ಸಿಆರ್‌ಎಫ್ 250ಎಲ್: ಹೋಂಡಾ ಆಫ್-ಆನ್ ರೋಡ್ ಬೈಕ್

ಕಚ್ಚಾ ರಸ್ತೆಯಲ್ಲಿ, ಪಕ್ಕಾ ರಸ್ತೆಯಲ್ಲಿ, ರಸ್ತೆಯೇ ಇಲ್ಲದ ರಸ್ತೆಗಳಲ್ಲಿ, ಏಳುಬೀಳುಗಳ ಬಿರುಸಾದ ಹಾದಿಯಲ್ಲಿ ಸಾಗಬಹುದಾದ ಆಫ್-ರೋಡ್ ಬೈಕೊಂದನ್ನು ಜಪಾನಿನಲ್ಲಿ ಹೋಂಡಾ ಅನಾವರಣ ಮಾಡಿದೆ. ಅತ್ಯಧಿಕ ಇಂಧನ ದಕ್ಷತೆಯ ಬೈಕಿನ ಹೆಸರು CRF 250L.ಇದು ದೇಶದ ರಸ್ತೆಗೆ ಆಗಮಿಸುವುದೇ ಕಾದು ನೋಡಬೇಕಿದೆ.

ನೂತನ ಸಿಆರ್‌ಎಫ್ 250ಎಲ್ ಬೈಕಿನಲ್ಲಿ ಸಿಬಿಆರ್ 250 ಆರ್ ಬೈಕಿನಲ್ಲಿರುವ ಎಂಜಿನೇ ಇದೆ. ಆದರೆ ಇದು ಆಫ್ ರೋಡ್ ರೈಡಿಗೆ ಪೂರಕವಾಗಿರುವುದು ವಿಶೇಷ. ಆನ್ ರೋಡ್ ಮತ್ತು ಆಫ್ ರೋಡ್ ಎರಡೂ ಕಡೆ ಸವಾರಿ ಸಾಧ್ಯವಿರುವ ಬೈಕ್ ಹುಡುಕುತ್ತಿರುವರಿಗೆ ಇದು ಸೂಕ್ತವಾಗಿದೆ. 250 ಆರ್ ಬೈಕಿಗೆ ಹೋಲಿಸಿದರೆ ನೂತನ ಆಫ್ ರೋಡ್ ಬೈಕಿನ ದರದಲ್ಲೂ ಮಹತ್ವದ ವ್ಯತ್ಯಾಸವಿಲ್ಲ.

ನೂತನ ಸಿಆರ್‌ಎಫ್ 250ಎಲ್ ಬೈಕ್ 250ಸಿಸಿ, ಲಿಕ್ವಿಡ್ ಕೂಲ್ಡ್ ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದು 22 ಹಾರ್ಸ್ ಪವರ್ ಮತ್ತು 22 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದಕ್ಕೂ ಹಿಂದೆ ದೇಶದಲ್ಲಿ ಹೀರೋ ಮೊಟೊಕಾರ್ಪ್ ಕಂಪನಿಯು ಇಂಪಲ್ಸ್ ಆಫ್ ರೋಡ್ ಬೈಕನ್ನು ಪರಿಚಯಿಸಿತ್ತು. ಆದರೆ ಕಂಪನಿಯ ನಿರೀಕ್ಷೆಗೆ ತಕ್ಕಂತೆ ಇಂಪಲ್ಸ್ ಬೈಕಿಗೆ ಬೇಡಿಕೆ ಬಂದಿಲ್ಲ.

ನೂತನ ಹೋಂಡಾ CRF 250L ಬೈಕ್ ದೇಶಕ್ಕೆ ಆಗಮಿಸಿದರೆ ದರ ಸುಮಾರು 1.5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

Most Read Articles

Kannada
English summary
Honda has introduced the 2012 CRF 250L in Japan recently. But, What makes the CRF 250L interesting to Indian motorcycle enthusiasts is its high fuel economy and practicality. the fact that CRF 250L uses the same engine of the CBR 250R.
Story first published: Saturday, April 28, 2012, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X