳಿಗೆ ಇದು ಕಠಿಣ ಸಮಯವಾಗಿದ್ದು, ತಮ್ಮ ಭವಿಷ್ಯದ ಕಾರ್ಯತಂತ್ರಗಳನ್ನು ಪುನರ್ ಪರಿಶೀಲಿಸುತ್ತಿವೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಪೆಟ್ರೋಲ್ ದರ ಹೆಚ್ಚಾದ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಹಜವಾಗಿ ಬೇಡಿಕೆ ಏರಬೇಕಿತ್ತು. ಆದರೆ ಇ ಬೈಕ್ ಮಾರುಕಟ್ಟೆಯಲ್ಲಿ ಅಂತಹ ಯಾವುದೇ ಬದಲಾವಣೆಯಾಗಿಲ್ಲ.
"ದೇಶದಲ್ಲಿ ಬೇಡಿಕೆ ಕಡಿಮೆ ಇರುವ ಕಾರಣ ವಿದೇಶಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ಮಾರುಕಟ್ಟೆ ರಫ್ತು ಮಾಡುವ ಸಾಧ್ಯತೆಯ ಕುರಿತು ಗಮನ ಹರಿಸಿದ್ದೇವೆ" ಎಂದು ವಿಜಯ್ ಮುಂಜಾಲ್ ನೇತೃತ್ವದ ಹೀರೊ ಎಲೆಕ್ಟ್ರಿಕ್ ಕಂಪನಿಯ ಮುಖ್ಯಸ್ಥರು ಹೇಳಿದ್ದಾರೆ. "ಗ್ರಾಹಕರಿಗೆ ದರ ವಿನಾಯಿತಿ ಮೂಲಕ ಸೆಳೆಯಲು ಯತ್ನಿಸುತ್ತಿದ್ದೇವೆ" ಎಂದು ಜನಪ್ರಿಯ ಇ-ಸ್ಕೂಟರ್ ಯೊಗ್ಯಕ್ಸ್ ತಯಾರಕಾ ಕಂಪನಿ ಎಲೆಕ್ಟ್ರೊಥೆಮ್ ಇಂಡಿಯಾ ಲಿಮಿಟೆಡ್ ಹೇಳಿದೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಹೀರೊ ಎಲೆಕ್ಟ್ರಿಕ್ ಕಂಪನಿಯು ಇಂಗ್ಲೆಂಡ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರವಾಹನ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ತದನಂತರ ಕಂಪನಿಯು ಹೀರೊ ಎಕೊ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಈ ಹಿಂದೆ ಹೀರೊ ಎಲೆಕ್ಟ್ರಿಕ್ ಕಂಪನಿಯ ಬೈಕುಗಳು ತಿಂಗಳಿಗೆ ಕನಿಷ್ಠವೆಂದರೂ 7-8 ಸಾವಿರ ಯುನಿಟ್ ಮಾರಾಟವಾಗುತ್ತಿದ್ದವು. ಈಗ ಈ ಸಂಖ್ಯೆ ಮೂರು ಸಾವಿರ ಯುನಿಟ್ ಇದೆ. "ಕಳೆದ ಕೆಲವು ತಿಂಗಳಿನಿಂದ ಎಲೆಕ್ಟ್ರಿಕ್ ಬೈಕ್ ಮಾರಾಟವು ಶೇಕಡ 70-80ರಷ್ಟು ಕುಸಿದಿದೆ" ಎಂದು ಕಂಪನಿ ಹೇಳಿದೆ. ಅಜಂತಾ ಗ್ರೂಪಿನ ಎಲೆಕ್ಟ್ರಿಕ್ ಬೈಕ್ ಮಾರಾಟವೂ ಇಳಿಕೆ ಕಂಡಿದೆ.