ಯುಎಂ ರೆನೆಗೇಡ್ ತ್ರಿವಳಿ ಕ್ರೂಸರ್ ಬೈಕ್‌ಗಳ ಅವತಾರ!

By Nagaraja

ಅಮೆರಿಕ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯುಎಂ ಮೋಟಾರ್ ಸೈಕಲ್ಸ್, ರೆನೆಗೇಡ್ ಕ್ರೂಸರ್ ಶ್ರೇಣಿಯ ತ್ರಿವಳಿ ಬೈಕ್ ಗಳನ್ನು ಪ್ರದರ್ಶಿಸುವ ಮೂಲಕ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋವನ್ನು ಬರಮಾಡಿಕೊಂಡಿದೆ.

ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡ ಯುಎಂ ಬೈಕ್ ಗಳು ಇಂತಿದೆ:

  • ಯುಎಂ ರೆನೆಗೇಡ್ ಸ್ಪೋರ್ಟ್ ಎಸ್,
  • ಯುಎಂ ರೆನೆಗೇಡ್ ಕಮಾಂಡೊ,
  • ಯುಎಂ ರೆನೆಗೇಡ್ ಕ್ಲಾಸಿಕ್

ಯುಎಂ ರೆನೆಗೇಡ್


ಬೆಲೆ ಮಾಹಿತಿ

  • ಯುಎಂ ರೆನೆಗೇಡ್ ಕಮಾಂಡೊ: 1.59 ಲಕ್ಷ ರು.
  • ಯುಎಂ ರೆನೆಗೇಡ್ ಸ್ಪೋರ್ಟ್ ಎಸ್: 1.49 ಲಕ್ಷ ರು.
  • ಯುಎಂ ರೆನೆಗೇಡ್ ಕ್ಲಾಸಿಕ್: 1.69 ಲಕ್ಷ ರು.

ಭಾರತೀಯ ಕ್ರೂಸರ್ ಬೈಕ್ ಮಾರುಕಟ್ಟೆಯನ್ನು ಗಮನಿಸಿದಾಗ ಇದುವರೆಗೆ ಅಷ್ಟೇನೂ ಬೇಡಿಕೆ ಕಂಡುಬಂದಿಲ್ಲ. ಈ ವಿಭಾಗಕ್ಕೆ ಕಾಲಿಟ್ಟಿರುವ ಅನೇಕ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ಹಿನ್ನಡೆ ಅನುಭವಿಸಿದ್ದವು. ಹಾಗಿರುವಾಗ ಸ್ಪರ್ಧಾತ್ಮಕ ಬೆಲೆಗಳಲ್ಲಿ ಎಂಟ್ರಿ ಕೊಟ್ಟಿರುವ ರೆನೆಗೇಡ್, ದೇಶದ ಐಕಾನಿಕ್ ರಾಯಲ್ ಎನ್ ಫೀಲ್ಡ್ ಶ್ರೇಣಿಯ ಬೈಕ್ ಗಳಿಗೆ ಸೆಡ್ಡು ಒಡ್ಡಲಿದೆ ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ.

ಎಂಜಿನ್ ಮತ್ತು ಗೇರ್ ಬಾಕ್ಸ್
ಎಲ್ಲ ಮೂರು ರೆನೆಗೇಡ್ ಕ್ರೂಸರ್ ಬೈಕ್ ಗಳು 279 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 21.8 ಎನ್‌ಎಂ ತಿರುಗುಬಲದಲ್ಲಿ 25 ಅಶ್ವಶಕ್ತಿ (8000 ಆರ್‌ಪಿಎಂ) ಉತ್ಪಾದಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಯುಎಂ ರೆನೆಗೇಡ್


ಸಸ್ಪೆನ್ಷನ್ ಮತ್ತು ಬ್ರೇಕ್
ತ್ರಿವಳಿ ರೆನೆಗೇಡ್ ಮಾದರಿಗಳು ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಪಡೆಯಲಿದೆ. ಅದೇ ರೀತಿ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಕಂಡುಬರಲಿದೆ.

ವಿನ್ಯಾಸ
ಕ್ರೂಸರ್ ಬೈಕ್ ಸ್ನೇಹಿಗಳಿಗೆ ಅಮೋಘ ಚಾಲನಾ ನೀಡಲಿರುವ ರೆನೆಗೇಡ್ ಬೈಕ್ ಗಳು ವಿಶಾಲವಾದ ಹ್ಯಾಂಡಲ್ ಬಾರ್ ಹಾಗೂ ಕಡಿಮೆ ಎತ್ತರವನ್ನು ಕಾಪಾಡಿಕೊಂಡಿದೆ. ಇದು ದೂರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

ಈ ಪೈಕಿ ಕಮಾಂಡೊ ನೆಕ್ಡ್ ವಿನ್ಯಾಸವನ್ನು ಕಾಪಾಡಿಕೊಂಡಿದ್ದರೆ, ಸ್ಪೋರ್ಟ್ ಎಸ್ ಹೆಡ್ ಲ್ಯಾಂಪ್ ಮೇಲ್ಗಡೆಯಾಗಿ ಲೋಹದ ಆವರಣ ಕಂಡುಬರಲಿದೆ. ಅದೇ ರೀತಿ ಕ್ಲಾಸಿಕ್ ಮಾದರಿಯಲ್ಲಿ ವಿಂಡ್ ಶೀಲ್ಡ್ ಪ್ರಮುಖ ಆಕರ್ಷಣೆಯಾಗಲಿದೆ.

ಯುಎಂ ರೆನೆಗೇಡ್


ಚಕ್ರಗಳು
ರೆನೆಗೇಡ್ ಕಮಾಂಡೊ ಹಾಗೂ ಕ್ಲಾಸಿಕ್ ಮಾದರಿಗಳು ಸ್ಪೋಕ್ಡ್ ವೀಲ್ ಅಂತೆಯೇ ರೆನೆಗೇಡ್ ಸ್ಪೋರ್ಟ್ ಎಸ್ ಅಲಾಯ್ ವೀಲ್ ಗಳನ್ನು ಗಿಟ್ಟಿಸಿಕೊಂಡಿದೆ.

ವಿತರಣೆ ಮತ್ತು ಪ್ರತಿಸ್ಪರ್ಧಿಗಳು
ಈಗಾಗಲೇ ಮಾರಾಟಕ್ಕೆ ಲಭ್ಯವಾಗಿರುವ ಯುಎಂ ರೆನೆಗೇಡ್ ಕ್ರೂಸರ್ ಬೈಕ್ ಗಳು ದೇಶದ ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ನಿಂದ ಈಗಷ್ಟೇ ಬಿಡುಗಡೆಯಾಗಿರುವ ಹಿಮಾಲಯನ್ ಸೇರಿದಂತೆ ಇತರ ಶ್ರೇಣಿಯ ಮಾದರಿಗಳಿಗೂ ಪೈಪೋಟಿಯನ್ನು ಒಡ್ಡಲಿದೆ.

Most Read Articles

Kannada
English summary
Renegade Commando Cruiser Leads UM Motorcycles's Raid Into India
Story first published: Saturday, February 6, 2016, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X