ಫ್ರಾನ್ಸ್‌ನಲ್ಲೇ ಉಳಿದುಕೊಳ್ಳಲಿರುವ ಪ್ಯೂಜೊ ಸ್ಕೂಟರ್: ಮಹೀಂದ್ರ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಫ್ರಾನ್ಸ್‌ನ ಐಕಾನಿಕ್ ಪ್ಯೂಜೊ ಸ್ಕೂಟರ್ ಶೇರನ್ನು ಭಾರತದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಖರೀದಿಸುವ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು.

ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ, "ಪ್ಯೂಜೊ ಸ್ಕೂಟರ್ ಫ್ರಾನ್ಸ್‌ನಲ್ಲೇ ಉಳಿದುಕೊಳ್ಳಲಿದೆ" ಎಂದಿದ್ದಾರೆ.


ಪ್ಯೂಜೊ ಶೇರನ್ನು ಮಹೀಂದ್ರ ಖರೀದಿಸುವ ಇರಾದೆಯ ಬೆನ್ನಲ್ಲೇ ಫ್ರಾನ್ಸ್‌ನಲ್ಲಿ ಉದ್ಯೋಗ ಕಡಿತವುಂಟಾಗಲಿದೆಯೆಂಬ ಆತಂಕವುಂಟಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹೀಂದ್ರ, ಸದ್ಯ ಫ್ರಾನ್ಸ್‌ನಲ್ಲಿರುವ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲಾಗುತ್ತಿಲ್ಲ. ಕ್ರಮೇಣ ಈ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂಬುದನ್ನು ಸೂಚಿಸಿದ್ದಾರೆ.

ಫ್ರಾನ್ಸ್‌ನ ರೆಡಿಯೋ ಚಾನೆಲ್‌ಗೆ ಇದೇ ಮೊದಲ ಬಾರಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ಆನಂದ್ ಮಹೀಂದ್ರ, "ಪ್ಯೂಜೊ ಸ್ಕೂಟರ್‌ನಲ್ಲಿ ಶೇಕಡಾ 51ರಷ್ಟು ಶೇರು ಪಡೆಯುದಕ್ಕೆ ಒಪ್ಪಿಕೊಂಡಿದ್ದು, ಫ್ರಾನ್ಸ್‌ನಲ್ಲಿರುವ ಪ್ಯೂಜೊ ಘಟಕದ ಅಭಿವೃದ್ಧಿಗೆ ಶಕ್ತಿ ತುಂಬಲಿದ್ದೇವೆ" ಎಂದಿದ್ದಾರೆ.

mahindra

ಹಾಗೆಯೇ ಮುಂದಿನ ಎರಡು ವರ್ಷಗಳಿಗೆ ಯಾವುದೇ ಉದ್ಯೋಗ ಕಡಿತವುಂಟಾಗುವುದಿಲ್ಲವೆಂಬ ಭರವಸೆ ನೀಡಿದ್ದಾರೆ. ಹಾಗಿದ್ದರೂ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2015ರಲ್ಲಿ ತಾತ್ಕಾಲಿಕ ನಿರ್ಗಮನದ ಭಾಗವಾಗಿ 90ರಷ್ಟು ಉದ್ಯೋಗ ಕಡಿತ ಮಾಡಲು ಸಂಸ್ಥೆ ನಿರ್ಧರಿಸಿದೆ. ಫ್ರಾನ್ಸ್‌ನ ಮ್ಯಾಡ್ಯುರೆ ಘಟಕದಲ್ಲಿ 488ರಷ್ಟು ನೌಕಕರು ಕೆಲಸ ಮಾಡುತ್ತಿದ್ದಾರೆ.

ಚೀನಾದಲ್ಲಿರುವ ಜಂಟಿ ಕಾರ್ಯಾಚರಣೆಯ ಘಟಕ ಸೇರಿದಂತೆ 800 ನೌಕರರು ಪ್ಯೂಜೊ ಸ್ಕೂಟರ್ಸ್‌ನಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ 3,000ರಷ್ಟು ವಾಣಿಜ್ಯ ಕೇಂದ್ರಗಳಿವೆ. ಇವುಗಳಲ್ಲಿ ಬಹುತೇಕ ಯುರೋಪ್‌ನಲ್ಲಿದೆ.

1898ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವದ ಅತಿ ಪುರಾತನ ದ್ವಿಚಕ್ರ ಬ್ರಾಂಡ್ ಆಗಿರುವ ಪ್ಯೂಜೊ, ಆರ್ಥಿಕ ಸಂಕಷ್ಟದ ನಡುವೆಯು 2017ರ ವೇಳೆಯಾಗುವಾಗ ಹೊಸ ಉತ್ಪನ್ನ ಪರಿಚಯಿಸುವ ಯೋಜನೆ ಹೊಂದಿದೆ.

Most Read Articles

Kannada
English summary
Indian automobile giant Mahindra was recently in news as they are purchasing a major stake in a French company. Mahindra will be acquiring a controlling stake in Peugeot Scooters. The Indian manufacturer has been on a constant hunt to find an international connection for its two-wheeler operations.
Story first published: Friday, October 24, 2014, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X