50 ಸಾವ್ರಕ್ಕಿಂತ ಕಡಿಮೆಗೆ ಸಿಗೋ ಬೆಸ್ಟ್ ಬೈಕ್ಸ್

ಬೈಕ್ ಖರೀದಿ ಕನಸು ಎಲ್ಲರಿಗೂ ಇರುತ್ತದೆ. ಹಾಗಂತ ಎಲ್ಲರಿಗೂ ಸೂಪರ್ ಬೈಕುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಾಗಿ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಲು ಹೆಚ್ಚು ಮೈಲೇಜ್ ನೀಡುವ ಮತ್ತು ಕಡಿಮೆ ದರಕ್ಕೆ ದೊರಕುವ ಬೈಕುಗಳನ್ನು ಹೆಚ್ಚಾಗಿ ಜನರು ಖರೀದಿಸುತ್ತಾರೆ.

ಐವತ್ತು ಸಾವಿರ ರು.ಗಿಂತ ಅಗ್ಗದ ದರದಲ್ಲಿ ದೊರಕುವ ಕೆಲವು ಬೈಕುಗಳನ್ನು ಇಲ್ಲಿ ನೀಡಲಾಗಿದೆ. ಎಲ್ಲಾ ಚಿತ್ರಗಳನ್ನು ನೋಡಿದ್ಮೆಲೆ ಇವುಗಳಲ್ಲಿ ನಿಮಗ್ಯಾವ ಬೈಕು ಇಷ್ಟವೆಂದು ನಮಗೆ ತಿಳಿಸಲು ಮರೆಯದಿರಿ. ಇದರಲ್ಲಿ ಕೆಲವು ಬೈಕುಗಳು ಆನ್ ರೋಡಿನಲ್ಲಿ 50 ಸಾವಿರ ರು.ಗಿಂತ ಕೆಲವು ಸಾವಿರ ರು. ಹೆಚ್ಚಾಗಬಹುದು. ನೆನಪಿಡಿ ಇವೆಲ್ಲ ಎಕ್ಸ್ ಶೋರೂಂ ದರ.

ಕನಸಲ್ಲ: ಹೋಂಡಾ ಡ್ರೀಮ್ ಯುಗ

ಕನಸಲ್ಲ: ಹೋಂಡಾ ಡ್ರೀಮ್ ಯುಗ

ಹೋಂಡಾ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಡ್ರೀಮ್ ಯುಗ ಅಗ್ಗದ ಬೈಕ್. ಇದರ ದರ ಸುಮಾರು 44 ಸಾವಿರ ರು. ಇದೆ. ಇದು 110(ಕರೆಕ್ಟಾಗಿ ಹೇಳ್ಬೆಕಂದ್ರೆ 109 ಸಿಸಿ) ಸಿಸಿ ಎಂಜಿನ್ ಹೊಂದಿದೆ. ಇದರ ಮೈಲೇಜ್ ಸುಮಾರು 72 ಕಿ.ಮೀ. ಆಸುಪಾಸಿನಲ್ಲಿದೆ. ಇದು ಕಿಕ್ ಡ್ರಮ್ ಅಲಾಯ್, ಸೆಲ್ಫ್ ಡ್ರಮ್ ಅಲಾಯ್ ಆಯ್ಕೆಗಳಲ್ಲೂ ದೊರಕುತ್ತದೆ.

ಸಿಬಿ ಟ್ವಿಸ್ಟರಿಗೆ ರೇಟು ಎಷ್ಟು?

ಸಿಬಿ ಟ್ವಿಸ್ಟರಿಗೆ ರೇಟು ಎಷ್ಟು?

ಹೋಂಡಾ ಸಿಬಿ ಟ್ವಿಸ್ಟರ್ ಸಹ ಅಗ್ಗದ ಬೈಕ್. ಇದರ ದರ ಸುಮಾರು 43,285 ರು.ನಿಂದ 49,152 ರು.ವರೆಗಿದೆ.

