ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

By Nagaraja

ಟಾರ್ಕ್ ಮೋಟಾರ್ ಸೈಕಲ್ಸ್ ನಿರ್ಮಿಸಿರುವ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಬೈಕ್ 'ಟಿ6ಎಕ್ಸ್' ದೇಶದ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಟಾರ್ಕ್ ಮೋಟಾರ್ ಸೈಕಲ್ಸ್ ಟಿ6ಎಕ್ಸ್ ಪ್ರವೇಶ ಪಡೆದಿದೆ.

ಅನೇಕ ವೈಶಿಷ್ಟ್ಯಗಳಿಂದ ಕೂಡಿರುವ ಟಾರ್ಕ್ ಟಿ6ಎಕ್ಸ್ ಬೈಕ್ 1.24,999 ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಎಲೆಕ್ಟ್ರಿಕ್ ಬೈಕ್ ಆಗಿರುವ ಹೊರತಾಗಿಯೂ ಒಂದು ಬೈಕ್ ಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿರುವುದರ ಹಿಂದಿನ ಶ್ರೇಯ ಸಂಸ್ಥೆಗೆ ಸಲ್ಲುತ್ತದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಒಂದು ಪರಿಪೂರ್ಣ ಕ್ರೀಡಾ ಬೈಕ್ ವಿನ್ಯಾಸವನ್ನು ಮೈಗೂಡಿಸಿ ಬಂದಿರುವ ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕ್ ಮೊದಲ ಹಂತವಾಗಿ ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿ ಲಭ್ಯವಾಗಲಿದೆ. ಬೆಂಗಳೂರು ಹೊರತಾಗಿ ದೆಹಲಿ ಹಾಗೂ ಪುಣೆ ನಗರವನ್ನು ತಲುಪಿದೆ.

ಬ್ಯಾಟರಿ

ಬ್ಯಾಟರಿ

ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕ್, ಬ್ರಶ್ ಲೆಸ್ ಡಿಸಿ 6 ಕೆಡ್ಬ್ಲ್ಯು ಲಿಥಿಯಂ ಇಯಾನ್ ಬ್ಯಾಟರಿಂದ ನಿಯಂತ್ರಿಸಲ್ಪಡುತ್ತಿದ್ದು, 27 ಎನ್ ಎಂ ತಿರುಗುಬಲವನ್ನು ನೀಡುತ್ತದೆ.

ಚಾರ್ಜಿಂಗ್

ಚಾರ್ಜಿಂಗ್

ಶೇಕಡಾ 80ರಷ್ಟು ಚಾರ್ಜ್ ಮಾಡಿಸಿದ್ದಲ್ಲಿ ಟಾರ್ಕ್ ಬೈಕ್ ನಲ್ಲಿ 100 ಕೀ.ಮೀ. ವ್ಯಾಪ್ತಿಯನ್ನು ಸರಾಗವಾಗಿ ಸಾಗಬಹುದಾಗಿದೆ. ಇನ್ನು ಗಂಟೆಗೆ ಗರಿಷ್ಠ 100 ಕೀ.ಮೀ. ವೇಗವರ್ಧಿಸಿಕೊಳ್ಳಬಹುದಾಗಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇದರಲ್ಲಿ ಜೋಡಣೆ ಮಾಡಲಾಗಿರುವ ಲಿಥಿಯಂ ಇಯಾನ್ ಬ್ಯಾಟರಿಯು ಶೇಕಡಾ 80ರಷ್ಟು ಚಾರ್ಜ್ ಆಗಲು 60 ನಿಮಿಷಗಳು ತಗುಲಲಿದೆ. ಅದೇ ಹೊತ್ತಿಗೆ ಸಂಪೂರ್ಣವಾಗಿ ಚಾರ್ಜ್ ಆಗಲು ಎರಡು ತಾಸುಗಳಷ್ಟು ಸಮಯ ಬೇಕಾಗುವುದು.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬ್ರೇಕ್ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ತನ್ಮೂಲಕ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇನ್ನು ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಮೊನೊ ಸಸ್ಪೆನ್ಷನ್ ಜೋಡಣೆ ಮಾಡಲಾಗಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬ್ಯಾಟರಿ ಬಾಳ್ವಿಕೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಬಳಕೆಗೆ ಅನುಗುಣವಾಗಿ 80,000 ಕೀ.ಮೀ. ಗಳಿಂದ 1,00,000 ಕೀ.ಮೀ. ವರೆಗೆ ಬಾಳ್ವಿಕೆ ಬರಲಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಸಂಪೂರ್ಣ ಡಿಜಿಟಲ್ ಟಿಎಫ್ ಟಿ ಮಾನಿಟರ್, ಮೊಬೈಲ್ ಮಾನಿಟರ್ ಪೋರ್ಟ್, ಜಿಪಿಎಸ್ ಮತ್ತು ನೇವಿಗೇಷನ್, ಹೆಲ್ಮೆಟ್ ಸ್ಟೋರೆಜ್, ಮೊಬೈಲ್ ಆಪ್ ಸಪೋರ್ಟ್, ಆ್ಯಂಟಿ ಥೆಪ್ಟ್, ಜಿಯೋ ಫೆನ್ಸಿಂಗ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್ ಗಳಿಂದ ಕೂಡಿರುವ ನೂತನ ಟಾರ್ಕ್ ಎಲೆಕ್ಟ್ರಿಕ್ ಬೈಕ್ ವೈಶಿಷ್ಟ್ಯಗಳಿಂದ ತುಂಬಿ ತುಳುಕಲಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ನೂತನ ಟಾರ್ಕ್ ಇಟ್ಯೂಟಿವ್ ಸಿಗ್ನೇಚರ್ ಓಪರೇಟಿಂಗ್ ಸಿಸ್ಟಂ (TRIOS) ಇದರಲ್ಲಿರಲಿದೆ. ಇದು ಪ್ರತಿ ರೈಡಿಗ್ ವಿವರಗಳು, ಪವರ್ ಮ್ಯಾನೇಜ್ ಮೆಂಟ್, ರಿಯರ್ ಟೈಮ್ ಪವರ್ ವ್ಯಯ, ವ್ಯಾಪ್ತಿ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಒದಗಿಸಲಿದೆ.

ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟ್ರಯಾಸ್ ಇಂಟೆಲಿಜೆನ್ಸ್ ವ್ಯವಸ್ಥೆಯು ಸುಲಭವಾಗಿ ಚಾಲನಾ ಮೋಡ್ ಗಳನ್ನು ಕಸ್ಟಮೈಸ್ ಮಾಡಲು ನೆರವಾಗಲಿದೆ. ಒಂದೇ ಟಚ್ ನಲ್ಲಿ ಸ್ಪೋರ್ಟ್ ಮತ್ತು ಇಕೊ ಮೋಡ್ ಗಳನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
English summary
Tork Motorcycles Launch India’s First Electric Motorcycle T6X At Rs 1.25 Lakh
Story first published: Friday, September 30, 2016, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X