ಭಾರತದತ್ತ ಹೆಜ್ಜೆಯನ್ನಿಟ್ಟ ಇಟಲಿಯ ಐಕಾನಿಕ್ ಬೆನೆಲ್ಲಿ ಸೂಪರ್ ಬೈಕ್

By Nagaraja

ದಕ್ಷಿಣ ಕೊರಿಯಾ ಮೂಲದ ಹ್ಯೊಸಂಗ್ ಸೂಪರ್ ಬೈಕ್‌ಗಳನ್ನು ಭಾರತದಲ್ಲಿ ಪರಿಚಯಿಸುವ ಮೂಲಕ ಸೂಪರ್ ಬೈಕ್ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಡಿಎಸ್‌ಕೆ ಮೊಟೊವೀಲ್ಸ್, ಇದೀಗ ಇಟಲಿ ಮೂಲದ ಮಗದೊಂದು ಐಕಾನಿಕ್ ಸೂಪರ್ ಬೈಕ್ ತಯಾರಕ ಸಂಸ್ಥೆಯಾಗಿರುವ ಬೆನೆಲ್ಲಿಯನ್ನು ದೇಶಕ್ಕೆ ಪರಿಚಯಿಸಿದೆ.

ನಿಮ್ಮ ಮಾಹಿತಿಗಾಗಿ, 1911ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿರುವ ಬೆನೆಲ್ಲಿ ಇಟಲಿಯ ಅತ್ಯಂತ ಪುರಾತನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. 'ಬೆನೆಲ್ಲಿ ಗ್ಯಾರೇಜ್‌'ನಲ್ಲಿ ತಮ್ಮ ಪಯಣ ಆರಂಭಿಸಿದ್ದ ಆರು ಮಂದಿ ಸೋದರರು (Giuseppe, Giovanni, Francesco, Filippo, Domenico and Antonio (ಟೊನಿನೊ ಎಂದೇ ಕರೆಯಲ್ಪಡುವ) )ಒಟ್ಟಾಗಿ ಬಹಳ ಉತ್ಸಾಹದಿಂದ ಬೈಕ್ ರಿಪೇರಿ ಕೆಲಸವನ್ನು ಆರಂಭಿಸಿದ್ದರು.


ಬಳಿಕ 1921ರಲ್ಲಿ ಸೈಕಲ್ ಫ್ರೇಮ್‌ನಲ್ಲಿ 'ವೆಲೊಮೊಟೊರ್' ಸಿಂಗಲ್ ಸಿಲಿಂಡರ್ ಟು ಸ್ಟ್ರೋಕ್ 75 ಸಿಸಿ ಹಾಗೂ ಮುಂದಿನ ವರ್ಷ 98 ಸಿಸಿ ಮೊಟೊಲೆಗ್ಗೆರಾ ಮಾದರಿಗಳಿಗೆ ವ್ಯಾಪಕ ಪ್ರತಿಕ್ರಿಯೆ ಲಭಿಸಿತ್ತು. ತದಾ ನಂತರ ಇಟಲಿ ಹಾಗೂ ಯುರೋಪ್ ಚಾಂಪಿಯನ್‌ಶಿಪ್‌ನಲ್ಲಿ 1000ಕ್ಕೂ ಹೆಚ್ಚು ಚಾಂಪಿಯನ್‌ಶಿಪ್‌ಗಳಲ್ಲಿ ವಿಜಯ ಪತಾಕೆ ಹಾರಿಸಿರುವ ಬೆನೆಲ್ಲಿ 1950 ಹಾಗೂ 1969 ವಿಶ್ವ ಕಿರೀಟವನ್ನು ಗೆದ್ದುಕೊಂಡಿತ್ತು. ಅಲ್ಲದೆ ಅನೇಕ ದಿಗ್ಗಜ ರೇಸರುಗಳನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಇಟಲಿ, ಜರ್ಮನಿ, ಫ್ರಾನ್ಸ್, ಚೀನಾ, ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸ್ಪೇನ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯ ಹೊಂದಿರುವ ಬೆನ್ನೆಲ್ಲಿ ಜಗತ್ತಿನ ಎರಡನೇ ಗರಿಷ್ಠ ನಿರ್ವಹಣೆಯ ಸೂಪರ್ ಬೈಕ್‌ ಸಂಸ್ಥೆಯಾಗಿದೆ.

ಭಾರತದಲ್ಲಿ ಬೃಹತ್ ಯೋಜನೆ ಹೊಂದಿರುವ ಸಂಸ್ಥೆಯು ಟೊರ್ನಡೊ ನೇಕ್ಡ್ ಟ್ರಿ, ಟಿಎನ್‌ಟಿ ಸೂಪರ್ ಬೈಕ್, ಇನ್ ಲೈನ್, ಟು ಸಿಲಿಂಡರ್ ಟಿಎನ್‌ಟಿ 302, ಇನ್ ಲೈನ್ ಫೋರ್ ಸಿಲಿಂಡರ್ 600 ಸಿಸಿ ಟಿಎನ್‌ಟಿ ಐ, ಟಿಎನ್‌ಟಿ 600 ಜಿಟಿ, 898 ಸಿಸಿ, ಇನ್ ಲೈನ್, ತ್ರಿ ಸಿಲಿಂಡರ್ ಟಿಎನ್‌ಟಿ899 ಮತ್ತು 1131 ಸಿಸಿ ಜೊತೆ ಜೊತೆಗೆ ತ್ರಿ ಸಿಲಿಂಡರ್ ಎಂಜಿನ್ ನಿಯಂತ್ರಿತ ಟಿಎನ್‌ಟಿ1130ಆರ್ ಮತ್ತು 155 ಅಶ್ವಶಕ್ತಿಗಿಂತಲೂ ಮೇಲ್ಪಟ್ಟ ಮಾದರಿಗಳನ್ನು ಅನಾವರಣಗೊಳಿಸಿದೆ.

ದೇಶದಲ್ಲಿ ಬೆನ್ನೆಲ್ಲಿ ಬೈಕ್‌ಗಳನ್ನು ಜೋಡಣೆ ಮಾಡುವಲ್ಲಿ ಡಿಎಸ್‌ಕೆ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ ಮುಂದಿನ ಆರರಿಂದ ಎಂಟು ತಿಂಗಳಲ್ಲಿ 20 ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ತೆರೆಯುವ ಯೋಜನೆ ಹೊಂದಿದೆ. ಇದರ ಭಾಗವಾಗಿ ಪ್ರಾರಂಭದಲ್ಲಿ ಮೊದಲ ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರು ಸೇರಿದಂತೆ ಮುಂಬೈ, ಹೈದಾರಬಾದ್, ಪುಣೆ, ಚಂಡೀಗಡ, ಚೆನ್ನೈ, ಕೋಲ್ಕತ್ತಾ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೋ ರೂಂ ತೆರೆದುಕೊಳ್ಳಲಿದೆ.
Benelli Superbike
Most Read Articles

Kannada
English summary
DSK Motowheels, one of India’s established and strongest players in the Superbike industry today announced a landmark partnership with well known Italian motorcycling legend – Benelli.
Story first published: Saturday, October 18, 2014, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X