ಸುಜುಕಿ ಹಯಾಟೆಗೆ ಹಾಯ್ ಎನ್ನಿ

ಸುಜುಕಿ ಹಯಾಟೆಗೆ ಹಾಯ್ ಎನ್ನಿ

ಇದರ ದರ ಸುಮಾರು 40,162 ರು. ಪ್ರತಿಲೀಟರಿಗೆ ಸುಮಾರು 55 ಕಿ.ಮೀ. ಮೈಲೇಜ್ ನೀಡುತ್ತದೆ. 112.8 ಸಿಸಿ ಎಂಜಿನ್ ಹೊಂದಿದೆ.

ಬಜಾಜ್ ಬಾಕ್ಸರ್ ರೇಟ್ ಏನ್ಸಾರ್?

ಬಜಾಜ್ ಬಾಕ್ಸರ್ ರೇಟ್ ಏನ್ಸಾರ್?

ಬಜಾಜ್ ಬಾಕ್ಸರ್ ಸಹ ದೇಶದ ಅಗ್ಗದ ಜನಪ್ರಿಯ ಬೈಕ್. ಇದರ ದರ ಸುಮಾರು 42 ಸಾವಿರ ರು. ಆಸುಪಾಸಿನಲ್ಲಿದೆ.

ಬಜಾಜ್ ಪ್ಲಾಟಿನಾ

ಬಜಾಜ್ ಪ್ಲಾಟಿನಾ

ಪ್ಲಾಟಿನಾ ಬೈಕ್ ಸಹ ಕಡಿಮೆ ದರಕ್ಕೆ ದೊರಕುತ್ತದೆ. ಇದರ ದರ ಸುಮಾರು 38,019 ರು.ನಿಂದ 39,580 ರು.ವರೆಗಿದೆ. ಇದು 100 ಮತ್ತು 125 ಸಿಸಿ ಆಯ್ಕೆಗಳಲ್ಲಿ ಲಭ್ಯವಿದೆ.

ಸುಜುಕಿ ಸ್ಲಿಂಗ್ ಶಾಟ್

ಇದರ ದರ ಸುಮಾರು 43,945 ರು.ನಿಂದ 48,485 ರು.ವರೆಗಿದೆ. ಇದು 124 ಸಿಸಿ ಎಂಜಿನ್ ಹೊಂದಿದೆ.

ಹೀರೊ ಹೋಂಡಾ ಸ್ಪ್ಲೆಂಡರ್ ಪ್ಲಸ್

ಹೀರೊ ಹೋಂಡಾ ಸ್ಪ್ಲೆಂಡರ್ ಪ್ಲಸ್

ಇದರ ದರ 41,200 ರು.ನಿಂದ 46,950 ರು.ವರೆಗಿದೆ. ಆನ್ ರೋಡ್ ದರ 50 ಸಾವಿರ ರು. ದಾಟಿದರೂ ಅಚ್ಚರಿಯಿಲ್ಲ. 100 ಮತ್ತು 125 ಸಿಸಿ ಎಂಜಿನ್ ಆಯ್ಕೆ ಮಾಡಿಕೊಳ್ಳಬಹುದು.

ಟಿವಿಎಸ್ ಜೈವ್, ಸ್ಟಾರ್, ಸ್ಪೋರ್ಟ್, ಫ್ಲೇಮ್

ಟಿವಿಎಸ್ ಜೈವ್, ಸ್ಟಾರ್, ಸ್ಪೋರ್ಟ್, ಫ್ಲೇಮ್

ಟಿವಿಎಸ್ ಜೈವ್ ದರ ಸುಮಾರು 42 ಸಾವಿರ ರು., ಸ್ಟಾರ್ ಮತ್ತು ಸ್ಪೋರ್ಟ್ ದರವೂ 40 ಸಾವಿರ ರು. ಆಸುಪಾಸಿನಲ್ಲಿದೆ. ಫ್ಲೇಮ್ ದರ ಸುಮಾರು 47 ಸಾವಿರ ರು. ಆಸುಪಾಸಿನಲ್ಲಿದೆ.

ಹೋಂಡಾ ಶೈನ್: ಫೈನಾಗಿದೆ!

ಹೋಂಡಾ ಶೈನ್: ಫೈನಾಗಿದೆ!

