ದೀಪಾವಳಿ ಸಂಭ್ರಮಕ್ಕೆ ಪಿಯಾಜಿಯೊ ಫ್ಲೈ125 ಎಂಟ್ರಿ

By Nagaraja

ದೀಪಾವಳಿ ಹಬ್ಬ ಹತ್ತಿರವಾಗುತ್ತಿರುವಂತೆಯೇ ಇಟಲಿ ದ್ವಿಚಕ್ರ ವಾಹನ ತಯಾರಕ ಕಂಪನಿ ಪಿಯಾಜಿಯೊ ಭಾರತೀಯ ಮಾರುಕಟ್ಟೆಯಲ್ಲಿ ಪ್ಲೈ 125 ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪಿಯಾಜಿಯೊ ಫ್ಲೈ 125 ರಸ್ತೆಗಿಳಿಯಲಿದ್ದು, ಬಜೆಟ್ 50 ಸಾವಿರ ರೂಪಾಯಿಗಳ ಅಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ.

ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ಲೈ 125 ಸುದ್ದಿ ಮಾಡುತ್ತಿದೆ. ಹಗುರ ಭಾರದ ಕಾಂಪಾಕ್ಟ್ ಸೂಟ್ಕರ್ ಆಗಿರುವ ನೂತನ ಸ್ಕೂಟರ್, 10.5 ಬಿಎಚ್‌ಪಿ ಹಾಗೂ 124 ಸಿಸಿ ಸಿಂಗಲ್ ಸಿಲಿಂಡರ್ 2 ವಾಲ್ವೆ ಎಂಜಿನ್ ಹೊಂದಿದೆ. ಉತ್ತಮ ಇಂಧನ ದಕ್ಷತೆ ಪಡೆಯಲಿರುವ ಫೈ 125 ಸಿವಿಟಿ ಟ್ರಾನ್ಸ್‌ಮಿಷನ್‌ನಿಂದ ನಿರ್ಮಿಸಲ್ಪಟ್ಟಿದೆ.

ದೇಶದ ರಸ್ತೆಗೆ ಹೊಂದಿಕೆಯಾಗುವ ರೀತಿಯಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವಂತೆಯೇ ಪಿಯಾಜಿಯೊ ಪ್ಲೈ 125 ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸೊರ್ಬರ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಹೈಡ್ರಾಲಿಕ್ ಶಾಕ್ ಅಬ್ಸೊರ್ಬರ್ ಅನ್ನು ಆಳವಡಿಸಲಾಗಿದೆ. ಪ್ರಸ್ತುತ ಸ್ಕೂಟರ್ 12 ಇಂಚ್ ವೀಲ್ ಜತೆ ಟ್ಯೂಬ್‌ಲೆಸ್ ಟಯರ್ ಜತೆ ಸಂಚರಿಸಲಿದೆ. ಹಾಗೆಯೇ ಸುರಕ್ಷಿತಗಾಗಿ ಎದುರುಗಡೆ 200 ಎಂಎಂ ಡಿಸ್ಕ್ ಹಾಗೂ ರಿಯರ್‌ನಲ್ಲಿ 140 ಎಂಎಂ ಡ್ರಮ್ ಬ್ರೇಕ್ ಸಿಸ್ಟಂ ಆಳವಡಿಸಲಾಗಿದೆ.

ಪಿಯಾಜಿಯೊ ಫ್ಲೈ 125 ಫೀಚರ್ಸ್:

  • ಎಂಜಿನ್ ಮಾಹಿತಿ: ಸಿಂಗಲ್ ಸಿಲಿಂಡರ್ 2 ವಾಲ್ವೆ ಏರ್ ಕೂಲ್ಡ್ 4 ಸ್ಟ್ರೋಕ್
  • ಸಿಲಿಂಡರ್ ಸಾಮರ್ಥ್ಯ: 124 ಸಿಸಿ
  • ಬೋರ್ ಆಂಡ್ ಸ್ಟ್ರೋಕ್: 57 x 48.6 ಎಂಎಂ
  • ಮಾಕ್ಸಿಮಮ್ ಟರ್ಕ್ಯೂ: 10 ಎನ್‌ಎಂ, 7000 ಆರ್‌ಪಿಎಂ
  • ಸ್ಟಾರ್ಟ್: ಎಲೆಕ್ಟ್ರಿಕ್
  • ಟ್ರಾನ್ಸ್‌ಮಿಷನ್: ಟ್ವಿಸ್ಟ್ ಆಂಡ್ ಗೊ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಸಿವಿಟಿ) ವಿತ್ ಆಟೋಮ್ಯಾಟಿಕ್ ಕ್ಲಚ್
  • ಚಾಸೀಸ್: ಸ್ಟೀಲ್ ಟ್ಯೂಬ್ ವಿತ್ ರಿನ್‌ಫೋರ್ಸ್‌ಡ್ ಪ್ಲೇಟ್ಸ್
  • ಫ್ರಂಟ್ ಸಸ್ಪೆಷನ್: ಹೈಡ್ರಾಲಿಕ್ ಸಿಂಗಲ್ ಶಾಕ್ ಅಬ್ಸೊರ್ಬರ್, ಸ್ಪ್ರಿಂಗ್ ಪ್ರಿ-ಲೋಡ್ ಅಡ್ಜಸ್ಟೇಬಲ್ ಟು 4 ಪೊಸಿಷನ್
  • ಫ್ರಂಟ್ ಬ್ರೇಕ್: 200 ಎಂಎಂ ಡಿಸ್ಕ್, ಫ್ಲೋಟಿಂಗ್ ಕಾಲಿಪರ್ ವಿತ್ ಟ್ವಿನ್ ಪಿಸ್ಟನ್
  • ರಿಯರ್ ಬ್ರೇಕ್: 140 ಎಂಎಂ ಡ್ರಮ್
  • ಫ್ರಂಟ್ ಟಯರ್/ರಿಯರ್ ಟೈಪ್: ಟ್ಯೂಬ್‌ಲೆಸ್ 120/70-12, ಟ್ಯೂಬ್‌ಲೆಸ್ 120/70-10
  • ಉದ್ದ: 1870 ಎಂಎಂ
  • ಅಗಲ: 735 ಎಂಎಂ
  • ವೀಲ್‌ಬೇಸ್: 1330 ಎಂಎಂ
  • ಸೀಟ್ ಎತ್ತರ: 785 ಎಂಎಂ
  • ಡ್ರೈ ವೇಟ್: 112 ಕೆ.ಜಿ
  • ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ: 7.2 ಲೀಟರ್
  • ಗರಿಷ್ಠ ವೇಗ (ಕಿ.ಲೋ/ಗಂಟೆಗೆ): 94 ಕಿ.ಲೋ/ಗಂಟೆಗೆ
  • ಎಮಿಷನ್ಸ್: ಯುರೋ 3
  • ಆಕ್ಸೆಸರಿ: ವಿಂಡ್‌ಸ್ಕ್ರೀನ್, 33 ಲೀಟರ್ ಟಾಪ್ ಬಾಕ್ಸ್, ಚೈನ್ ಲಾಕ್
  • ಕಲರ್ಸ್: ಬ್ಲ್ಯೂ ಮಿಡ್‌ನೈಟ್, ಬ್ಲ್ಯಾಕ್ ಶೈನ್,
  • ಎಕ್ಸ್‌ಕ್ಯಾಲಿಬರ್ ಸಿಲ್ವರ್, ಬಿನಾಕೊ ಪೊಲರೆ
Most Read Articles

Kannada
English summary
Piaggio had re-entered scooter market in the country with the premium Vespa LX125 recently. The Vespa life style scooter has been highly priced and now, to draw sales volumes, the company is planning to launch another scooter - Fly 125cc soon Indian market.
Story first published: Wednesday, October 31, 2012, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X