ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

By Nagaraja

ಹೀರೊದ ಜನಪ್ರಿಯ ಬೈಕ್ ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್ ಹಾಕಿರುವ ಹೋಂಡಾ ಆಕ್ಟಿವಾ ಅಗ್ರಸ್ಥಾನಕ್ಕೇರಿದೆ. 2016ನೇ ಸಾಲಿನಲ್ಲಿ ಸತತವಾಗಿ ಏಳನೇ ತಿಂಗಳಿನಲ್ಲೂ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೋಂಡಾ ಆಕ್ಟಿವಾ, ಹೀರೊ ಸ್ಪ್ಲೆಂಡರ್ 17 ವರ್ಷಗಳ ಜೈತ್ರಯಾತ್ರೆಗೆ ಇತಿಶ್ರೀ ಹಾಡಿದೆ.

2016 ಜುಲೈ ತಿಂಗಳಲ್ಲಿ 2,56,173 ಯುನಿಟ್ ಗಳ ಮಾರಾಟ ದಾಖಲಿಸಿರುವ ಹೋಂಡಾ ಆಕ್ಟಿವಾ ಒಟ್ಟು ಮಾರಾಟದ ಶೇಕಡಾ 38ರಷ್ಟು ಕೊಡುಗೆಯನ್ನು ಸಲ್ಲಿಸಿದೆ.

ಆಕ್ಟಿವಾ 3ಜಿ ಮೈಲುಗಲ್ಲು

ಆಕ್ಟಿವಾ 3ಜಿ ಮೈಲುಗಲ್ಲು

2016 ಜನವರಿಯಿಂದ ಜುಲೈ ವರೆಗಿನ ಆರು ತಿಂಗಳುಗಳ ಅವಧಿಯಲ್ಲಿ ಆಕ್ಟಿವಾ ನಂ.1 ಸ್ಥಾನಕ್ಕೇರಿದೆ. ತನ್ಮೂಲಕ ಹೀರೊ ಸ್ಪ್ಲೆಂಡರ್ 17 ವರ್ಷಗಳ ಏಕಾಧಿಕಾರ ಕೊನೆಗೊಂಡಿದೆ.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ಒಂದು ವರ್ಷದ ಅವಧಿಯಲ್ಲಿ ಆಕ್ಟಿವಾ ಮಾರಾಟವು 2.27 ಲಕ್ಷ ಯುನಿಟ್ ಗಳಿಗೆ ಹೆಚ್ಚಳಗೊಂಡಿದ್ದು, ಈ ಮೂಲಕ 2016 ಜನವರಿಯಿಂದ ಜುಲೈ ತಿಂಗಳ ಅವಧಿಯಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಗಿಂತಲೂ 19,910 ಯುನಿಟ್ ಗಳ ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ತಿಂಗಳಿಂದ ತಿಂಗಳಿಗೆ ಸ್ಪ್ಲೆಂಡರ್ ನಡುವಣ ಅಂತರ ಹೆಚ್ಚುತ್ತಲೇ ಇದ್ದು, ಜುಲೈ ತಿಂಗಳಲ್ಲಿ ಆಕ್ಟಿವಾಗ 58,413 ಯುನಿಟ್ ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

2001ನೇ ಇಸವಿಯಲ್ಲಿ ಮಾರಾಟ ಆರಂಭಿಸಿರುವ ಆಕ್ಟಿವಾ, 2016 ಜುಲೈ ತಿಂಗಳಲ್ಲಿ 2,56,173 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಸರ್ವಕಾಲಿತ ಶ್ರೇಷ್ಠ ತಿಂಗಳ ಮಾರಾಟ ದಾಖಲೆಯನ್ನು ಬರೆದಿದೆ.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ಆಕ್ಟಿವಾ ಭಾರತಕ್ಕೆ ಕಾಲಿಟ್ಟ ಮೊದಲ ವರ್ಷದಲ್ಲೇ 55,000 ಯುನಿಟ್ ಗಳ ಮಾರಾಟ ದಾಖಲಿಸಿತ್ತು. ತದಾ ಬಳಿಕ 2005ರಲ್ಲಿ ಒಂದು ದಶಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿತ್ತು.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