ಹೋಂಡಾ ಶೈನ್ ಬೈಕನ್ನೂ ಅಗ್ಗದ ಬೈಕ್ ಲಿಸ್ಟಿಗೆ ಸೇರಿಸಬಹುದು. ಇದರ ಎಕ್ಸ್ ಶೋರೂಂ ದರ 44 ಸಾವಿರ ರು.ನಿಂದ ಆರಂಭವಾಗುತ್ತದೆ. ಆನ್ ರೋಡ್ ದರ ಮಾತ್ರ 50 ಸಾವಿರಕ್ಕಿಂತ ಕೊಂಚ ಹೆಚ್ಚಾಗಬಹುದು. ಇದು 125 ಸಿಸಿ ಬೈಕ್.

ಕ್ರಷಾಗಬಹುದು ನಿಮಗೆ: ಯಮಹಾ ಕ್ರಷ್

ಕ್ರಷಾಗಬಹುದು ನಿಮಗೆ: ಯಮಹಾ ಕ್ರಷ್

ಯಮಹಾ ಕ್ರಷ್ ಬೈಕ್ ದರ 32 ಸಾವಿರ ರು.ನಿಂದ 40 ಸಾವಿರ ರು.ವರೆಗಿದೆ. ಇದು 105.6 ಸಿಸಿ ಎಂಜಿನ್ ಹೊಂದಿದೆ. ಮೈಲೇಜ್: 62.3 ಕಿ.ಮೀ.

ಹೀರೋ ಹೋಂಡಾ ಫ್ಯಾಷನ್, ಸಿಡಿ ಡೌನ್

ಹೀರೋ ಹೋಂಡಾ ಫ್ಯಾಷನ್, ಸಿಡಿ ಡೌನ್

ಹೀರೋ ಹೋಂಡಾ ಸಿಡಿ ಡೌನ್ ದರ 40 ಸಾವಿರ ರು. ಆಸುಪಾಸಿನಲ್ಲಿದೆ. ಆದರೆ ಫ್ಯಾಷನ್ ಪ್ರೊ ಆನ್ ರೋಡ್ ದರ 50 ಸಾವಿರ ರು.ಗಿಂತ ಕೊಂಚ ಹೆಚ್ಚಾಗಬಹುದು.

50 ಸಾವಿರ ರು.ಗಿಂತ ಅಗ್ಗದ ಬೈಕುಗಳು: ಹೋಂಡಾ ಡ್ರೀಮ್ ಯುಗ, ಸಿಬಿ ಟ್ವಿಸ್ಟರ್, ಸುಜುಕಿ ಹಯಾಟೆ, ಬಜಾಜ್ ಬಾಕ್ಸರ್, ಪ್ಲಾಟಿನಾ, ಸುಜುಕಿ ಸ್ಲಿಂಗ್ ಶಾಟ್, ಹೀರೊ ಹೋಂಡಾ ಸ್ಪ್ಲೆಂಡರ್, ಟಿವಿಎಸ್ ಕಂಪನಿಯ ಜೈವ್, ಸ್ಟಾರ್, ಸ್ಪೋರ್ಟ್, ಫ್ಲೇಮ್ ಬೈಕುಗಳು, ಹೋಂಡಾ ಶೈನ್, ಯಮಹಾ ಕ್ರಷ್, ಹೀರೋ ಹೋಂಡಾ ಫ್ಯಾಷನ್, ಸಿಡಿ ಡೌನ್ ಸೇರಿದಂತೆ ಹಲವು ಬೈಕುಗಳ ದರ 50 ಲಕ್ಷ ರು.ಗಿಂತ ಅಗ್ಗ.

ಅಂದಹಾಗೆ ಓದುಗರೇ, ಈ ಬೈಕುಗಳಲ್ಲಿ ನಿಮಗೆ ಯಾವುದು ಇಷ್ಟ?

ಇದನ್ನೂ ಓದಿ: ಹತ್ತೂರು ಮೆಚ್ಚಿದ ಅತ್ಯುತ್ತಮ ಹತ್ತು ಸ್ಕೂಟರುಗಳು

Most Read Articles

Kannada
English summary
India is a predominantly two wheeler driven auto market where price is the most important factor. Here are the top motorcycles that are priced under Rs.50,000. Honda Dream Yuga, Suzuki Hayate, Bajaj Boxer, Suzuki Slingshot, Hero Honda Splendor, Bajaj Platina, Honda CB Twister, Bajaj Discover etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X