ಹೀರೊದಿಂದ ಹೈ ಸ್ಪೀಡ್ ಇ-ಬೈಕ್ 'ಫೋಟಾನ್' ಬಿಡುಗಡೆ

By Nagaraja

ನಿಮಗಿದರ ಬಗ್ಗೆ ಮಾಹಿತಿಯಿದೆಯೇ? ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ವಿದ್ಯುತ್ ಚಾಲಿತ ವಾಹನಗಳಿಗೆ 'ಹೀರೊ ಎಲೆಕ್ಟ್ರಿಕ್' ಎಂಬ ವಿಭಾಗವನ್ನು ಆರಂಭಿಸಿತ್ತು. ಪ್ರಸ್ತುತ ಹೀರೊ ಎಲೆಕ್ಟ್ರಿಕ್, ದೇಶದ ಮಾರುಕಟ್ಟೆಗೆ ಅತ್ಯಾಕರ್ಷಕ ಹೈ ಸ್ಪೀಡ್ ಇ-ಬೈಕ್ 'ಫೋಟಾನ್' ವಿದ್ಯುತ್ ಚಾಲಿತ ಸ್ಕೂಟರನ್ನು ಬಿಡುಗಡೆ ಮಾಡಿದೆ.

ಸಂಸ್ಥೆಯ ಪ್ರಕಾರ, ದೇಶದ ಎಲ್ಲ ಮೆಟ್ರೋ ನಗರಗಳಲ್ಲೂ ಹೀರೊ ಫೋಟಾನ್ ಲಭ್ಯವಾಗಲಿದೆ. ಇದರ ಕರ್ನಾಟಕ ದರ 51,990 ರು.ಗಳಾಗಿರಲಿದೆ. ಅಲ್ಲದೆ ಹೈ ಸ್ಪೀಡ್ ಇ-ಬೈಕ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಹೈ ಸ್ಪೀಡ್ ಇ ಬೈಕ್,

ಡ್ಯುಯಲ್ ಮೋಡ್ ಡ್ರೈವ್ (ಪವರ್/ಎಕಾನಮಿ),

ಪೊಲಿಕಾರ್ಬೋನೇಟ್ ಹೆಡ್ ಲ್ಯಾಂಪ್ (ರಾತ್ರಿಯಲ್ಲಿ ಉತ್ತಮ ಗೋಚರತೆ),

ಏರೋಡೈನಾಮಿಕ್ ಶೈಲಿ,

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಹೈ ಟಾರ್ಕ್ ಕಂಟ್ರೋಲರ್,

ಫ್ರಂಟ್ ಟೆಲಿಸ್ಕಾಪಿಕ್ ಸಸ್ಪೆಷನ್,

ಶಕ್ತಿಶಾಲಿ ಸ್ಟೀಲ್ ಚಾಸೀ,

ಫ್ರಂಟ್ ಡಿಸ್ಕ್ ಬ್ರೇಕ್,

ಆ್ಯಂಟಿ ಥೆಫ್ಟ್ ಅಲಾರ್ಮ್

ಹೀರೊದಿಂದ ಹೈ ಸ್ಪೀಡ್ ಇ-ಬೈಕ್ 'ಫೋಟಾನ್' ಬಿಡುಗಡೆ

ಹೀರೊ ಫೋಟಾನ್ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ ಗರಿಷ್ಠ 45 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ ಏಕಮಾತ್ರ ಚಾರ್ಜ್‌ನಲ್ಲಿ ಎಕಾನಮಿ ಮೋಡ್‌ನಲ್ಲಿ 80 ಕೀ.ಮೀ. ಅಂತೆಯೇ ಪವರ್ ಮೋಡ್‌ನಲ್ಲಿ 50 ಕೀ.ಮೀ. ವರೆಗೂ ರೇಂಜ್ ನೀಡಲಿದೆ.

