ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿದೆ.

By Praveen

ದೇಶದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿದೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಈ ಹಿಂದೆ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರವು, ಇದೀಗ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುತ್ತಿದೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಈಗಾಗಲೇ ಕೆಲವು ಸುಧಾರಿತ ಬೈಕ್ ಮತ್ತು ದುಬಾರಿ ಬೈಕ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಕೇಂದ್ರ ಸರ್ಕಾರ ಹೊಸ ನಿಮಯದಂತೆ 125-ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲೂ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ಮಾಡಲಿದೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಬೆಲೆಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಬೈಕ್ ಮಾದರಿಗಳಿಗೆ ಅನುಗುಣವಾಗಿ 5 ರಿಂದ 8 ಸಾವಿರ ರೂಪಾಯಿ ಹೆಚ್ಚುವರಿ ದರಗಳು ನಿಗದಿಯಾಗಿರುತ್ತವೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಿಗೆ ಅನುಕೂಲಕರವಾಗಲಿದ್ದು, 2018ರ ಏಪ್ರಿಲ್ 1ರಿಂದ ಎಬಿಎಸ್ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಹಿನ್ನೆಲೆ ಇನ್ಮುಂದೆ ಹೊಸ ಬೈಕ್ ಖರೀದಿದಾರರು ಪ್ರಸ್ತುತ ಮಾರುಕಟ್ಟೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಬೈಕ್ ಆಯ್ಕೆ ಮಾಡುವುದು ಸುರಕ್ಷೆ ದೃಷ್ಠಿಯಿಂದ ಒಳ್ಳೆಯದು.

Most Read Articles

Kannada
English summary
Read in Kannada about Central govt Will be Implementation ABS Technology in above 125 cc bikes.
Story first published: Saturday, July 29, 2017, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X