ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

By Nagaraja

ಈಗಷ್ಟೇ ತನ್ನ ಜನಪ್ರಿಯ ಡ್ರೀಮ್ ಯುಗಾ ಪ್ರಯಾಣಿಕ ಬೈಕ್ ಗೆ ಹೊಸ ರಂಗು ನೀಡಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯೀಗ ಮಗದೊಂದು ಕ್ರೀಡಾ ಬೈಕ್ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೋಂಡಾದ ಅತಿ ನೂತನ ಬೈಕ್ ಗಳಲ್ಲಿ ಒಂದಾಗಿರುವ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಹೊಸ ಬಣ್ಣಗಳಲ್ಲಿ ಕಂಗೊಳಿಸಲಿದ್ದು, ಮಾರ್ಸ್ ಆರೆಂಜ್ ಮತ್ತು ಸ್ಟ್ರೈಕಿಂಗ್ ಗ್ರೀನ್ ಗಳೆಂಬ ಎರಡು ಬಣ್ಣಗಳ ಸೇರ್ಪಡೆಯಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಹೋಂಡಾ ಸಿಬಿ ಹಾರ್ನೆಟ್ 160ಆರ್ ಆಕರ್ಷಕ ಬಣ್ಣಗಳು ಮಾತ್ರವಲ್ಲದೆ ವಿಶಿಷ್ಟ ಬಾಡಿ ಗ್ರಾಫಿಕ್ಸ್ ಕೂಡಾ ಇರಲಿದೆ. ಇದು ಬೈಕ್ ಪ್ರೇಮಿಗಳಲ್ಲಿ ಹೆಚ್ಚಿನ ಉತ್ಸಾಹವನ್ನು ಮೂಡಿಸಲಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಹೋಂಡಾ ಸಿಬಿ ಹಾರ್ನೆಟ್ 160ಆರ್ ಸ್ಟ್ಯಾಂಡರ್ಡ್ ಹಾಗೂ ಸಿಬಿಎಸ್ ಆವೃತ್ತಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 81,413 ಹಾಗೂ 85,912 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್, ಬಜಾಜ್ ಪಲ್ಸರ್ 150, ಯಮಹಾ ಎಫ್ ಝಡ್-ಎಸ್ ವರ್ಷನ್ 2.0 ಹಾಗೂ ಸುಜುಕಿ ಜಿಕ್ಸರ್ ಮುಂತಾದ ಬೈಕ್ ಗಳಿಗೆ ಪೈಪೋಟಿಯನ್ನು ಒಡ್ಡುತ್ತಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಹೊಸ ಅಂದ ಚಂದದಿಂದ ಗೋಚರಿಸುವ ಹೋಂಡಾ ಸಿಬಿ ಹಾರ್ನೆಟ್ 160ಆರ್, ಎಲ್ಲ ಕಪ್ಪು ವರ್ಣದ ಥೀಮ್ ಜೊತೆಗೆ ವಿಶೇಷ ಆವೃತ್ತಿಯ ಸ್ಟ್ರೈಕಿಂಗ್ ಗ್ರೀನ್ ಹಾಗೂ ಮಾರ್ಸ್ ಆರಂಜ್ ಬಣ್ಣಗಳನ್ನು ಗಿಟ್ಟಿಸಿಕೊಂಡಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಸೆಲ್ಫ್ ಬಾಡಿ ಗ್ರಾಫಿಕ್ಸ್ ಮತ್ತು ಅಲಾಯ್ ಚಕ್ರಗಳಲ್ಲಿ ದೇಹ ಬಣ್ಣಕ್ಕೆ ತಕ್ಕುದಾದ ಪಟ್ಟಿಯನ್ನು ಕಾಣಬಹುದಾಗಿದೆ. ಇನ್ನುಳಿದಂತೆ ಬ್ಲ್ಯಾಕ್ ಫಿನಿಶ್ ಅಂಡರ್ ಸೀಟು ಪ್ಯಾನೆಲ್, ಗ್ರಾಬ್ ರೈಲ್, ಬದಿಯಲ್ಲಿ ಏರ್ ಸ್ಕೂಪ್ ಮತ್ತು ಎಕ್ಸಾಸ್ಟ್ ಮಫ್ಲರ್ ಹೀಟ್ ಕವರ್ ಗಳಿರಲಿದೆ. ಅಂತೆಯೇ ಐಚ್ಛಿಕ ಸಿಲ್ವರ್ ಸ್ಟ್ರಿಪ್ ಗಳ ಆಯ್ಕೆಯೂ ಇರುತ್ತದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

162.71 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಬಿ ಹಾರ್ನೆಟ್ 160 ಆರ್, 14.76 ಎನ್ ಎಂ ತಿರುಗುಬಲದಲ್ಲಿ 15.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆದಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಮೊನೊಶಾಕ್ ರಿಯರ್ ಸಸ್ಪೆನ್ಷನ್, ಡ್ಯುಯಲ್ ಡಿಸ್ಕ್ ಬ್ರೇಕ್ ಜೊತೆ ಕಾಂಬಿ ಬ್ರೇಕಿಂಗ್ ವ್ಯವಸ್ಥೆಯನ್ನು ಪಡೆದಿದೆ. ಇನ್ನು ಸ್ಟ್ಯಾಂಡರ್ಡ್ ವೆರಿಯಂಟ್ ನಲ್ಲಿ ಡ್ರಮ್ ಬ್ರೇಕ್ ಸಹ ಇರುತ್ತದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿಶೇಷ ಆವೃತ್ತಿ ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸಾಲ್, ಎಕ್ಸ್ ಆಕಾರದ ಎಲ್ ಇಡಿ ಟೈಲ್ ಲೈಟ್, ಹಿಂದುಗಡೆ ಅಗಲವಾದ ಚಕ್ರ, ಶಕ್ತಿಯುತ ಟ್ಯಾಂಕ್ ಇತ್ಯಾದಿ ವಿಶೇಷತೆಗಳನ್ನು ಪಡೆದಿದೆ.

Most Read Articles

Kannada
English summary
Honda Launches CB Hornet 160R In Mars Orange & Striking Green Colours
Story first published: Wednesday, August 17, 2016, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X