ಹೀರೊದಿಂದ ಹೈ ಸ್ಪೀಡ್ ಇ-ಬೈಕ್ 'ಫೋಟಾನ್' ಬಿಡುಗಡೆ

ಅಂದ ಹಾಗೆ ಫೋಟಾನ್ ಮುಂದುಗಡೆ ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆಷನ್ ಮತ್ತು ಡಿಸ್ಕ್ ಬ್ರೇಕ್ ಹೊಂದಿರಲಿದೆ. ಆ್ಯಂಟಿ ಥೆಫ್ಟ್ ಅಲಾರ್ಮ್ ಮತ್ತು ಅತ್ಯಂತ ಶಕ್ತಿಶಾಲಿ ಸ್ಟೀಲ್ ಚಾಸೀ ಇನ್ನಷ್ಟು ಮೈಕಟ್ಟು ಒದಗಿಸಲಿದೆ. ಫೋಟಾನ್‌ಗೆ ಏರೋಡೈನಾಮಿಕ್ ವಿನ್ಯಾಸ ಕಲ್ಪಿಸಿಕೊಡುವುದರ ಸಲುವಾಗಿ ಹೀರೊ ಎಲೆಕ್ಟ್ರಿಕ್ ತನ್ನ ಆರ್ ಆಂಡ್ ಡಿ ಸೆಂಟರ್‌ನಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿತ್ತು. ಅಲ್ಲದೆ ಇತರ ಪ್ರಯಾಣಿಕ ಸ್ಕೂಟರ್‌ಗಳಂತೆ ವಿನ್ಯಾಸ ಕಾಪಾಡಿಕೊಳ್ಳುವುದರಲ್ಲೂ ಯಶಸ್ವಿಯಾಗಿದೆ.

ತಾಂತ್ರಿಕ ಮಾಹಿತಿ

ತಾಂತ್ರಿಕ ಮಾಹಿತಿ

ವೇಗ - ಗಂಟೆಗೆ 45 ಕೀ.ಮೀ.

ರೇಂಜ್ - ಪವರ್ ಮೋಡ್ - 50 ಕೀ.ಮೀ. ಎಕಾನಮಿ ಮೋಡ್ - 80 ಕೀ.ಮೀ. (ಒಮ್ಮೆ ಚಾರ್ಚ್ ಮಾಡಿಸಿದರೆ),

ಲೈಸನ್ಸ್/ರಿಜಿಸ್ಟ್ರೇಷನ್ - ಅನಿವಾರ್ಯ,

ಮೋಟಾರ್ ಔಟ್‌ಫುಟ್ (ವ್ಯಾಟ್) - 1500 ಡಬ್ಲ್ಯು ಬಿಎಲ್‌ಡಿಸಿ,

ಬ್ಯಾಟರಿ ವಿಧ - ವಿಆರ್‌ಎಲ್‌ಎ 33 ಎಎಚ್/ 48 ವ್ಯಾಟ್

ವೀಲ್ ಡೈಯಮೀಟರ್ - 10 ಇಂಚು x 3 ಇಂಚು ಸ್ಟೀಲ್ ಅಲಾಯ್

ಹೀರೊದಿಂದ ಹೈ ಸ್ಪೀಡ್ ಇ-ಬೈಕ್ 'ಫೋಟಾನ್' ಬಿಡುಗಡೆ

ಇದು ರಾತ್ರಿಯಲ್ಲೂ ಉತ್ತಮ ಗೋಚರಕ್ಕಾಗಿ ಪೊಲಿಕಾರ್ಬೋನೆಟ್ ಹೆಡ್‌ಲ್ಯಾಂಪ್ ಪಡೆದುಕೊಂಡಿದೆ. ಅಲ್ಲದೆ ವಿಆರ್‌ಎಲ್‌ಎ 33 ಎಎಚ್/48ವ್ಯಾಟ್ ಬ್ಯಾಟರಿ (1500 ಡಬ್ಲ್ಯು ಬಿಎಲ್‌ಡಿಸಿ) ಇರಲಿದೆ. ಸದ್ಯ ಫೋಟಾನ್ ಏಕೈಕ ಕಪ್ಪು ವರ್ಣದಲ್ಲಿ ಮಾತ್ರ ಲಭ್ಯವಾಗಲಿದೆ. ಇವೆಲ್ಲದಕ್ಕೂ ಮಿಗಿಲಾಗಿ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವಲ್ಲಿ ಸಂಸ್ಥೆಯು ಯಶ ಕಂಡಿದೆ.


Most Read Articles

Kannada
English summary
India's largest two wheeler manufacturer Hero MotoCorp. has its electric vehicle division called Hero Electric. They have launched a new and trendy electric scooter. Hero Electric has christened its new electric scooter as the 'Photon'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X