ಮಿಲಾನ್ ಆಟೋ ಶೋದಲ್ಲಿ ಪ್ರದರ್ಶನಕ್ಕೆ ಕವಾಸಕಿ 650 ಸನ್ನದ್ಧ

By Nagaraja

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಕಾಪಾಡಿಕೊಂಡಿರುವ ಕವಾಸಕಿ ಸೂಪರ್ ಬೈಕ್ ಮಗದೊಮ್ಮೆ ವಾಹನ ಪ್ರೇಮಿಗಳ ಮನಗೆಲ್ಲಲು ಸಜ್ಜಾಗುತ್ತಿದೆ. ಪ್ರಸಕ್ತ ಸಾಲಿನಲ್ಲೇ ಮಿಲನ್‌ನಲ್ಲಿ ನಡೆಯಲಿರುವ ಇಸಿಐಎಂಎ ಮೋಟಾರು ಶೋದಲ್ಲಿ ಹೊಸತಾದ ನಿಂಜಾ 650 ಪ್ರದರ್ಶನಗೊಳಿಸಲಿದೆ.

ಮಿಲಾನ್ ಮೋಟಾರು ಶೋ ಎಂದೇ ಪ್ರಖ್ಯಾತಿ ಪಡೆದಿರುವ ಇಸಿಐಎಂಎ ಆಟೋ ಶೋ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ವರದಿಗಳ ಪ್ರಕಾರ ಈ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ಈಗಿನ ತಲೆಮಾರಿಗಿಂತಲೂ ಹಗುರ ಭಾರದಲ್ಲಿ ನಿರ್ಮಿಸಲಿದೆ.

Kawasaki

ಜಾಗತಿಕ ಮಾರುಕಟ್ಟೆಯಲ್ಲಿ ಸ್ಮರ್ಧೆ ಜಾಸ್ತಿಯಾಗುತ್ತಿರುವಂತೆಯೇ ನಿಂಜಾ 650 ಪ್ರದರ್ಶನ ಗಮನಾರ್ಹವೆನಿಸಲಿದೆ. ಇನ್ನು ಭಾರತೀಯರು ಸಹ ಹೊಸ ನಿಂಜಾ ನಿರೀಕ್ಷಿಸಬಹುದಾಗಿದೆ. ಆದರೆ ಮುಂದಿನ ವರ್ಷವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ಹಾಗಿದ್ದರೂ ಹೊಸ ನಿಂಜಾ 650 ಈಗಿನ ಮಾದರಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಭಾರತದಲ್ಲಿ ಬಜಾಜ್ ಜೊತೆ ಪಾಲುದಾರಿಕೆ ಇರುವುದರಿಂದ ಬೇಗನೇ ಗ್ರಾಹಕರ ಬಳಿ ತಲುಪಲು ಕವಾಸಕಿಗೆ ಸಹಕಾರಿಯಾಗಲಿದೆ.

Most Read Articles

Kannada
English summary
The litre-class segment in India is not the most popular. However, the new generation of riders are opting for more tameable options. Kawasaki brought its Ninja 650 to India sometime ago, since then it has got just one change and is awaiting a facelift.
Story first published: Monday, August 25, 2014, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X