ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

ಇಟಲಿಯ ಐಕಾನಿಕ್ ಹಾಗೂ ಅತಿ ದುಬಾರಿ ಮೊಟೊ ಗುಝಿ ಬೈಕ್ ಗಳು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ.

By Nagaraja

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಮೊಟೊ ಗುಝಿ ಬೈಕ್ ಗಳು ಭಾರತಕ್ಕೆ ಅಬ್ಬರದ ಎಂಟ್ರಿಯನ್ನು ನೀಡಿದೆ. ಈ ಸಂಬಂಧ ಘೋಷಣೆ ಮಾಡಿರುವ ಮೊಟೊ ಗುಝಿ ಮಾತೃಸಂಸ್ಥೆ ಪಿಯಾಜಿಯೊ ಇಂಡಿಯಾ, ಅತಿ ದುಬಾರಿ ಮೊಟೊ ಗುಝಿ ವಿ9 ಮತ್ತು ಎಂಜಿಎಕ್ಸ್ 21 ಮಾದರಿಗಳನ್ನು ಬಿಡುಗಡೆ ಮಾಡಿರುವುದಾಗಿ ಖಚಿತಪಡಿಸಿದೆ.

ಭಾರತದಲ್ಲಿ ಬಿಡುಗಡೆಯಾದ ಮೊಟೊ ಗುಝಿ ಬೈಕ್ ಗಳು ಇಂತಿದೆ:

ಭಾರತದಲ್ಲಿ ಬಿಡುಗಡೆಯಾದ ಮೊಟೊ ಗುಝಿ ಬೈಕ್ ಗಳು ಇಂತಿದೆ:

  • ಮೊಟೊ ಗುಝಿ ವಿ9 ರೋಮರ್
  • ಮೊಟೊ ಗುಝಿ ವಿ9 ಬೊಬರ್
  • ಮೊಟೊ ಗುಝಿ ಎಂಜಿಎಕ್ಸ್-21 ಫ್ಲೈಯಿಂಗ್ ಫಾರ್ಟ್ರೆಸ್
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    • ಮೊಟೊ ಗುಝಿ ವಿ9 ರೋಮರ್: 13.60 ಲಕ್ಷ ರು.
    • ಮೊಟೊ ಗುಝಿ ವಿ9 ಬೊಬರ್: 13.60 ಲಕ್ಷ ರು.
    • ಮೊಟೊ ಗುಝಿ ಎಂಜಿಎಕ್ಸ್-21 ಫ್ಲೈಯಿಂಗ್ ಫಾರ್ಟ್ರೆಸ್: 27.78 ಲಕ್ಷ ರು.
    • ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಮೊಟೊ ಗುಝಿ ಯುರೋಪ್ ನ ಅತ್ಯಂತ ಹಳೆಯದಾದ ಮೋಟಾರ್ ಸೈಕಲ್ ನಿರ್ಮಾಣ ಸಂಸ್ಥೆಯಾಗಿದೆ. ಇದನ್ನು 1921 ಇಸವಿಯಲ್ಲಿ ಸ್ಥಾಪಿಸಲಾಯಿತು.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಮೊಟೊ ಗುಝಿ ದುಬಾರಿ ಬೈಕ್ ಗಳು ಪುಣೆ, ಚೆನ್ನೈ, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊ ಸಂಸ್ಥೆಯ ಎಕ್ಸ್ ಕ್ಲೂಸಿವ್ ಮೊಟೊಪ್ಲೆಕ್ಸ್ ಶೋ ರೂಂ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಭಾರತಲ್ಲಿ ರೋಮರ್ ಮತ್ತು ಬೊಬರ್ ಎಂಬ ಎರಡು ವೆರಿಯಂಟ್ ಗಳಲ್ಲಿ ಮೊಟೊ ಗುಝಿ ವಿ9 ಲಭ್ಯವಾಗಲಿದೆ. ಈ ಪೈಕಿ ರೋಮರ್, ಮೊಟೊ ಗುಝಿ ನೆವಡಾದ ಉತ್ತರಾಧಿಕಾರಿಯಾಗಿರಲಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಎರಡು ವಿ9 ಬೈಕ್ ಗಳು 850 ಸಿಸಿ ಟು ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದೆ. ಹಾಗೆಯೇ ಬೊಬರ್ ಸಂಪೂರ್ಣ ಕಪ್ಪು ಮೈ ವರ್ಣವನ್ನು ಪಡೆದಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಹೊಂದಾಣಿಸಬಹುದಾದ ಟ್ರಾಕ್ಷನ್ ಕಂಟ್ರೋಲ್, ಇಂಮೊಬಿಲೈಜರ್ ಮತ್ತು ಯುಎಸ್ ಬಿ ಪೋರ್ಟ್ ವ್ಯವಸ್ಥೆಯಿರಲಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಇನ್ನೊಂದೆಡೆ ದೂರ ಪ್ರಯಾಣ ಹೊರಡುವ ಸಾಹಸ ಸವಾರಿಗಳನ್ನು ಮೊಟೊ ಗುಜಿ ಎಂಜಿಎಕ್ಸ್ 21 ಗುರಿಯಿರಿಸಿಕೊಂಡಿದೆ. ಇದು 1400 ಸಿಸಿ 90 ಡಿಗ್ರಿ ಟ್ರಾನ್ಸ್ ವರ್ಸ್ ವಿ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಮೊಟೊ ಗುಝಿ ಎಂಜಿಎಕ್ಸ್ 21 ಐಕಾನಿಕ್ ಬೈಕ್ ಸಹ ಎಬಿಎಸ್, ಹೊಂದಾಣಿಸಬಹುದಾದ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ರೈಡ್ ಬೈ ವೈರ್ ಥ್ರಾಟಲ್ ತಂತ್ರಜ್ಞಾನಗಳನ್ನು ಪಡೆಯಲಿದೆ.

      ದೇಶಕ್ಕೆ 30 ಲಕ್ಷ ದುಬಾರಿಯ ಮೊಟೊ ಗುಝಿ ಬೈಕ್ ಗಳ ಅಬ್ಬರದ ಎಂಟ್ರಿ

      ಪ್ರಸ್ತುತ ಬೈಕ್ ಮುಂದುವರಿದ ಇನ್ಸ್ಟ್ರಮೆಂಟೇಷನ್ ಪ್ಯಾನೆಲ್ ಮತ್ತು ಮನರಂಜನಾ ವ್ಯವಸ್ಥೆಯನ್ನು ಗಿಟ್ಟಿಸಿಕೊಂಡಿದೆ. ಅಂದ ಹಾಗೆ ಈ ಎಲ್ಲ ಬೈಕ್ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ (ಸಿಬಿಯು) ದೇಶವನ್ನು ತಲುಪಲಿದೆ.

Most Read Articles

Kannada
English summary
Moto Guzzi Launches The V9 & MGX-21 In India, Exclusively At Motoplex
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X