ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ಕಳಪೆ ಮಾರಾಟದ ಹಿನ್ನಲೆಯಲ್ಲಿ ಹೋಂಡಾ ಸಿಬಿ ಯೂನಿಕಾರ್ನ್ 160 ಬೈಕ್ ಮಾರಾಟವನ್ನು ನಿಲುಗಡೆಗೊಳಿಸುವ ಸಾಧ್ಯತೆಯಿದೆ.

By Nagaraja

ಕಳಪೆ ಮಾರಾಟದ ಹಿನ್ನಲೆಯಲ್ಲಿ ಹೋಂಡಾ ಸಿಬಿ ಯೂನಿಕಾರ್ನ್ 160 ಬೈಕ್ ಮಾರಾಟವನ್ನು ನಿಲುಗಡೆಗೊಳಿಸುವ ಸಾಧ್ಯತೆಯಿದೆ. ಪ್ರಮುಖವಾಗಿಯೂ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಯೂನಿಕಾರ್ನ್ ಬೈಕ್ ಅಭಿವೃದ್ಧಿಪಡಿಸಿತ್ತು.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

2004ನೇ ಸಾಲಿನಲ್ಲಿ ಆರಂಭವಾದ ಯೂನಿಕಾರ್ನ್ ಯಾತ್ರೆಯು 150 ಸಿಸಿ ಯಿಂದ ಆರಂಭವಾಗಿ 160 ಸಿಸಿ ವರೆಗೂ ಬಂದು ನಿಂತಿದೆ. ಈ ಪೈಕಿ 160 ಮಾದರಿಯು ಅಷ್ಟೇನು ಸದ್ದು ಮಾಡುತ್ತಿಲ್ಲ.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

2016 ಅಕ್ಟೋಬರ್ ತಿಂಗಳಲ್ಲಿ ಸಿಬಿ ಯೂನಿಕಾರ್ನ್ 160 ಮಾದರಿಯು ಕೇವಲ 26 ಯುನಿಟ್ ಗಳಷ್ಟೇ ಮಾರಾಟವನ್ನು ಕಂಡಿದೆ. ಇದು ಸಂಸ್ಥೆಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ದೆಹಲಿ ಎಕ್ಸ್ ಶೋ ರೂಂ ಬೆಲೆ 75,184 ರು.ಗಳಲ್ಲಿ ಬಿಡುಗಡೆಗೊಂಡಿದ್ದ ಸಿಬಿ ಯೂನಿಕಾರ್ನ್, ಬರ ಬರುತ್ತಾ ಭಾರಿ ಹಿನ್ನಡೆಯನ್ನು ಅನುಭವಿಸಿತ್ತು. ಇದರಿಂದಾಗಿ ಸಿಬಿ ಯೂನಿಕಾರ್ನ್ 150 ಮಾದರಿಯನ್ನು ಮರು ಬಿಡುಗಡೆಗೊಳಿಸುವುದು ಅನಿವಾರ್ಯವೆನಿಸಿತ್ತು.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ಹಿಂದೊಮ್ಮೆ ಅತ್ಯಾಧುನಿಕ ಹಾಗೂ ಹೆಚ್ಚು ಇಂಧನ ಸಾಮರ್ಥ್ಯವುಳ್ಳ 160 ಸಿಸಿ ಯೂನಿಕಾರ್ನ್ ಮಾದರಿಗೆ ಹಾದಿ ಬಿಟ್ಟು ಕೊಡುವ ನಿಟ್ಟಿನಲ್ಲಿ ಹೋಂಡಾ ಯೂನಿಕಾರ್ನ್ 150 ಸಿಸಿ ಆವೃತ್ತಿಯು ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ಆದರೆ 160 ಮಾದರಿಗೆ ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ 2016 ಜುಲೈ ತಿಂಗಳಲ್ಲಿ ಯೂನಿಕಾರ್ನ್ 150 ಸಿಸಿ ಮಾದರಿಯು ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ಇನ್ನೊಂದೆಡೆ 160 ಸಿಸಿ ವಿಭಾಗದಲ್ಲಿ ಸಿಬಿ ಹಾರ್ನೆಟ್ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ. ಇದು ಕೂಡಾ ಯೂನಿಕಾರ್ನ್ 160 ಮಾರಾಟ ಕುಸಿತಕ್ಕೆ ಕಾರಣವಾಗಿದೆ.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

149 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಹೋಂಡಾ ಯೂನಿಕಾರ್ನ್, 12.84 ಎನ್ ಎಂ ತಿರುಗುಬಲದಲ್ಲಿ 13.14 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿದೆ.

ಕಳಪೆ ಮಾರಾಟ; ಹೋಂಡಾ ಸಿಬಿ ಯೂನಿಕಾರ್ನ್ 160 ಮಾರಾಟಕ್ಕೆ ಬ್ರೇಕ್?

ಅತ್ತ 2014 ವರ್ಷಾಂತ್ಯದಲ್ಲಿ ಹೊಸ ಸ್ವರೂಪದೊಂದಿಗೆ ಬಿಡುಗಡೆಗೊಂಡಿದ್ದ ಯೂನಿಕಾರ್ನ್ 160, ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್ ಗಳು ಮಾರಾಟಗೊಂಡಿದೆ. ಇದರಲ್ಲಿರುವ 163 ಸಿಸಿ ಎಂಜಿನ್ 14.6 ತಿರುಗುಬಲದಲ್ಲಿ 14.5 ಅಶ್ವಶಕ್ತಿ ಉತ್ಪಾದಿಸುತ್ತದೆ.

Most Read Articles

Kannada
English summary
Honda CB Unicorn 160 Could Be Discontinued, Owing To Sales
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X