2009ರಲ್ಲಿ ಮಾಸಿಕ 50,000 ಯುನಿಟ್ ಗಳ ಮಾರಾಟ ಗೆರೆಯನ್ನು ದಾಟಿದ್ದ ಆಕ್ಟಿವಾ 2012ರಲ್ಲಿ ಮಾಸಿಕ ಒಂದು ಲಕ್ಷಕ್ಕೂ ಹೆಚ್ಚು ಮಾರಾಟ ದಾಖಲಿಸಿತ್ತು.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

2013ರಲ್ಲಿ ಹೋಂಡಾ ಇಕೊ ತಂತ್ರಜ್ಞಾನದ ಮೂಲಕ ಪರಿಚಯವಾಗಿದ್ದ ಆಕ್ಟಿವಾ ಮಾಸಿಕ 1.5 ಯುನಿಟ್ ಗಳ ಮಾರಾಟ ಗುರಿಯನ್ನು ಮುಟ್ಟಿತ್ತು.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ಇಲ್ಲಿಗೂ ನಿಲ್ಲದ ಆಕ್ಟಿವಾ ಓಟ 2014ರಲ್ಲಿ ಮಾಸಿಕ ಎರಡು ಲಕ್ಷವನ್ನು ಬಳಿಕ 2015ರಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲೇ ಒಂದು ಮಿಲಿಯನ್ ಮಾರಾಟವನ್ನು ತಲುಪಿತ್ತು.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ಅಷ್ಟೇ ಯಾಕೆ 2016 ನೇ ಸಾಲಿನಲ್ಲಿ ಮಾಸಿಕ 2.5 ಲಕ್ಷ ಯುನಿಟ್ ಗಳ ಮಾರಾಟವನ್ನು ತಲುಪಿದ್ದು, ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ.

ಆಕ್ಟಿವಾ ಮಾರಾಟ ಅಂಕಿಪಟ್ಟಿ

ಆಕ್ಟಿವಾ ಮಾರಾಟ ಅಂಕಿಪಟ್ಟಿ

2016 ಜನವರಿ: 1,98,148

2016 ಫೆಬ್ರವರಿ: 1,77,475

2016 ಮಾರ್ಚ್: 2,07,270

2016 ಎಪ್ರಿಲ್: 1,73,087

2016 ಮೇ: 1,87,827

2016 ಜೂನ್: 1,96,913

2016 ಜುಲೈ: 2,25,704

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

ಸ್ಪ್ಲೆಂಡರ್ 15 ವರ್ಷಗಳ ಮಾಸಿಕ ಮಾರಾಟ ಓಡಾಟಕ್ಕೆ ಕೊನೆ ಹಾಡಿದ್ದ ಆಕ್ಟಿವಾ 2014 ಮಾರ್ಚ್ ತಿಂಗಳ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿತ್ತು. ತದಾ ಬಳಿಕ ಇದೇ ಸಾಧನೆಯನ್ನು 2015ನೇ ಸಾಲಿನಲ್ಲಿ ಐದು ಬಾರಿ ಪುನರಾವರ್ತಿಸಿತ್ತು.

ಸ್ಪ್ಲೆಂಡರ್ 17 ವರ್ಷಗಳ ಏಕಸ್ವಾಮ್ಯತೆಗೆ ಬ್ರೇಕ್; ಹೋಂಡಾ ಆಕ್ಟಿವಾ ನಂ.1

2016ನೇ ಸಾಲಿನಲ್ಲಂತೂ ತನ್ನ ಪ್ರತಿಸ್ಪರ್ಧಿಯನ್ನು ತಿರುಗಿ ನೋಡದ ಆಕ್ಟಿವಾ ಸತತವಾಗಿ ಏಳನೇ ತಿಂಗಳಿನಲ್ಲೂ ಅಗ್ರಪಟ್ಟವನ್ನು ಆಲಂಕರಿಸಿದೆ.

ಆಕ್ಟಿವಾ ವಿವಿಧ ಮಾದರಿಗಳು

ಆಕ್ಟಿವಾ ವಿವಿಧ ಮಾದರಿಗಳು

ಆಕ್ಟಿವಾ 125,

ಆಕ್ಟಿವಾ ತ್ರಿಜಿ

ಆಕ್ಟಿವಾ ಐ

Most Read Articles

Kannada
English summary
Honda Activa Contributes To The Overall Industry Sales Charts
Story first published: Wednesday, August 31, 2016, 10:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X